ರಾಷ್ಟ್ರಮಟ್ಟದ 69ನೇ ಜಿಮ್ನಾಸ್ಟಿಕ್ ಸ್ಪರ್ಧೆಗೆ ತುಮಕೂರಿನ ಏಳು ಮಕ್ಕಳು ಆಯ್ಕೆಯಾಗಿದ್ದು, ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು ರಾಷ್ಟ್ರಮಟ್ಟದ 69ನೇ ಜಿಮ್ನಾಸ್ಟಿಕ್ ಸ್ಪರ್ಧೆಗೆ ತುಮಕೂರಿನ ಏಳು ಮಕ್ಕಳು ಆಯ್ಕೆಯಾಗಿದ್ದು, ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. 14 ವರ್ಷದ ವಯೋಮಿತಿಯೊಳಗಿನ ಈ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿ ಇದೇ ತಿಂಗಳು ಜನವರಿ 16 ಮತ್ತು 20 ರಂದು ಕೊಲ್ಕತ್ತಾದಲ್ಲಿ ನಡೆಯಲಿದೆ. ತುಮಕೂರಿನ 6 ಬಾಲಕರು ಮತ್ತು 1 ಬಾಲಕಿ ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಗೌರವ ತಂದಿದೆ. ಕುವೆಂಪು ಜಿಮ್ನಾಸ್ಟಿಕ್ ತರಬೇತಿ ಕೇಂದ್ರದ ಮಕ್ಕಳು ಈ ಬಾರಿ ರಾಷ್ಟ್ರಮಟ್ಟಕ್ಕೆ ಬಾಲಕಿಯರ ವಿಭಾಗದಲ್ಲಿ ಗುಣಪ್ರಿಯ, ಬಾಲಕರ ವಿಭಾಗದಲ್ಲಿ ಸಾಯಿದಕ್ಷ ಮೋಹನ್, ಲಿಖಿತ್ ಗೌಡ, ಆದಿತ್ಯ ರಾಜ್, ಸಾಗರ್, ಯಶವಂತ್ ಮತ್ತು ಮಿಥುನ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.