ಪೆಟ್ರೋಲ್ ಬಂಕ್‌ನಲ್ಲಿ 8 ಅಡಿ ಹೆಬ್ಬಾವು ಪತ್ತೆ

| Published : Jan 09 2024, 02:00 AM IST

ಸಾರಾಂಶ

ಭದ್ರಾವತಿ ನಗರದ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಹೆಬ್ಬಾವು ಕಾಣಿಸಿಕೊಂಡು ಸಿಬ್ಬಂದಿ ಹಾಗೂ ಸ್ಥಳೀಯರನ್ನು ದಂಗುಬಡಿಸಿತ್ತು. ಈ ಹೆಬ್ಬಾವ್ನನು ಸ್ನೇಕ್ ಅಪ್ಪು ಮತ್ತು ತಂಡದವರು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.

ಭದ್ರಾವತಿ: ನಗರದ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಹೆಬ್ಬಾವನ್ನ ಸ್ನೇಕ್ ಅಪ್ಪು ಮತ್ತು ತಂಡದವರು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೆಟ್ರೋಲ್ ಬಂಕ್ ಸಿಬ್ಬಂದಿ ಕರೆ ಮಾಡಿದ ತಕ್ಷಣ ಉಜ್ಜನಿಪುರ ನಿವಾಸಿ ಸ್ನೇಕ್ ಅಪ್ಪು ಮತ್ತು ತಂಡದವರು ಸ್ಥಳಕ್ಕೆ ಆಗಮಿಸಿದರು. ಸುಮಾರು 8 ಅಡಿ ಉದ್ದ ಹಾಗೂ 13.5 ಕೆ.ಜಿ ತೂಕದ ಹೆಬ್ಬಾವು ರಕ್ಷಿಸಿದ್ದಾರೆ. ನಂತರ ಸುರಕ್ಷಿತವಾಗಿ ಉಂಬ್ಳೆಬೈಲು ಅರಣ್ಯಕ್ಕೆ ಬಿಡಲಾಗಿದೆ. ಹೆಬ್ಬಾವು ಸೆರೆಹಿಡಿದಿದ್ದರಿಂದ ಪೆಟ್ರೊಲ್ ಬಂಕ್ ಸಿಬ್ಬಂದಿ, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

- - -

-ಡಿ8-ಬಿಡಿವಿಟಿ4:

ಭದ್ರಾವತಿ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಹೆಬ್ಬಾವನ್ನು ಸ್ನೇಕ್ ಅಪ್ಪು ಮತ್ತು ತಂಡದವರು ಸುರಕ್ಷಿತವಾಗಿ ಸೆರೆಹಿಡಿದರು.