ಹಲಗೂರು ಗ್ರಾಪಂನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಣೆ

| Published : Nov 02 2024, 01:36 AM IST

ಹಲಗೂರು ಗ್ರಾಪಂನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಕಲೆ-ಸಾಹಿತ್ಯ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಪಂ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ಆರ್. ಶಶಿಕಲಾ ಶ್ರೀನಿವಾಸಚಾರಿ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ನವೆಂಬರ್1 ರಂದು ಇಡೀ ರಾಜ್ಯದಲ್ಲಿ ಎಲ್ಲ ಕನ್ನಡಿಗರು ಮರೆಯಲಾರದ ದಿನ. ಈ ತಿಂಗಳೆಲ್ಲ ನಾವು ಕನ್ನಡ ರಾಜ್ಯೋತ್ಸವ ಆಚರಿಸುವುದು ಸಾಮಾನ್ಯ. ನವೆಂಬರ್ ಮಾಸದ ಕನ್ನಡಿಗರಾಗದೆ ನಿತ್ಯ ತನು ಮನ ಕನ್ನಡಿಗರಾಗಿರ ಬೇಕು ಎಂದರು.

ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಕಲೆ-ಸಾಹಿತ್ಯ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಲತಾ ಮಹದೇವ್, ಪಂಚಾಯತ್ ಕಾರ್ಯದರ್ಶಿ ಶಿವಕುಮಾರ್, ಸದಸ್ಯರಾದ ಕೆ.ಎಂ. ನಾರಾಯಣ ಗೌಡ, ಶೈಲಜಾ ಹಾಗೂ ಸಿಬ್ಬಂದಿ ಆನಂದ್, ರಾಜಣ್ಣ, ಶಿವನಂಜು, ಮುಖಂಡರಾದ ಜೀವನ್ ಕುಮಾರ್, ಶ್ರೀನಿವಾಸ್ ಇತರರು ಇದ್ದರು.

ನಾಡಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಹಲಗೂರು:

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಗ್ರಾಮ ಆಡಳಿತ ಅಧಿಕಾರಿ ಲತಾ ಪೂಜೆ ಸಲ್ಲಿಸಿದರು.

ನಂತರ ದ್ವಜಾರೋಹಣ ನೆರವೇರಿಸಿ ರಾಷ್ಟ್ರಗೀತೆಯನ್ನು ಹಾಡಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರು ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಹೊಂದಿರಬೇಕು ಎಂದರು.

ಈ ವೇಳೆ ಗ್ರಾಮ ಆಡಳಿತ ಅಧಿಕಾರಿ ಸೋಮಣ್ಣ, ವಿಷಯ ನಿರ್ವಾಹಕ ವಿಶ್ವನಾಥ್ ಹಾದಿವನಿ ಹಾಗೂ ಸಿಬ್ಬಂದಿಗಳಾದ ಕೀರ್ತಿ ಪ್ರಸಾದ್, ಮಹದೇವಸ್ವಾಮಿ, ಶಿವಪ್ರಕಾಶ್, ಅನಿಲ್ ಕುಮಾರ್, ನವೀನ್ ಕುಮಾರ್, ಪುಟ್ಟಸ್ವಾಮಿ, ಸೇರಿದಂತೆ ಇತರರು ಇದ್ದರು.