ಸೈಂಟ್ ಮಿಲಾಗ್ರಿಸ್ ಸಹಕಾರಿಗೆ 7 ಕೋಟಿ ರು. ನಿವ್ವಳ ಲಾಭ

| Published : Sep 20 2024, 01:33 AM IST

ಸಾರಾಂಶ

ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯು ಉತ್ತಮ ಪ್ರಗತಿ ಸಾಧಿಸಿದ್ದು, ಆರ್ಥಿಕ ವರ್ಷಾಂತ್ಯಕ್ಕೆ ಇದ್ದಂತೆ ಠೇವು ಸಂಗ್ರಹಣೆ ₹1222 ಕೋಟಿ ಆಗಿದ್ದು, ಸಾಲ ನೀಡಿಕೆ ₹1047 ಕೋಟಿ ಆಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಾದರಿ ಸಹಕಾರಿಯಾಗಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ₹7.05 ಕೋಟಿ ನಿವ್ವಳ ಲಾಭ ಗಳಿಸಿದೆ.

ನಗರದ ಸಹಕಾರಿಯ ಸಭಾಭವನದಲ್ಲಿ ನಡೆದ ಸಹಕಾರಿಯ 2023-24ರ 21 ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಬ್ಯಾಂಕಿನ ಪ್ರಗತಿಯ ಕುರಿತು ಮಾಹಿತಿ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಾರ್ಜ್‌ ಫರ್ನಾಂಡಿಸ್‌, ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯು ಉತ್ತಮ ಪ್ರಗತಿ ಸಾಧಿಸಿದ್ದು, ಆರ್ಥಿಕ ವರ್ಷಾಂತ್ಯಕ್ಕೆ ಇದ್ದಂತೆ ಠೇವು ಸಂಗ್ರಹಣೆ ₹1222 ಕೋಟಿ ಆಗಿದ್ದು, ಸಾಲ ನೀಡಿಕೆ ₹1047 ಕೋಟಿ ಆಗಿದೆ. ದುಡಿಯುವ ಬಂಡವಾಳ ₹1298 ಕೋಟಿ ಹೊಂದಿದೆ. ಒಟ್ಟು ₹7.05 ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಹಕಾರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಈಗಿನ ಯುವ ಜನರ ಬುದ್ಧಿವಂತಿಕೆ -ತ್ವರಿತಸೇವೆ -ವೇಗಕ್ಕೆ ಹೊಂದಿಕೊಳ್ಳುವಂತೆ ಮನೆಯಿಂದಲೇ ವ್ಯವಹರಿಸುವಂತಹ ಮೊಬೈಲ್ ಆ್ಯಪ್‌ ಅನ್ನು ನಮ್ಮ ಸದಸ್ಯರಿಗೆ ಶೀಘ್ರದಲ್ಲಿಯೇ ಪರಿಚಯಿಸಲಿದೆ. ಸಹಕಾರಿಯು ಗುಣಮಟ್ಟದ ಸೇವೆ ನೀಡುವಲ್ಲಿ ಇನ್ನೊಂದು ಹೊಸ ಮೈಲಿಗಲ್ಲನ್ನು ತೆರೆಯಲಿದ್ದು, ಇದಕ್ಕೆಲ್ಲ ಸಹಕಾರಿಯ ಸದಸ್ಯರ, ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಯ ಸಹಕಾರ ಮತ್ತು ಪ್ರೋತ್ಸಾಹವೇ ಕಾರಣ ಎಂದು ಶ್ಲಾಘಿಸಿದರು.

ಫಾ. ನಿರ್ಮಲ್ ಮಿರಾಂಡ, ಸಹಕಾರಿಯು ಈಗಾಗಲೇ 111 ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಸಿದ್ಧಿ ಪಡೆದು ರಾಜ್ಯದ ಮೂಲೆಮೂಲೆಗೂ ಮಿಲಾಗ್ರಿಸ್ ಸೇವೆಯನ್ನು ಪಸರಿಸುವಂತಾಗಲಿ ಎಂದು ಆಶೀರ್ವದಿಸಿದರು. ವ್ಯವಸ್ಥಾಪಕ ನಿರ್ದೇಶಕ ಡೆಮಿ ಫರ್ನಾಂಡಿಸ್‌ ಸ್ವಾಗತಿಸಿದರು. ಸಹಕಾರಿಯ ವರದಿಯನ್ನು ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ವರಿ ರಾಯ್ಕರ್‌ ಮಂಡಿಸಿದರು. ಲೆಕ್ಕಪತ್ರ ವ್ಯವಹಾರಗಳ ಕುರಿತು ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ವೆರ್ಣೇಕರ್ ವಿವರಿಸಿದರು. ಸಾಲ ವಸೂಲಾತಿ ಕಾನೂನು ಕ್ರಮಗಳ ಕುರಿತು ಸಾಲ ವಸೂಲಾತಿ ವ್ಯವಸ್ಥಾಪಕರಾದ ಅರುಣ ನಾಯ್ಕ ತಿಳಿಸಿದರು. ವಿನಯ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷೆ ರೋಸ್ಲಿನ್ ಫರ್ನಾಂಡಿಸ್, ಉಪಾಧ್ಯಕ್ಷ ಜಾಕೋಬ್ ಮೆಂಡೋನ್ಸಾ, ನಿರ್ದೇಶಕರು, ಮಾಜಿ ನಿರ್ದೇಶಕರು, ಶೇರುದಾರ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು. ಸಹಕಾರ ಸಂಘದ ಪ್ರಗತಿಗೆ ಸದಸ್ಯರ ಪ್ರೀತಿ, ವಿಶ್ವಾಸ ಕಾರಣ: ಎನ್.ಕೆ. ಭಟ್ಟ

ಯಲ್ಲಾಪುರ: ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಅತಿ ಹೆಚ್ಚು ಲಾಭವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಡೆದಿದ್ದೇವೆ. ಇದಕ್ಕೆ ನಮ್ಮ ರೈತರ ಮತ್ತು ಸಿಬ್ಬಂದಿಯ ಪ್ರೀತಿ, ವಿಶ್ವಾಸಗಳೇ ಕಾರಣವಾಗಿದೆ. ಯಾವುದೇ ಸಂಸ್ಥೆ ಬೆಳೆಯಲು ಸದಸ್ಯರು ಈ ಸಂಸ್ಥೆ ನಮ್ಮದೆಂಬ ಭಾವನೆಯಿಂದ ವ್ಯವಹರಿಸಿದಾಗ ಮಾತ್ರ ಸಾಧ್ಯ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು.ಸೆ. ೧೯ರಂದು ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ೫೯ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಮಾತನಾಡಿದರು.ತಾಲೂಕಿನ ಕೆಲವು ಅನುಕೂಲಸ್ಥ ರೈತರು ಬೇರೆ ಬೇರೆ ಊರುಗಳಿಂದ ಬರುವ ವ್ಯಾಪಾರಸ್ಥರಿಗೆ ನೇರವಾಗಿ ಅಡಕೆಯನ್ನು ಮಾರಾಟ ಮಾಡುತ್ತಿದ್ದಾರೆ. ಇದು ರೈತರ ಹಿತದೃಷ್ಟಿಯಿಂದಲೂ, ಸಂಸ್ಥೆಯ ಹಿತದೃಷ್ಟಿಯಿಂದಲೂ ಒಳಿತಲ್ಲ. ಮುಂದೊಮ್ಮೆ ಆ ರೈತರಿಗೆ ಕಷ್ಟ ಬಂದಾಗ ಯಾವ ಸಂಸ್ಥೆಯಿಂದಲೂ ಸಹಾಯ ನೀಡಲಾಗದು ಎಂದರು.ನಂತರ ನಡೆದ ಚರ್ಚೆಯಲ್ಲಿ ಆರ್.ವಿ. ಭಟ್ಟ, ಗಣೇಶ ಬೆಳಸೂರು, ಯು.ಕೆ. ಭಟ್ಟ ಇಡಗುಂದಿ, ಎನ್.ವಿ. ಭಟ್ಟ ದೇವಸ, ಯು.ಐ. ಭಾಗ್ವತ ಕಳಚೆ, ಆರ್.ಎಸ್. ಭಟ್ಟ ಉಪಳೇಶ್ವರ, ಎಂ.ಆರ್. ಹೆಗಡೆ ತಾರೇಹಳ್ಳಿ, ನಾರಾಯಣ ಭಟ್ಟ ಬಟ್ಲಗುಂಡಿ, ಗಜಾನನ ಭಟ್ಟ ಕಳಚೆ, ನರಸಿಂಹ ಭಟ್ಟ ಸಾಲೇಮಕ್ಕಿ, ವೆಂಕಟರಮಣ ಭಟ್ಟ ಕಾಶಿಮನೆ, ಆರ್.ಎಲ್. ಭಟ್ಟ, ರವಿ ಭಟ್ಟ ಬರಗದ್ದೆ, ನಾಗೇಂದ್ರ ಭಟ್ಟ ಮಾಳಕೊಪ್ಪ, ಮುಂತಾದವರು ಪಾಲ್ಗೊಂಡಿದ್ದರು.

ಉಪಾಧ್ಯಕ್ಷ ನರಸಿಂಹ ಕೋಣೆಮನೆ ಸ್ವಾಗತಿಸಿದರು. ಉಮಾಶಂಕರ ಹೆಗಡೆ ನಿರ್ವಹಿಸಿದರು. ವೆಂಕಟರಮಣ ಬೆಳ್ಳಿ ವಂದಿಸಿದರು.