ಸಾರಾಂಶ
ಭಾರತದ ಸ್ವಾತಂತ್ರ್ಯದ ಸಮಯದಲ್ಲಿ 545 ಪ್ರಾಂತ್ಯಗಳ ವಿಲೀನಕ್ಕೆ ಸಹಿ ಹಾಕಿದ ಮೊದಲ ರಾಜ ಜಯ ಚಾಮರಾಜ ಒಡೆಯರ್
ಕನ್ನಡಪ್ರಭ ವಾರ್ತೆ ಮೈಸೂರು
ಸ್ವಾತಂತ್ರ್ಯ ಪೂರ್ವ ಭಾರತದ ಏಳಿಗೆಗೆ ಮೈಸೂರು ಮಹಾರಾಜರ ಕೊಡುಗೆ ಅನನ್ಯ. ಹೀಗಾಗಿ, ಮೈಸೂರಿನ ಈ ಮಹಾರಾಜರಿಗೆ ಪ್ರತಿದಿನ ಗೌರವ ಸಲ್ಲಿಸುವುದು ಎಲ್ಲಾ ಮೈಸೂರಿಗರ ಕರ್ತವ್ಯವಾಗಿದೆ ಎಂದು ಇತಿಹಾಸಕಾರ ಧರ್ಮೇಂದ್ರ ಕುಮಾರ್ ತಿಳಿಸಿದರು.ಬೋಗಾದಿಯ ಹರಿ ವಿದ್ಯಾಲಯದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯದ ಸಮಯದಲ್ಲಿ 545 ಪ್ರಾಂತ್ಯಗಳ ವಿಲೀನಕ್ಕೆ ಸಹಿ ಹಾಕಿದ ಮೊದಲ ರಾಜ ಜಯ ಚಾಮರಾಜ ಒಡೆಯರ್ ಎಂದು ಸ್ಮರಿಸಿದರು.
ಹಾಗೆಯೇ ಮಹಾತ್ಮ ಗಾಂಧೀಜಿ, ಭಾರತದ ಸ್ವಾತಂತ್ರ್ಯದ ಕಡೆಗೆ ಅನೇಕ ವೀರರನ್ನು ಮುನ್ನಡೆಸಿದರು ಎಂದರು.ಹರಿ ವಿದ್ಯಾಲಯದ ಅಧ್ಯಕ್ಷ ಶ್ರೀನಿವಾಸ ಹೊಸಮನೆ, ಕಾರ್ಯದರ್ಶಿ ಎಚ್.ಆರ್. ಭಗವಾನ್, ಶೈಕ್ಷಣಿಕ ನಿರ್ದೇಶಕ ಪ್ರೊ.ಕೆ.ವಿ. ಸತ್ಯನ್, ಶಾಲೆಯ ಶೈಕ್ಷಣಿಕ ಸಂಯೋಜಕ ಜನಾರ್ದನ್, ಹರಿ ವಿದ್ಯಾಲಯ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಬ್ರಿಜೇಶ್ ಪಟೇಲ್, ವಿಜ್ಞಾನ ವಿಭಾಗದ ಶೈಕ್ಷಣಿಕ ಸಂಯೋಜಕ ಭಾರ್ಗವ್ ರಾಮು, ಶಿಕ್ಷಕರು, ಪೋಷಕರು ಇದ್ದರು.