ಸೋಮವಾರಪೇಟೆ: 7ನೇ ವಾರ್ಷಿಕ ಮಹಾಪೂಜೆ ಸಂಪನ್ನ

| Published : Apr 22 2024, 02:22 AM IST

ಸಾರಾಂಶ

ಶ್ರೀಮುನೇಶ್ವರ ಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ 7ನೇ ವಾರ್ಷಿಕ ಮಹಾಪೂಜೆ ನಡೆಯಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಮಹದೇಶ್ವರ ಬ್ಲಾಕ್‍ನ ಶ್ರೀ ಮಹದೇಶ್ವರ ಭಕ್ತವೃಂದದ ವತಿಯಿಂದ ಶನಿವಾರ ಶ್ರೀ ಮುನೇಶ್ವರ ಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ 7ನೇ ವಾರ್ಷಿಕ ಮಹಾಪೂಜೆ ನಡೆಯಿತು.

ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ 8ಕ್ಕೆ ಮಹಾಗಣಪತಿ ಹೋಮ, 10ಕ್ಕೆ ದುರ್ಗಾ ಹೋಮ ಹಾಗೂ ಕಳಸ ಪ್ರತಿಷ್ಠಾಪನೆ, 11. 30ಕ್ಕೆ ನವ ಕಳಸ ಪ್ರತಿಷ್ಠಾಪನೆ, ಕಳಶಾಭಿಷೇಕ, ಸಂಜೆ 5ಕ್ಕೆ ಪಂಚ ದುರ್ಗಾದೀಪ ನಮಸ್ಕಾರ, 7. 30ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಪೂಜಾ ಸಂದರ್ಭ ಸಮಿತಿ ಅಧ್ಯಕ್ಷ ಸುರೇಶ್ ಬಾಬು, ಗೌರವಾಧ್ಯಕ್ಷ ಡಿ.ಕೆ. ದೊರೆ, ಕಾರ್ಯದರ್ಶಿ ವಿ.ಸಿ. ಲೋಕೇಶ್, ಪ್ರಮುಖರಾದ ಬಿ.ಬಿ. ಮೋಹನ್, ಎನ್.ಪಿ. ಗೋವಿಂದ, ಆರ್.ಸಿ. ಅಣ್ಣಪ್ಪ, ತಿಮ್ಮಶೆಟ್ಟಿ ಇದ್ದರು.