ಸಾರಾಂಶ
2024- 25ನೇ ಶೈಕ್ಷಣಿಕ ಸಾಲಿನಲ್ಲಿ ದೇಶದ ವಿವಿಧ ಅಖಿಲ ಭಾರತ ಸೈನಿಕ ಶಾಲೆಗಳಿಗೆ ತಾಲೂಕಿನ ಕತಕನಹಳ್ಳಿಯಲ್ಲಿರುವ ಮಾತೋಶ್ರೀ ಶಂಕ್ರೆಮ್ಮ ತಾಯಿ ಪ್ರಾಥಮಿಕ ಶಾಲೆಯ 5ನೇ ತರಗತಿಯ ಒಟ್ಟು 8 ವಿದ್ಯಾರ್ಥಿಗಳು 6ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
2024- 25ನೇ ಶೈಕ್ಷಣಿಕ ಸಾಲಿನಲ್ಲಿ ದೇಶದ ವಿವಿಧ ಅಖಿಲ ಭಾರತ ಸೈನಿಕ ಶಾಲೆಗಳಿಗೆ ತಾಲೂಕಿನ ಕತಕನಹಳ್ಳಿಯಲ್ಲಿರುವ ಮಾತೋಶ್ರೀ ಶಂಕ್ರೆಮ್ಮ ತಾಯಿ ಪ್ರಾಥಮಿಕ ಶಾಲೆಯ 5ನೇ ತರಗತಿಯ ಒಟ್ಟು 8 ವಿದ್ಯಾರ್ಥಿಗಳು 6ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.ಮಹಾರಾಷ್ಟ್ರದ ಕುರ್ಡುವಾಡಿ ಸೈನಿಕ ಶಾಲೆಗೆ ಆದರ್ಶ ನಾಗೋಡ, ಸೃಷ್ಟಿ ಬೀಳಗಿ, ರಾಜಸ್ಥಾನದ ಜೈಪೂರ ಸೈನಿಕ ಶಾಲೆಗೆ ಶಿವರಾಜ ಸೋಲಾಪೂರ, ಸ್ಪಂದನಾ ಸೋಲಾಪೂರ, ವೇದಾಂತ ಸಿಂಧೆ, ಹರಿಯಾಣದ ಕುರುಕ್ಷೇತ್ರ ಸೈನಿಕ ಶಾಲೆಗೆ ಭರಮಣ್ಣ ಬನಗೊಂಡ, ಛತ್ತಿಘಡದ ನಂದಗಾಂವ್ ಸೈನಿಕ ಶಾಲೆಗೆ ಬಸಮ್ಮ ಬಿರಾದಾರ, ಕೇರಳದ ಮಾವೆಲಿಕ್ಕರ ಸೈನಿಕ ಶಾಲೆಗೆ ರಾಜೇಶ್ವರಿ ಬಂಡಿ, ಈ ವಿದ್ಯಾರ್ಥಿಗಳು ದೇಶದ ವಿವಿಧ ಅಖಿಲ ಭಾರತ ಸೈನಿಕ ಶಾಲೆಗಳಿಗೆ ಆಯ್ಕೆಯಾಗಿಯಾಗಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಶಿವಯ್ಯ ಮಹಾಸ್ವಾಮೀಜಿಯವರ ಆಶೀರ್ವಾದೊಂದಿಗೆ ಶ್ರೀಗುರು ಚಕ್ರವರ್ತಿ ಸದಾಶಿವ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ, ಆಡಳಿತ ಮಂಡಳಿ ಸದಸ್ಯರು, ಕೋಚಿಂಗ್ ವಿಭಾಗದ ಮೇಲ್ವಿಚಾರಕ ಹೇಮಂತ ನಾಯಕ, ಶಾಲೆಯ ಮುಖ್ಯಗುರು ಅರವಿಂದ ಪವಾರ, ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.