ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷರಾಗಿ 99 ವರ್ಷದ ಪೂಜಾರಿ ಚನ್ನಯ್ಯ ಅವಿರೋಧ ಆಯ್ಕೆ

| Published : May 19 2024, 01:53 AM IST

ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷರಾಗಿ 99 ವರ್ಷದ ಪೂಜಾರಿ ಚನ್ನಯ್ಯ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಿಎಲ್ ಡಿ ಬ್ಯಾಂಕ್ ನ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 99 ವರ್ಷದ ಪೂಜಾರಿ ಎಂ.ಚನ್ನಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೂಜಾರಿ ಎಂ.ಚನ್ನಯ್ಯ ಇಳಿ ವಯಸ್ಸಿನಲ್ಲೂ ಸಾಕಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕ್ ನ ಉಪಾಧ್ಯಕ್ಷರಾಗಿ, ಬ್ಯಾಂಕ್ ಅಭಿವೃದ್ಧಿಗೆ ಕೆಲಸ ಮಾಡಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 99 ವರ್ಷದ ಚಿಕ್ಕಮರಳಿ ಪೂಜಾರಿ ಎಂ.ಚನ್ನಯ್ಯ ಶನಿವಾರ ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಉಪಾಧ್ಯಕ್ಷೆ ಗೌರಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ನಿರ್ದೇಶಕ ಎಂ.ಚನ್ನಯ್ಯ ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರೂ ನಾಮಪತ್ರವನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ನ ನೂತನ ಉಪಾಧ್ಯಕ್ಷರನ್ನಾಗಿ ಎಂ.ಚನ್ನಯ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಿರ್ಮಲಾ ಅವರು ಘೋಷಿಸಿದರು.

99 ವರ್ಷದ ಪೂಜಾರಿ ಎಂ.ಚನ್ನಯ್ಯ ಅವರು ಬ್ಯಾಂಕ್ ನ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆಯೇ ಹೊರಗಡೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ನೂತನ ಉಪಾಧ್ಯಕ್ಷ ಎಂ.ಚನ್ನಯ್ಯರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿ ಬ್ಯಾಂಕ್ ಅಧ್ಯಕ್ಷರು,ಮಾಜಿ ಅಧ್ಯಕ್ಷರು,ನಿರ್ದೇಶಕರು, ಮುಖಂಡರು ಅಭಿನಂದಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪಿಎಲ್ ಡಿ ಬ್ಯಾಂಕ್ ನ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 99 ವರ್ಷದ ಪೂಜಾರಿ ಎಂ.ಚನ್ನಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೂಜಾರಿ ಎಂ.ಚನ್ನಯ್ಯ ಇಳಿ ವಯಸ್ಸಿನಲ್ಲೂ ಸಾಕಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕ್ ನ ಉಪಾಧ್ಯಕ್ಷರಾಗಿ, ಬ್ಯಾಂಕ್ ಅಭಿವೃದ್ಧಿಗೆ ಕೆಲಸ ಮಾಡಲಿ ಎಂದು ಹಾರೈಸಿದರು.

ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎನ್.ಮುರಳಿ, ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಎಂ.ಸಿ.ಯಶ್ವಂತ್ ಕುಮಾರ್, ಸಿ.ಪ್ರಕಾಶ್, ರತ್ನಮ್ಮ, ಡಿ.ಎನ್.ಸೋಮಶೇಖರ್, ಶಿವಣ್ಣ, ನಾಗಶೆಟ್ಟಿ, ಗೌರಮ್ಮ, ನಾಗೇಗೌಡ, ಕಾರ್ಯದರ್ಶಿ ಹುಚ್ಚೇಗೌಡ, ಮುಖಂಡರಾದ ಬಕೋಡಿ, ಬಕೋಡಿ, ಹೇಮಣ್ಣ, ಚಿಕ್ಕಮರಳಿ ಗ್ರಾಮದ ರಮೇಶ್, ಚಂದ್ರಶೇಖರ್, ಸ್ವಾಮೀಗೌಡ ಶಿವಣ್ಣ, ಕುಮಾರ್ ಮರಿಚನ್ನಯ್ಯ, ಮಧುಸೂದನ್, ಪುನಿ, ಸ್ವಾಮಿ(ಎಟಿಎಂ), ನಂದೀಶ್ ಸೇರಿ ಹಲವರು ಹಾಜರಿದ್ದರು.