ಬೈಕಿನಲ್ಲಿ ಡೂಮ್‌ನಲ್ಲಿ ಅಡಗಿದ್ದ ಹೆಬ್ಬಾವು ಮರಿ

| Published : Jul 04 2024, 01:05 AM IST / Updated: Jul 04 2024, 12:32 PM IST

ಸಾರಾಂಶ

ಬೈಕಿನ ಡೂಮಿನೊಳಗೆ ಹೆಬ್ಬಾವಿನ ಮರಿಯೊಂದು ಅಡಗಿ ಕುಳಿತು ಚಾಲಕನನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ.

ಉಡುಪಿ : ಇಲ್ಲಿನ ಪೆಟ್ರೋಲ್ ಬಂಕೊಂದರಲ್ಲಿ ನಿಲ್ಲಿಸಿದ್ದ ಬೈಕಿನ ಡೂಮ್ ನೊಳಗೆ ಹೆಬ್ಬಾವಿನ ಮರಿಯೊಂದು ಅಡಗಿ ಕುಳಿತು ಚಾಲಕನನ್ನು ಬೆಚ್ಚಿ ಬೀಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮಣಿಪಾಲದಲ್ಲಿ ಚಾಲಕರಾಗಿ ಕೆಲಸ ಮಾಡುವ ರಾಹುಲ್ ಎಂಬವರು ನಗರದ ಕಿನ್ನಿಮುಲ್ಕಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ರಾತ್ರಿ 8.30 ಕ್ಕೆ ಕೆಲಸ ಮುಗಿಸಿ ವಾಪಸು ಬಂದು ಬೈಕ್ ಮೂಲಕ ಮನೆಗೆ ಹೊರಟಿದ್ದು, ಬಿಗ್ ಬಝಾರ್ ಬಳಿ ಬಂದಾಗ ಡೂಮ್‌ನೊಳಗೆ ಹಾವು ಅಲ್ಲಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ನಂತರ ಅರಣ್ಯ ಇಲಾಖೆಯ ಮಾಹಿತಿ ನೀಡಿದ್ದು, ಇಲಾಖೆಯವರು ಉರಗತಜ್ಞ ಪ್ರಾಣೇಶ್ ಪರ್ಕಳ ಇವರಿಗೆ ಕರೆ ಮಾಡಿ ಹಾವು ಇರುವ ಮಾಹಿತಿ ನೀಡಿದ್ದರು. ಅದರಂತೆ ಪ್ರಾಣೇಶ್ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅದು ಹೆಬ್ಬಾವಿನ ಮರಿ ಆಗಿದ್ದು, ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.