ಉತ್ತಮ ಪುಸ್ತಕಗಳು ಸಮಾಜಕ್ಕೆ ದಾರಿದೀಪವಿದ್ದಂತೆ

| Published : Aug 14 2024, 12:46 AM IST

ಸಾರಾಂಶ

ಅರಕಲಗೂಡು ಪಟ್ಟಣದ ಹಾಸನ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಎ.ಆರ್‌. ರಾಕೇಶ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಟೈಮ್ಸ್‌ ಸಮೂಹ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್‌ ಮಾತನಾಡಿದರು. ಉತ್ತಮ ಪುಸ್ತಕಗಳು ಸಮಾಜಕ್ಕೆ ದಾರಿದೀಪವಿದ್ದಂತೆ. ಓದಿದ ಪುಸ್ತಕಗಳನ್ನು ಬಿಸಾಡದೆ ಸಂಗ್ರಹಿಸಿಟ್ಟುಕೊಂಡರೆ ಮುಂದಿನ ಪೀಳಿಗೆಯ ಮಕ್ಕಳಿಗೂ ತಲುಪಿಸಬಹುದು. ಮುಖ್ಯವಾಗಿ ಎಲ್ಲರಲ್ಲೂ ಪುಸ್ತಕ ಪ್ರೀತಿ ಮೂಡಬೇಕು. ಇದಕ್ಕಾಗಿ ಹುಟ್ಟು ಹಬ್ಬದ ಸಂಭ್ರಮಗಳಲ್ಲೂ ಉಡುಗೊರೆಯಾಗಿ ಪುಸ್ತಕಗಳನ್ನು ಉಚಿತವಾಗಿ ನೀಡಿ ಅವುಗಳನ್ನು ಓದುವ ಅಭ್ಯಾಸ ಬೆಳೆಸಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ವಿದ್ಯಾರ್ಥಿಗಳು ಓದುವ ಹವ್ಯಾಸ ಮೈಗೂಡಿಸಿಕೊಂಡು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದು ಟೈಮ್ಸ್‌ ಸಮೂಹ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್‌ ಸಲಹೆ ನೀಡಿದರು.

ಪಟ್ಟಣದ ಹಾಸನ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಎ.ಆರ್‌. ರಾಕೇಶ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಕಾಲಹರಣ ಮಾಡದೆ ಜ್ಞಾನ ವೃದ್ಧಿಗಾಗಿ ಪ್ರತಿನಿತ್ಯ ಒಂದಿಲ್ಲೊಂದು ಉತ್ತಮ ಪುಸಕ್ತಗಳನ್ನು ಓದಬೇಕು. ಇದರಿಂದ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಉತ್ತಮ ಪುಸ್ತಕಗಳು ಸಮಾಜಕ್ಕೆ ದಾರಿದೀಪವಿದ್ದಂತೆ. ಓದಿದ ಪುಸ್ತಕಗಳನ್ನು ಬಿಸಾಡದೆ ಸಂಗ್ರಹಿಸಿಟ್ಟುಕೊಂಡರೆ ಮುಂದಿನ ಪೀಳಿಗೆಯ ಮಕ್ಕಳಿಗೂ ತಲುಪಿಸಬಹುದು. ಮುಖ್ಯವಾಗಿ ಎಲ್ಲರಲ್ಲೂ ಪುಸ್ತಕ ಪ್ರೀತಿ ಮೂಡಬೇಕು. ಇದಕ್ಕಾಗಿ ಹುಟ್ಟು ಹಬ್ಬದ ಸಂಭ್ರಮಗಳಲ್ಲೂ ಉಡುಗೊರೆಯಾಗಿ ಪುಸ್ತಕಗಳನ್ನು ಉಚಿತವಾಗಿ ನೀಡಿ ಅವುಗಳನ್ನು ಓದುವ ಅಭ್ಯಾಸ ಬೆಳೆಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನವೀನ್ ಪಿ. ಉಲಿವಾಲ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಪ್ರೋತ್ಸಾಹದಾಯಕ. ಕಾರ್ಯಕ್ರಮವನ್ನು ರೂಪಿಸಿದ ಉಪನ್ಯಾಸಕರ ಸೇವೆ ದೂರದೃಷ್ಟಿಯಿಂದ ಕೂಡಿದೆ. ಮತ್ತಷ್ಟು ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಬದುಕಿನಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು ಸದಾ ಕ್ರಿಯಾಶೀಲವಾಗಿರುವಂತೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.ಉಪನ್ಯಾಸಕಾರದ ಎಂ.ಡಿ. ಕೃಷ್ಣಮೂರ್ತಿ, ಡಿ. ಮಧು, ರಿಯಾನ, ಕುಮಾರಿ, ವಿದ್ಯಾಶ್ರೀ ಇತರರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕೆ.ಎನ್. ಸಂಜನಾ, ಕೆ.ಎಂ. ಐಶ್ವರ್ಯಾ, ಟಿ.ಜಿ. ರಕ್ಷಿತ್, ಎಂ.ಎಂ. ಸಾಗರ್, ಎಂ.ಎಲ್. ಶುಭಶ್ರೀ, ಐ.ಟಿ. ಚಾಂದಿನಿ ಅವರು ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಕುರಿತು ವಿಷಯ ಮಂಡಿಸಿದರು. ವಿಷಯ ಮಂಡನೆಯಲ್ಲಿ ವಿಜೇತರಾದ ವಿದ್ಯಾರ್ಥಿ ಕೆ.ಎನ್. ಸಂಜನಾ ಅವರಿಗೆ ಬಹುಮಾನ ವಿತರಿಸಲಾಯಿತು.