೮೨ ಸಾವಿರ ಕ್ಯುಸೆಕ್ ನೀರು ಒಳಹರಿವು

| Published : Sep 30 2025, 01:00 AM IST

ಸಾರಾಂಶ

ಮಳೆ ಕಡಿಮೆಯಾದ ಕಾರಣ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ ಎಲ್ಲ ೨೨ ಗೇಟ್‌ಗಳನ್ನು ಬಂದ್ ಮಾಡಿ ಒಟ್ಟು ೫೨೪.೨ರಷ್ಟು ನೀರು ಶೇಖರಣೆಯಾಗಿತ್ತು. ಕಳೆದೆರಡು ದಿನಗಳ ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಾನುವಾರ ಮತ್ತು ಸೋಮವಾರ ೮೨ ಸಾವಿರ ಕ್ಯುಸೆಕ್‌ನಷ್ಟು ನೀರು ಹರಿವಿನ ಪ್ರಮಾಣವಿರುವ ಕಾರಣ ಬಂದಷ್ಟೇ ನೀರನ್ನು ೧೦ ಗೇಟ್‌ಗಳ ಮೂಲಕ ಹೊರಕ್ಕೆ ಹಾಕಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬರುವ ಬೇಸಿಗೆ ದಿನಗಳಿಗಾಗಿ ಮುಂಜಾಗ್ರತ ಕ್ರಮವಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಹಿಪ್ಪರಗಿ ಬ್ಯಾರೇಜ್‌ ಎಲ್ಲ ಗೇಟ್‌ ಮುಚ್ಚುವುದು ಸಾಮಾನ್ಯ. ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಹಿಡಿದುಕೊಟ್ಟುಕೊಂಡು ಹೆಚ್ಚುವರಿ ನೀರನ್ನು ಆಗಾಗ್ಗೆ ಹೊರಹಾಕುವಲ್ಲಿ ಅಧಿಕಾರಿಗಳ ತಂಡ ನಿಯಂತ್ರಣದಲ್ಲಿತ್ತು. ಇದೀಗ ಒಮ್ಮೆಲೆ ೧೦ ಗೇಟ್‌ಗಳ ಮೂಲಕ ಭಾರಿ ಪ್ರಮಾಣದ ನೀರನ್ನು ಹೊರಹಾಕಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆರಾಯನ ಅಬ್ಬರ ಕಡಿಮೆಯಾಗಿರುವ ಕಾರಣ, ಕಾಯ್ದು ಗೇಟ್‌ ಬಂದ್ ಮಾಡುವ ವಿಚಾರ ಅಧಿಕಾರಿಗಳದ್ದಾಗಿದೆ.