ಕರವೇಯಿಂದ ಸ್ವಾತಂತ್ರ್ಯ ದಿನಾಚರಣೆ

| Published : Aug 16 2024, 01:02 AM IST

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಟೌನ್ ಘಟಕ ವತಿಯಿಂದ 78ನೇ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಟೌನ್ ಘಟಕ ವತಿಯಿಂದ 78ನೇ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಟೌನ್ ಪಿಎಸ್ಐ ವರ್ಷ ಅವರು ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಅನೇಕ ಮಹನೀಯರ ಹೋರಾಟ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದರು.

ಎಲ್ಲರೂ ಸಹಬಾಳ್ವೆ, ಸಮಾನತೆ ಜೀವನ ನಡೆಸುವ ಅವಕಾಶ ನಮ್ಮೆಲ್ಲರಿಗೂ ಸಿಕ್ಕಿದೆ. ಸಂವಿಧಾನದಡಿಯಲ್ಲಿ ಎಲ್ಲರೂ ಸಮಾನ ಬದುಕು ನಡೆಸುವ ಮೂಲಕ ಸ್ವಾತಂತ್ರ್ಯ ಉಳಿವಿಗೆ ಶ್ರಮಿಸಬೇಕಿದೆ ಎಂದು ಅವರು, ಇಂದಿನ ಯುವಕರು ಕಾನೂನು ಪರಿಪಾಲನೆ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ತತ್ವ, ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಪಿಎಸ್ಐ ವರ್ಷ, ನಗರಸಭೆ ಸದಸ್ಯ ಮಂಜುನಾಥ್, ರೈತ ಮುಖಂಡ ಅಣಗಳ್ಳಿ ಬಸವರಾಜು, ಕರವೇ ತಾಲೂಕು ಘಟಕದ ಸಮೀಷರೀಪ್, ಮುಳ್ಳೂರು ಮಂಜು, ನಂದ, ಇಮಾದಾದ್ ಅವರಿಗೆ ಟೌನ್ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ) ನಗರ ಘಟಕ ಅಧ್ಯಕ್ಷ ಜಗದೀಶ್ ಶಾಸ್ತ್ರೀ.ಎಂ, ಪ್ರಧಾನ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಯೂನುಸ್, ಪತ್ರಿಕೆ ಸಲಹೆಗಾರರು ಸಿದ್ದರಾಜು ಹಿಂದ್ವಾಡಿ, ಕಾರ್ಯಾಧ್ಯಕ್ಷ ಮಹಮ್ಮದ್ ಅಬ್ಜಲ್(ಅಜ್ಜೂ), ಗೌರವಧ್ಯಕ್ಷ ರಂಗಸ್ವಾಮಿ, ಉಸ್ತುವಾರಿ ಅಧ್ಯಕ್ಷರು ಮೊಹಮ್ಮದ್ ಲುತುಫುಲ್ಲಾ ( ಸಮೀರ್), ಸಂಚಾಲಕ ಅಶ್ವಥ್, ಸಹಾ ಕಾರ್ಯದರ್ಶಿ ಭೂಪತಿ (ಅಪ್ಪು), ಮಹೇಶ್, ವಿಜಯ್ ಮತ್ತಿತರರಿದ್ದರು.