ಸಾರಾಂಶ
ಬಡ, ಮಧ್ಯಮ ವರ್ಗದ ಜನರ ಆರ್ಥಿಕ ಸುಧಾರಣೆಗಾಗಿ ನಮ್ಮ ತಂದೆ ದಿ.ಕೆ.ಎಂ.ಪಟ್ಟಣಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ ಮತ್ತು ಶಿವಯೋಗಮಂದಿರದ ಸದಾಶಿವ ಶ್ರೀಗಳ ಅಮೃತ ಹಸ್ತದಿಂದ ಆರಂಭಗೊಂಡ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕ್ ಕಳೆದ 60 ವರ್ಷಗಳಿಂದ ಸಾರ್ವಜನಿಕ ವಲಯಕ್ಕೆ ಆರ್ಥಿಕ ಸಬಲತೆ ನೀಡುವುದರ ಜತೆಗೆ ಉತ್ತಮ ಲಾಭದತ್ತ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಶಾಸಕ ಅಧ್ಯಕ್ಷ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಬಡ, ಮಧ್ಯಮ ವರ್ಗದ ಜನರ ಆರ್ಥಿಕ ಸುಧಾರಣೆಗಾಗಿ ನಮ್ಮ ತಂದೆ ದಿ.ಕೆ.ಎಂ.ಪಟ್ಟಣಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ ಮತ್ತು ಶಿವಯೋಗಮಂದಿರದ ಸದಾಶಿವ ಶ್ರೀಗಳ ಅಮೃತ ಹಸ್ತದಿಂದ ಆರಂಭಗೊಂಡ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕ್ ಕಳೆದ 60 ವರ್ಷಗಳಿಂದ ಸಾರ್ವಜನಿಕ ವಲಯಕ್ಕೆ ಆರ್ಥಿಕ ಸಬಲತೆ ನೀಡುವುದರ ಜತೆಗೆ ಉತ್ತಮ ಲಾಭದತ್ತ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಶಾಸಕ ಅಧ್ಯಕ್ಷ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.ನಗರದ ಶ್ರೀ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಮಂಟಪದಲ್ಲಿ ನಡೆದ 60ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನದಲ್ಲಿ ನಾನು ಇಲ್ಲವೇ ಯಾರೆ ಇದ್ದರೂ ಬ್ಯಾಂಕಿನ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ. ಇದಕ್ಕೆಂದೆ ಕೆಲ ಹಿತೈಷಿಗಳ ಹಿತ ಈಡೇರಲು ಸಾಧ್ಯವಿಲ್ಲ ಎಂದರು.
ಸಂಸ್ಥಾಪಕ ನಿರ್ದೇಶಕ ಎ.ಸಿ.ಪಟ್ಟಣದ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ವ್ಯವಹಾರವನ್ನು ರಾಜ್ಯಾದ್ಯಂತ ಬೇರೆ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಈಗಿದ್ದ ಬಾಗಲಕೋಟೆ ತಾಲೂಕಿನ ಕಲಾದಗಿ ಶಾಖೆಯನ್ನು ಗದ್ದನಕೇರಿ ಕ್ರಾಸ್‌ಗೆ ಸ್ಥಳಾಂತರ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದಲ್ಲಿ ಬ್ಯಾಂಕಿನ ಹೊಸ ಶಾಖೆ ಪ್ರಾರಂಭ ಮಾಡಲಾಗುವುದು. ಬ್ಯಾಂಕ್ ಆರ್‌ಬಿಐ ನಿಯಮಗಳ ಪ್ರಕಾರ ಎಸ್‌ಎಎಫ್‌ನಿಂದ ಹೊರಬಂದು ಆರ್ಥಿಕವಾಗಿ ಸದೃಢ ಬ್ಯಾಂಕ್(ಎಫ್.ಎಸ್.ಡಬ್ಲ್ಯು.ಎಂ)ಕೆಟಗರಿ ಅಡಿಯಲ್ಲಿ ಬಂದಿದೆ. ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ತಾಂತ್ರಿಕ ಸೇರಿದಂತೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಧನಸಹಾಯ ಪ್ರತಿ ವರ್ಷ ನೀಡಲಾಗುತ್ತಿದೆ ಎಂದರು.ಪ್ರಧಾನ ವ್ಯವಸ್ಥಾಪಕಿ ಎಂ.ಬಿ.ದೇಶಣ್ಣವರ ವರದಿ ವಾಚಿಸಿದರು.
ಈ ವೇಳೆ ಉಪಾಧ್ಯಕ್ಷ ಡಿ.ಎಂ.ಪೈಲ್, ನಿರ್ದೇಶಕ ಐ.ಕೆ.ಪಟ್ಟಣಶೆಟ್ಟಿ, ಜಿ.ಎಚ್.ಘಟ್ಟದ, ವಿ.ಕೆ.ಬಾಗಲೆ, ಬಿ.ಎಂ.ಟೆಂಗಿನಕಾಯಿ, ಎಸ್.ಬಿ.ಕೊಣ್ಣೂರ, ಎನ್.ಎಂ.ಗೌಡರ, ಎಂ.ಎಸ್.ಹಿರೇಹಾಳ, ಸಿ.ಯು.ಪಟ್ಟಣದ, ಎಂ.ಎಸ್.ತೆಗ್ಗಿನಮನಿ, ವೀರನಗೌಡ ಪಾಟೀಲ, ಎಚ್.ಕೆ.ಬೆಳ್ಳಿಗುಂಡಿ, ಶ್ರೀಮತಿ ಕೆ.ಬಿ.ಬಂಗಾರಶೆಟ್ಟರ, ಶ್ರೀಮತಿ ಎಸ್.ಎಂ.ಪಟ್ಟಣಶೆಟ್ಟಿ, ಜೆ.ಬಿ.ಬೂದಿಹಾಳ, ಎಂ.ಎನ್.ತಪಶೆಟ್ಟಿ, ವ್ಯವಸ್ಥಾಪಣ ಮಂಡಳಿಯ ಕೆ.ಎಂ.ಪಟ್ಟಣಶೆಟ್ಟಿ, ಬಿ.ಎಂ.ಮಿಟ್ಟಲಕೋಡ, ಟಿ.ಎಂ.ಬೆನಕಟ್ಟಿ ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕಿ ಎಂ.ಬಿ.ದೇಶಣ್ಣವರ ಸ್ವಾಗತಿಸಿದರು. ಅಮರೇಶ ಚುರ್ಚಾಳ ನಿರೂಪಿಸಿ, ವಂದಿಸಿದರು.