ಸಾರಾಂಶ
ಕನ್ನಡಪ್ರಭವ ವಾರ್ತೆ ತಾಳಿಕೋಟೆ
ಸಮಾಜ, ಊರು, ದೇಶಾಭಿವೃದ್ಧಿ ಪಥದತ್ತ ಸಾಗಬೇಕಾದರೆ ಕೆಲಸ ಮಾಡುವ ಕೈಗಳು ಹಾಗೂ ಬಂಡವಾಳ ಹೂಡುವ ಕೈಗಳು ಕೂಡಿದರೆ ಮಾತ್ರ ಸಾಧ್ಯವಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.ಪಟ್ಟಣದ ನಡಹಳ್ಳಿ ಅಭಿಮಾನಿ ಬಳಗ ಹಾಗೂ ಶ್ರೀನಿಧಿ ಫೈನಾನ್ಸ್ ಹಾಗೂ ವಿಠ್ಠಲ ಮಂದಿರ ಟ್ರಸ್ಟ್‌ನಿಂದ ವಿಠ್ಠಲ ಮಂದಿರದಲ್ಲಿ ದಿ.ತಾಳಿಕೋಟಿ ಸಹಕಾರಿ ಬ್ಯಾಂಕಿನ ನೂತನ ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಲ್ಲ ನಿರ್ದೇಶಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ತಾಳಿಕೋಟೆ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಇಲ್ಲಿ ವಿವಿಧ ಸೇವೆಗಳಲ್ಲಿ ಪಾಲ್ಗೊಂಡು ಕಾರ್ಯನಿರ್ವಹಿಸುವ ಕೈಗಳಿವೆ. ವ್ಯಾಪಾರಸ್ಥರಿಗೆ, ಉದ್ಯೋಗಸ್ಥರಿಗೆ ಸಾಲ ನೀಡುವ, ಅಪೇಕ್ಷಿತರಿಗೆ ಹಣಕಾಸಿನ ನೆರವು ನೀಡುತ್ತ, ಸುಮಾರು ೬೦ ವರ್ಷಗಳ ತಾಳಿಕೋಟೆ ಸಹಕಾರಿ ಬ್ಯಾಂಕ್ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಈ ಕುರಿತು ಅಭಿನಂದನೆ ಸಲ್ಲಿಸಿದ ನಡಹಳ್ಳಿ ಅವರು ಬ್ಯಾಂಕು ಅನ್ನುವುದು ಒಂದು ದೇವಸ್ಥಾನವಿದ್ದಂತೆ ದೇವಸ್ಥಾನಕ್ಕೆ ನೀಡುವ ಮಹತ್ವವನ್ನು ಇಲ್ಲಿಯೂ ನೀಡಬೇಕಿದೆ. ಮಹಾರಾಷ್ಟ್ರದಲ್ಲಿ ಇಂತಹ ಉದ್ಯೋಗ ಕೈಕೊಂಡಿದ್ದರಿಂದಲೇ ರೈತರು ಅಲ್ಲದೇ ಪ್ರತಿಯೊಂದು ಗ್ರಾಮಗಳು ಉದ್ದಾರವಾಗಲು ಕಾರಣವಾಗಿವೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಮಾತನಾಡಿ, ಸಹಕಾರಿ ರಂಗ ಸಹಕಾರದಿಂದಲೇ ಮುಂದುವರೆಯುತ್ತದೆ. ನಾವು ಅನುವು ಮಾಡಿಕೊಡುವಂತಹ ಕಾರ್ಯ ಈ ರಂಗದ್ದಾಗಿದೆ ಇದು ಬಹಳೇ ಸೂಕ್ಷ್ಮದಾಯಕವೆಂದು ಹೇಳಬಹುದಾಗಿದೆ ಬ್ಯಾಂಕ್ ಅನ್ನುವದು ಇದೊಂದು ದೇವಸ್ಥಾನವಿದ್ದಂತೆ ಎಲ್ಲರಲ್ಲಿಯೂ ಸಹಕಾರ ಮನೋಭಾವನೆ ಎಂಬುದು ಬಂದರೆ ಮಾತ್ರ ಬ್ಯಾಂಕ್ ಉದ್ದಾರವಾಗಲಿದೆ. ತಾಳಿಕೋಟೆ ಸಹಕಾರಿ ಬ್ಯಾಂಕಿನ ಸದಸ್ಯರು ಹಾಗೂ ಗ್ರಾಹಕರು ಅಲ್ಲದೇ ಶೇರುದಾರರು ಇಟ್ಟಂತಹ ವಿಸ್ವಾಸ, ಪ್ರೀತಿ ಹಾಗೂ ನಿರ್ದೇಶಕ ಮಂಡಳಿಯವರು ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಬ್ಯಾಂಕಿನ ಇತಿಹಾಸ ಕಾಪಾಡಿದ್ದೇ ಈ ಸಹಕಾರಿ ಬ್ಯಾಂಕು ಬೆಳೆಯಲು ಕಾರಣವಾಗಿದೆ ಎಂದರು.
ನಿರ್ದೇಶಕ ಕಾಶಿನಾಥ ಸಜ್ಜನ, ಎಂ.ಎಸ್.ಸರಶೆಟ್ಟಿ ಸನ್ಮಾನ ಸ್ವಿಕರಿಸಿ ಮಾತನಾಡಿದರು. ನೂತನ ನಿರ್ದೇಶಕರಾದ ದ್ಯಾಮನಗೌಡ ಪಾಟೀಲ, ಈಶ್ವರಪ್ಪ ಬಿಳೇಭಾವಿ, ಚಿಂತಪ್ಪಗೌಡ ಯಾಳಗಿ, ದತ್ತಾತ್ರೇಯ ಹೆಬಸೂರ, ಗಿರಿಜಾಬಾಯಿ ಕೊಡಗಾನೂರ, ಶೈಲಾ ಬಡದಾಳಿ, ಅಮರಸಿಂಗ್ ಹಜೇರಿ(ಬಾಬು), ಸುರೇಶ ಪಾಟೀಲ, ಪ್ರಲ್ಹಾದಸಿಂಗ್ ಹಜೇರಿ, ಸಂಜೀವಪ್ಪ ಬಡದೇನಾಳ, ರಾಮಪ್ಪ ಕಟ್ಟಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರಸಭಾ ಸದಸ್ಯ ವಾಸುದೇವ ಹೆಬಸೂರ, ರಾಜಣ್ಣ ಸೋಂಡೂರ, ಎಸ್.ಎಂ.ಸಜ್ಜನ, ಶ್ರೀಧರ ಜೋಶಿ, ಎಂ.ಆರ್.ಕತ್ತಿ, ಪ್ರಥಮಶೆಟ್ಟಿ, ರವಿ ಪಾಟೀಲ, ಸಂಭಾಜಿ ವಾಡಕರ, ತಮ್ಮಣ್ಣ ದೇಶಪಾಂಡೆ, ರಂಗನಾಥ ನೂಲಿಕರ, ಬಾಬು ಕಾರ್ಜೋಳ, ರಾಜಶೇಖರ ಕೊಡಗಾನೂರ, ಮೊದಲಾದವರು ಉಪಸ್ಥಿತರಿದ್ದರು.ಶಿವಶಂಕರ ಹಿರೇಮಠ ಸ್ವಾಗತಿಸಿದರು. ಮಹಾಂತೇಶ ಮುರಾಳ ನಿರೂಪಿಸಿದರು.-----------