ಇ-ಖಾತೆ ಆಂದೋಲನದಲ್ಲಿ 7 ಲಕ್ಷ ರು. ತೆರಿಗೆ ಸಂಗ್ರಹ

| Published : Dec 07 2024, 12:33 AM IST

ಸಾರಾಂಶ

ಕನಕಪುರ: ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನೇತೃತ್ವದಲ್ಲಿ ಆಯೋಜಿಸಿದ್ದ ಮೂರು ದಿನಗಳ ಇ-ಖಾತಾ ಆಂದೋಲನದಲ್ಲಿ ಅರ್ಜಿ ಸಲ್ಲಿಸಿದ್ದ 72 ಸ್ವತ್ತುಗಳಿಗೆ ನಗರಸಭೆ ಇ-ಖಾತೆಗಳನ್ನು ಆಸ್ತಿ ಮಾಲಿಕರಿಗೆ ವಿತರಣೆ ಮಾಡಲಾಯಿತು.

ಕನಕಪುರ: ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನೇತೃತ್ವದಲ್ಲಿ ಆಯೋಜಿಸಿದ್ದ ಮೂರು ದಿನಗಳ ಇ-ಖಾತಾ ಆಂದೋಲನದಲ್ಲಿ ಅರ್ಜಿ ಸಲ್ಲಿಸಿದ್ದ 72 ಸ್ವತ್ತುಗಳಿಗೆ ನಗರಸಭೆ ಇ-ಖಾತೆಗಳನ್ನು ಆಸ್ತಿ ಮಾಲಿಕರಿಗೆ ವಿತರಣೆ ಮಾಡಲಾಯಿತು.

ನಗರಸಭೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಹಮ್ಮಿಕೊಂಡಿದ್ದ ಇ-ಖಾತಾ ಆಂದೋಲನದಲ್ಲಿ ಮಳಗಾಳು ಮತ್ತು ಕೋಟೆ ವಾರ್ಡುಗಳ ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ತೆರಿಗೆ ಪಾವತಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಗಳನ್ನು ಮಾಡಿಸಿಕೊಂಡಿದ್ದು, ಇ-ಖಾತಾ ಆಂದೋಲನದಲ್ಲಿ 7 ಲಕ್ಷಕ್ಕೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಇ-ಖಾತೆಗಳನ್ನು ವಿತರಿಸಿ ಮಾತನಾಡಿ, ಕೆಲವರು ಅಗತ್ಯ ಬಿದ್ದಾಗ ಇ-ಖಾತೆಗೆ ಅರ್ಜಿ ಸಲ್ಲಿಸಿದ್ದು ಸಮಯಕ್ಕೆ ಸರಿಯಾಗಿ ಇ-ಖಾತೆ ಸಿಗದಿದ್ದರೆ ಕಚೇರಿಗೆ ಬಂದು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ನಗರಸಭೆ ಇ-ಖಾತಾ ಆಂದೋಲನ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಆಂದೋಲನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಆಂದೋಲನದಲ್ಲಿ ನಗರಸಭೆ ಪೌರಾಯುಕ್ತ ಎಂ.ಎಸ್.ಮಹದೇವ್, ಉಪಾಧ್ಯಕ್ಷ ಸೈಯದ್ ಸಾಧಿಕ್, ಸದಸ್ಯರಾದ ವಿಜಯಕುಮಾರ್, ಕಾಂತರಾಜು, ರಾಮದಾಸ್, ಹೇಮರಾಜು ಸೇರಿದಂತೆ ಅಧಿಕಾರಿಗಳು, ನೌಕರರು, ಸಿಬ್ಬಂದಿ ಉಪಸ್ಥಿತರಿದ್ದರು.

ಬಾಕ್ಸ್...............

ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಾರ್ವಜನಿಕರು ನಗರಸಭೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇ-ಖಾತಾ ಆಂದೋಲನ ಹಮ್ಮಿಕೊಂಡಿದ್ದೆವೆ. ಮೊದಲ ಪ್ರಯತ್ನದಲ್ಲೇ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಉಳಿದ ವಾರ್ಡುಗಳಲ್ಲೂ ಇ-ಖಾತಾ ಆಂದೋಲನ ನಡೆಸುತ್ತೇವೆ. ನಗರ ವಾಸಿಗಳು ತಮ್ಮ ಸ್ವತ್ತುಗಳಿಗೆ ಅಗತ್ಯ ದಾಖಲೆ ಒದಗಿಸಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟಿ ಸ್ಥಳದಲ್ಲೇ ಇ-ಖಾತೆ ಪಡೆದುಕೊಳ್ಳಬಹುದು.

-ಮಹದೇವ್, ಪೌರಾಯುಕ್ತ, ನಗರಸಭೆ

ಕೆ ಕೆ ಪಿ ಸುದ್ದಿ 02:

ಕನಕಪುರ ನಗರಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಇ-ಖಾತೆಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೌರಾಯುಕ್ತ ಮಹದೇವ್, ಉಪಾಧ್ಯಕ್ಷ ಸೈಯದ್ ಸಾಧಿಕ್, ಸದಸ್ಯರಾದ ವಿಜಯಕುಮಾರ್, ಕಾಂತರಾಜು, ರಾಮದಾಸ್, ಹೇಮರಾಜು ಇತರರಿದ್ದರು.