ಪ್ರತಿಯೊಬ್ಬರ ತಪಾಸಣೆ- ಪೊಲೀಸರಿಂದ ಬಿಗಿ ಭದ್ರತೆ

| Published : Aug 16 2025, 02:01 AM IST

ಸಾರಾಂಶ

ಮೈದಾನ ಸುತ್ತಾಮುತ್ತಾ ನೂರಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಸೆಲ್ಫಿ ಮೂಡ್. ಚಿತ್ರ- ಅನುರಾಗ್ ಬಸವರಾಜ್

----ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತವು ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ನಗರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಬನ್ನಿಮಂಟಪ ಮೈದಾನಕ್ಕೆ ಪ್ರವೇಶಿಸಿದ ಪ್ರತಿಯೊಬ್ಬರನ್ನು ಪೊಲೀಸರು ಪರಿಶೀಲಿಸಿದರು. ಅಲ್ಲದೆ, ಸಾರ್ವಜನಿಕರ ಬ್ಯಾಗ್ ಗಳನ್ನು ಸಹ ಪರಿಶೀಲಿಸಿದ ಬಳಿಕವೇ ಒಳಗೆ ತೆರಳಲು ಅವಕಾಶ ಕಲ್ಪಿಸಿದರು.

ಮೈದಾನ ಸುತ್ತಾಮುತ್ತಾ ನೂರಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಂಚಾರ ಪೊಲೀಸರು ಅಲ್ಲಲ್ಲಿ ಸಂಚಾರ ದಟ್ಟಣೆ ನಿರ್ವಹಿಸುತ್ತಿದ್ದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.

ಸರ್ಕಾರಿ ನೌಕರರ ಗೈರು

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತ್ರ ಪಾಲ್ಗೊಂಡಿದ್ದರು. ಆದರೆ, ಸರ್ಕಾರಿ ನೌಕರರು ಹಲವರು ಗೈರಾಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರು ಮೈದಾನಕ್ಕೆ ಆಗಮಿಸಿದ್ದರು. ಉಳಿದಂತೆ ಮೈದಾನದ ಅರ್ಧ ಭಾಗ ಕೂಡ ಜನರ ಇರಲಿಲ್ಲ. ಅರ್ಧ ಭಾಗಕ್ಕೂ ಹೆಚ್ಚಿನ ಜಾಗವು ಖಾಲಿ ಖಾಲಿಯಾಗಿತ್ತು.