ಶೇ. 80ರಷ್ಟು ಕಾಮಗಾರಿ ಮೂಲಕ ಕ್ಷೇತ್ರದ ಅಭಿವೃದ್ಧಿ: ಶಾಸಕ ನೇಮಿರಾಜ್‌ ನಾಯ್ಕ

| Published : May 14 2025, 12:21 AM IST

ಶೇ. 80ರಷ್ಟು ಕಾಮಗಾರಿ ಮೂಲಕ ಕ್ಷೇತ್ರದ ಅಭಿವೃದ್ಧಿ: ಶಾಸಕ ನೇಮಿರಾಜ್‌ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಅಧಿಕಾರವಧಿಯಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 80ರಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ನನ್ನ ಅಧಿಕಾರವಧಿಯಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 80ರಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮಿರಾಜ್‌ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಭಾನುವಾರ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಜನರಿಗೆ ಅಗತ್ಯವಾಗಿರುವ ವಿವಿಧ ಕಾಮಗಾರಿಗಳನ್ನುತಕ್ಷಣವೇ ಅಭಿವೃದ್ಧಿಪಡಿಸಲಾಗುವುದು. ಜನರ ಬೇಡಿಕೆಗಳ ಅನುಗುಣವಾಗಿ ಕಾಮಗಾರಿ ಕೈಗೊಂಡು ಕ್ಷೇತ್ರವನ್ನು ಅಭಿವೃದ್ದಿ ಪಡಿಸಲಾಗುವುದು. ಪ್ರತಿಯೊಂದು ಊರಿಗೂ ಮತ್ತು ಪ್ರತಿಯೊಂದು ವಾರ್ಡುಗಳಿಗೂ ಈ ಹಿಂದೆ ಎಂದೂ ಕಾಣದಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

2024-25ನೇ ಸಾಲಿನ ಕೆಕೆಆರ್‌ಡಿಬಿ ಮತ್ತು ಡಿಎಂಎಫ್ ಅಭಿವೃದ್ದಿ ಯೋಜನೆ ಅಡಿಯಲ್ಲಿ ಮರಿಯಮ್ಮನಹಳ್ಳಿ ಪಟ್ಟಣದ 18ರಲ್ಲಿ 16 ವಾರ್ಡ್‌ಗಳಲ್ಲ ಸಿಸಿ ಚಂರಡಿ ಮತ್ತು ಸಿಸಿ ರಸ್ತೆ ಹಾಗೂ ಶಾಲಾ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜೆಯನ್ನು ಅಂದಾಜು ₹9 ಕೋಟಿ ವೆಚ್ಚದಲ್ಲಿ ಭಾನುವಾರ ಭೂಮಿ ಪೂಜೆ ಕೈಗೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳು ಗುಣಮಟ್ಟದ ಕಾಮಗಾರಿಗಳನ್ನಾಗಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿ ಕಲಾವಿದರ ತವರೂರಾಗಿದ್ದು, ಇಲ್ಲಿ ವ್ಯವಸ್ಥಿತವಾದ ರಂಗಮಂದಿರ ವಿಲ್ಲ. ಈ ಹಿಂದೆ ನಾನು ಶಾಸಕನಾಗಿದ್ದಾಗ ರಂಗಮಂದಿರದ ಮೇಲ್ಚಾವಣಿ ನಿರ್ಮಿಸಿಕೊಟ್ಟಿದ್ದೆ. ಮಳೆಗಾಲದಲ್ಲಿ ಮಳೆ ಬಂದರೆ ನಾಟಕ ನಿಂತು ಹೋಗುತ್ತದೆ. ಅನೇಕ ಕಲಾವಿದರು ಈ ಬಗ್ಗೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ₹ 50 ಲಕ್ಷ ವೆಚ್ಚದಲ್ಲಿ ರಂಗಮಂದಿರದ ಮುಂದೆ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳದಲ್ಲಿ ಶೀಟ್‌ ಮೇಲ್ಚಾವಣಿ ನಿರ್ಮಿಸಿಕೊಡಲಾಗುವುದು. ಮಳೆಗಾಲದಲ್ಲಿಯೂ ನಾಟಕವಾಡಲು ಅನುಕೂಲವಾಗುವಂತೆ ರಂಗಮಂದಿರದ ಮುಂದಿರುವ ಪ್ರದೇಶಕ್ಕೆ ಶೀಟಿನ ಮೇಲ್ಚಾವಣೆ ನಿರ್ಮಿಸಲಾಗುವುದು ಎಂದು ಹೇಳಿದರು.

ಇನ್ನು 10 ದಿನದಲ್ಲಿ ಕ್ಷೇತ್ರದಲ್ಲಿ ₹24 ಕೋಟಿ ವೆಚ್ಚದಲ್ಲಿ ಚೆಕ್‌ ಡ್ಯಾಂಗಳ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಹಮ್ಮಿಕೊಳ್ಳಲಾಗುವುದು. ಕೆರೆಗಳ ಕಾಲುವೆಗಳ ದುರಸ್ತಿ, ಮಾಲ್ವಿ ಚಲಾಶದ ಕಾಲುವೆಗಳ ದುರಸ್ತಿಗೆ ₹2 ಕೋಟಿ ವೆಚ್ಚದಲ್ಲಿ ಗೇಟ್‌ ರಿಪೇರಿ ಮತ್ತು ಕಾಲುವೆಗಳ ದುರಸ್ತಿಗೊಳಿಸುವ ಕಾಮಗಾರಿ ಅತೀ ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಹಗರಿಬೊಮ್ಮನಹಳ್ಳಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಅವರ ಕಂಚಿನ ಪುತ್ಥಳಿ ನಿರ್ಮಾಣ, ₹50 ಲಕ್ಷ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ, ₹50 ಲಕ್ಷ ವೆಚ್ಚದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಕಂಚಿನ ಪತ್ಥಳಿ ನಿರ್ಮಿಸಲಾಗುವುದು. ಬಸವೇಶ್ವರ ಪುತ್ಥಳಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.

ಜೆಡಿಎಸ್‌ ಕ್ಷೇತ್ರ ಅಧ್ಯಕ್ಷ ವೈ. ಮಲ್ಲಿಕಾರ್ಜುನಪ್ಪ, ಸ್ಥಳೀಯ ಮುಖಂಡರಾದ ಗರಗ ಪ್ರಕಾಶ್‌ ಪೂಜಾರ್, ಗುಂಡಸ್ವಾಮಿ, ಎಂ. ವೆಂಕಟೇಶ್‌, ಕೆ.ರಘುವೀರ, ಎಲೆಗಾರ್‌ ಮಂಜುನಾಥ, ಚಿದ್ರಿ ಸತೀಶ್‌, ಸಜ್ಜದ್‌ ವಿಶ್ವನಾಥ, ಈ. ಎರ್ರಿಸ್ವಾಮಿ, ಎಸ್‌. ನವೀನ್‌ ಕುಮಾರ್‌, ನಂದೀಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.