ಅನ್ಯಮತೀಯರ ವಶದಲ್ಲಿದ್ದ ಜಾಗದಲ್ಲಿ 12ನೇ ಶತಮಾನದ ದೇವರ ವಿಗ್ರಹ ಪತ್ತೆ

| Published : Nov 07 2023, 01:30 AM IST

ಅನ್ಯಮತೀಯರ ವಶದಲ್ಲಿದ್ದ ಜಾಗದಲ್ಲಿ 12ನೇ ಶತಮಾನದ ದೇವರ ವಿಗ್ರಹ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾವಿಯಲ್ಲಿ ಸುಮಾರು 15 ಅಡಿ ಆಳದಲ್ಲಿ ಈ ಮೂರ್ತಿ ಪತ್ತೆಯಾಗಿದೆ. ಬಾವಿಯನ್ನು ಯಂತ್ರದಲ್ಲಿ ತೋಡಿದಾಗ ಮೂರ್ತಿ ಕಂಡುಬಂದು ಊರ ಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ದೇವಸ್ಥಾನವಿದ್ದ ಜಮೀನು ಅನ್ಯಮತೀಯ ವಶದಲ್ಲಿದ್ದು ಊರವರ ನಿರಂತರ ಪ್ರಯತ್ನದ ಫಲವಾಗಿ ಬೆಳ್ತಂಗಡಿಯ ಶಾಸಕರ ಶ್ರಮದಿಂದ ದೇವಸ್ಥಾನದ ನಿರ್ಮಾಣ ಉದ್ದೇಶ ಕ್ಕಾಗಿ ಕಳೆದ ಜುಲೈ ತಿಂಗಳಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಈ ಜಮೀನು ಮಂಜೂರುಗೊಳಿಸಿದ್ದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸುಮಾರು 700 ವರ್ಷಗಳ ಹಿಂದೆ ಜನರಿಂದ ಆರಾಧನೆ ಪಡೆಯುತ್ತಿದ್ದ ಸುಮಾರು 12ನೇ ಶತಮಾನದ ಎಂದು ಹೇಳಲಾದ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ ನ.5ರಂದು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ ದೇವಸ್ಥಾನದ ಬಾವಿಯಲ್ಲಿ ಪತ್ತೆಯಾಗಿದೆ. ಅನ್ಯಮತೀಯರ ವಶದಲ್ಲಿದ್ದ ಭೂಮಿ ಈಗ ಧಾರ್ಮಿಕ ದತ್ತಿ ಇಲಾಖೆ ವಶಕ್ಕೆ ಬಂದಿದೆ.ಬಾವಿಯಲ್ಲಿ ಸುಮಾರು 15 ಅಡಿ ಆಳದಲ್ಲಿ ಈ ಮೂರ್ತಿ ಪತ್ತೆಯಾಗಿದೆ. ಬಾವಿಯನ್ನು ಯಂತ್ರದಲ್ಲಿ ತೋಡಿದಾಗ ಮೂರ್ತಿ ಕಂಡುಬಂದು ಊರ ಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ದೇವಸ್ಥಾನವಿದ್ದ ಜಮೀನು ಅನ್ಯಮತೀಯ ವಶದಲ್ಲಿದ್ದು ಊರವರ ನಿರಂತರ ಪ್ರಯತ್ನದ ಫಲವಾಗಿ ಬೆಳ್ತಂಗಡಿಯ ಶಾಸಕರ ಶ್ರಮದಿಂದ ದೇವಸ್ಥಾನದ ನಿರ್ಮಾಣ ಉದ್ದೇಶ ಕ್ಕಾಗಿ ಕಳೆದ ಜುಲೈ ತಿಂಗಳಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಈ ಜಮೀನು ಮಂಜೂರುಗೊಳಿಸಿದ್ದರು.ಆನಂತರ ಜಿಲ್ಲಾಧಿಕಾರಿ, ಊರಿನವರು ಶಾಸಕರ ನೇತೃತ್ವದಲ್ಲಿ ಸೇರಿ ಆ ಜಮೀನಿನ ಸಮೀಪದಲ್ಲಿ ಮಾರ್ಚ್ ನಲ್ಲಿ ದೇವರಕಟ್ಟೆ ನಿರ್ಮಿಸಿ ಭಜನೆ ಆರಂಭಿಸಲಾಯಿತು.ಈ ಮಧ್ಯೆ ನ್ಯಾಯಾಲಯದ ಮೆಟ್ಟಿಲೇರಿದ ಎದುರುವಾದಿಯಿಂದ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಅಡಚಣೆಯಾಯಿತು.

ಆಗ ಮತ್ತೆ ಮತ್ತೆ ಶಾಸಕರ ಪ್ರಯತ್ನದಿಂದ ದೇವಸ್ಥಾನಕ್ಕೆ ಮಂಜೂರುಗೊಂಡ ಜಮೀನಿನೊಂದಿಗೆ ಆ ವ್ಯಕ್ತಿಯ ಜಮೀನು ನೀಡುವುದಾಗಿ ಆ ವ್ಯಕ್ತಿ ಮುಂದೆ ಬಂದಾಗ ದೇವಸ್ಥಾನ ನಿರ್ಮಾಣ ಕಾರ್ಯದ ಕನಸು ಮತ್ತೆ ಚಿಗುರೊಡೆಯಿತು. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಭೂಗರ್ಭದಲ್ಲಿ ಹುದುಗಿದ್ದ ಕುರುಹುಗಳಿಗಾಗಿ ದೇವಸ್ಥಾನವಿದ್ದ ಈಶಾನ್ಯ ಭಾಗದ ಬಾವಿ ಇದ್ದ ಜಾಗ ಪರಿಶೀಲಿಸಿ ಶೋಧ ನಡೆಸಲಾಯಿತು. ಅಗೆದಾಗ ದೇವರ ಭಗ್ನಗೊಂಡ ವಿಗ್ರಹ, ದೀಪಸ್ತಂಭ, ಗರ್ಭಗುಡಿಯ ಮೆಟ್ಟಿಲಿನ ವಿನ್ಯಾಸಗೊಳಿಸಿದ ಕಲ್ಲಿನ ಕುರುಹುಗಳು ಕಂಡುಬಂತು.ಮತ್ತಷ್ಟು ದೇವಸ್ಥಾನದ ಅವಶೇಷಗಳು ತೆಕ್ಕಾರಿನಲ್ಲಿ ನೇತ್ರಾವತಿ ನದಿ ತಡದಿಲ್ಲಿ ನದಿಗೆ ಇಳಿಯುವ ಜಾಗಕ್ಕೆ ಬಳಸಲಾಗಿದೆ. ಬಹಳ ವರುಷಗಳಿಂದ ಇಲ್ಲಿಯ ಜನರು ದೇವಸ್ಥಾನ ಇತ್ತೆಂಬ ನಂಬಿಕೆ ಹುಸಿಯಾಗಲಿಲ್ಲ. ಧೃಡವಾದ ನಂಬಿಕೆಗಳು ಸತ್ಯವಾದ ವಿಚಾರ ಎಂಬುದಕ್ಕೆ ಇದೇ ದೃಷ್ಟಾಂತ.‌ ಸ್ಥಳಕ್ಕೆ ಜಿಲ್ಲಾ ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ, ಅಕ್ಕಪಕ್ಕದ ಊರ ಭಕ್ತರು ತೆರಳಿ ದೇವರ ವಿಗ್ರಹ ಪರಿಶೀಲಿಸಿ ನಮಿಸಿದರು.