ಲೋಕ ಅದಾಲತ್‌ನಲ್ಲಿ ಒಂದಾದ 8 ಜೋಡಿ

| Published : Sep 15 2024, 01:59 AM IST

ಲೋಕ ಅದಾಲತ್‌ನಲ್ಲಿ ಒಂದಾದ 8 ಜೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು. ಎಂಟು ಜೋಡಿಗಳನ್ನು ಒಂದು ಮಾಡಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಜರುಗಿತು. ಎಂಟು ಜೋಡಿಗಳನ್ನು ಒಂದು ಮಾಡಿದ್ದು ವಿಶೇಷವಾಗಿತ್ತು.ಒಟ್ಟು 9079 ಬಾಕಿ ಪ್ರಕರಣಗಳಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ ಮರಣ ಮತ್ತು ಕ್ರಿಮಿನಲ್ ಕೇಸ್ ಸೇರಿ 1494 ಪ್ರಕರಣಗಳನ್ನು ರಾಜೀ ಮಾಡಿಸಲಾಯಿತು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 26 ಪ್ರಕರಣಗಳು ಇತ್ಯರ್ಥಗೊಂಡವು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೋಟಾರು ವಾಹನ 51, ವೈವಾಹಿಕ ಪ್ರಕರಣ 8, 34 ಬ್ಯಾಂಕ್‌ ಪ್ರಕರಣ ಇತ್ಯರ್ಥವಾಗಿವೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 14 ಚೆಕ್ ಬೌನ್ಸ್ ,1 ಕೌಟುಂಬಿಕ ದೌರ್ಜನ್ಯ, 15 ಜನನ ಮರಣ, 442 ಕ್ರೀಮಿನಲ್ ಕೇಸಸ್ ಇತರ 4 ಪ್ರಕರಣ ಇತ್ಯರ್ಥಗೊಂಡಿವೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 7 ಚೆಕ್ ಬೌನ್ಸ್‌, 5 ಪ್ರಕರಣಗಳು ಇತರ್ಥವಾಗಿದ್ದು, ಕೌಟುಂಬಿಕ ದೌರ್ಜನ್ಯ 19, ಜನನ ಮರಣ 992, ಕ್ರಿಮಿನಲ್ ಕೇಸ್ ಇತರ 13 ಪ್ರಕರಣಗಳು ಇತರ್ಥವಾಗಿದ್ದು, ನಾಲ್ಕು ನ್ಯಾಯಾಲಯಗಳು ಸೇರಿ ಲೋಕ ಅದಾಲತ್‌ನಲ್ಲಿ ಒಟ್ಟು 1042 ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು ₹ 7 ಕೋಟಿ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲಾಯಿತು.

ವಿವಿಧ ವಿಷಯಗಳಲ್ಲಿ ದೂರವಾಗಿದ್ದ 8 ದಂಪತಿಗಳನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಲಾಯಿತು. ಈ ಸಂದರ್ಭ ದಂಪತಿ ಪರಸ್ಪರ ಹೂ ಮಾಲೆ ಹಾಕಿ ಸಂಭ್ರಮಪಟ್ಟರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ, ಪ್ರಭಾರಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ ನೇತೃತ್ವ ವಹಿಸಿದ್ದರು.

ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಉಪಾಧ್ಯಕ್ಷ ಪರಸಪ್ಪ ನಾಯಕ, ಸದಸ್ಯರು ಮತ್ತು ಸರ್ವ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿದ್ದರು.