ಘಟಪ್ರಭಾ ಪತ್ತಿನ ಸೌಹಾರ್ದ ಸಹಕಾರಿಗೆ ₹88.87 ಲಕ್ಷ ಲಾಭ

| Published : Sep 23 2024, 01:24 AM IST

ಘಟಪ್ರಭಾ ಪತ್ತಿನ ಸೌಹಾರ್ದ ಸಹಕಾರಿಗೆ ₹88.87 ಲಕ್ಷ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಘಟಪ್ರಭಾ ಪತ್ತಿನ ಸೌಹಾರ್ದ ಸಹಕಾರಿಯು ಪ್ರಸಕ್ತ 2023-24ನೇ ಸಾಲಿಗೆ ₹88.87 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಉದಯಕುಮಾರ ವೆಂಕಪ್ಪ ಸಾರವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ನಗರದ ಘಟಪ್ರಭಾ ಪತ್ತಿನ ಸೌಹಾರ್ದ ಸಹಕಾರಿಯು ಪ್ರಸಕ್ತ 2023-24ನೇ ಸಾಲಿಗೆ ₹88.87 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಉದಯಕುಮಾರ ವೆಂಕಪ್ಪ ಸಾರವಾಡ ಹೇಳಿದರು.

ಶುಕ್ರವಾರ ನಡೆದ ನಗರದ ಘಟಪ್ರಭಾ ಪತ್ತಿನ ಸೌಹಾರ್ದ ಸಹಕಾರಿ ನಿ ಇದರ 2023-24 ನೇ ಸಾಲಿನ 7ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಬ್ಯಾಂಕಿನ ಪಕ್ಷಿನೋಟದ ಕುರಿತು ಮಾತನಾಡಿದ ಅವರು, 2018-19ನೇ ಸಾಲಿಗೆ ಆರಂಭವಾದ ಈ ಸೌಹಾರ್ದ ಸಹಕಾರಿ ಬ್ಯಾಂಕ್ 2023-24ನೇ ಸಾಲಿನ ಅಂತ್ಯಕ್ಕೆ 1452 ಜನ ಶೇರುದಾರ ಸದಸ್ಯರನ್ನು ಹೊಂದಿದ್ದು, ಒಟ್ಟು ₹1,61, 39,075 ಶೇರು ಬಂಡವಾಳ ಹೊಂದಿದೆ. ಒಟ್ಟು ₹28,06,69,629 ಠೇವಣಿ ಹೊಂದಿದೆ. ಒಟ್ಟು ₹23,38,05,159 ಸಾಲವನ್ನು ನೀಡಲಾಗಿದೆ. ಒಟ್ಟು ₹30,91,14,231,49 ದುಡಿಯುವ ಬಂಡವಾಳ ಹೊಂದಿದೆ ಎಂದು ಸಭೆಗೆ ತಿಳಿಸಿದ ಅವರು ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗಿದೆ ಎಂದು ವಿವರಿಸಿದರು.ಬ್ಯಾಂಕಿನ ಉಪಾಧ್ಯಕ್ಷ ಶ್ರೀಕಾಂತ ಲ.ಗುಜ್ಜನ್ನವರ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲಸೌಲಭ್ಯ ದೊರೆಯುವುದು ಬಹಳ ಕಷ್ಟದಾಯಕವಾದದು. ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಸಣ್ಣಪುಟ್ಟ ಬೀದಿ ವ್ಯಾಪಾರಸ್ಥರಿಗೆ, ಕಡಿಮೆ ಬಡ್ಡಿದರಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ನಮ್ಮ ಬ್ಯಾಂಕಿನ ಮೂಲ ಉದ್ದೇಶ, ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಇತರೆ ಬ್ಯಾಂಕ್‌ಗಳ ಜೊತೆ ನಮ್ಮ ಬ್ಯಾಂಕ್ ಸ್ಪರ್ಧೆ ಮಾಡುವುದಿಲ್ಲ. ನಮ್ಮ ಬ್ಯಾಂಕ್ ಸೇವೆಗೆ ಪ್ರಥಮ ಆದ್ಯತೆ ನೀಡಿದೆ. ಬ್ಯಾಂಕಿನ ಅಭಿವೃದ್ಧಿಗಾಗಿ ಶೇರು ನೀಡಿರುವ ಎಲ್ಲ ಸದಸ್ಯರುಗಳಿಗೆ, ಸಾಲ ಸೌಲಭ್ಯ ಪಡೆದ ಸರ್ವರಿಗೂ ಅಭಿನಂದನೆಗಳನ್ನು ತಿಳಿಸಿದರು.ಬ್ಯಾಂಕಿನ ಅಧ್ಯಕ್ಷ ಉದಯಕುಮಾರ ವೆಂ.ಸಾರವಾಡ, ಉಪಾಧ್ಯಕ್ಷ ಶ್ರೀಕಾಂತ ಲ.ಗುಜ್ಜನ್ನವರ, ನಿರ್ದೇಶಕರಾದ ಅಶೋಕಗೌಡ ಮ. ಪಾಟೀಲ, ಸಂಗಮೇಶ ಗೌ.ಕಾತರಕಿ, ಪ್ರವೀಣ ಬಿ.ಸರನಾಯಿಕ, ರಾಜು ರಾ.ಯಡಹಳ್ಳಿ, ಲಕ್ಷ್ಮಣ ಶಂ.ಚಿನ್ನಣ್ಣವರ, ಗಂಗಾ ವೆಂ. ಗಿಡಪ್ಪನವರ, ಪರಸಪ್ಪ ಗು. ಗಣಿ, ಲಲಿತಾ ಸಂ. ಸೋರಗಾಂವಿ, ಬಸಪ್ಪ ದುಂ. ಹೂಗಾರ, ಅರುಣ ಗೋ. ಕಾರಜೋಳ, ಚಂದ್ರಶೇಖರ ತಿ. ಸಿಂಗರಡ್ಡಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ವರಿ ಆರ್‌. ಹಲಗಲಿ ಹಾಗೂ ಬ್ಯಾಂಕಿನ ಎಲ್ಲ ಸಿಬ್ಬಂದಿ ಮತ್ತು ಶೇರು ದಾರ ಸದಸ್ಯರು ಉಪಸ್ಥಿತರಿದ್ದರು.