ಸಾರಾಂಶ
ಹೊಳೆಹೊನ್ನೂರಿನ ಸಮೀಪದ ಅಗಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಿಪಿಐ ಲಕ್ಷ್ಮೀಪತಿ ಎಲ್.ಆರ್. ರವರನ್ನು ಶ್ರೀ ಜೀಜಾಬಾಯಿ ಮರಾಠ ಮಹಿಳಾ ಸಂಘದವ ವತಿಯಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ತಂದೆ-ತಾಯಿ ಪರಿಶ್ರಮದಿಂದ ಮಾತ್ರ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯ ಎಂದು ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ಹೇಳಿದರು.ಸಮೀಪದ ಅಗಸನಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಕ್ಕಳು ವಿದ್ಯಾವಂತರಾಗಿ ದೇಶಕ್ಕೆ ಕೀರ್ತಿ ತರಬೇಕು. ನಮ್ಮೆಲ್ಲ ಕಷ್ಟಸುಖಗಳಿಗೆ ಸ್ಪಂದಿಸಿ, ಉತ್ತಮ ಜೀವನ ಕಟ್ಟಿಕೊಂಡು ಸತ್ಪ್ರಜೆಯಾಗಬೇಕು ಎಂಬುದು ಎಲ್ಲಾ ತಂದೆ-ತಾಯಿಯರ ಕನಸರಾಗಿರುತ್ತದೆ. ಅದನ್ನು ಸಹಕಾರಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ದುಶ್ಚಟಗಳಿಂದ ದೂರವಿದ್ದು, ಓದುವುದರಕಡೆ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದರು.ದೇಶದಲ್ಲಿ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಬೇರೆ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದು, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒಲವು ತೋರುತ್ತಿಲ್ಲ. ಸಮಾಜದಲ್ಲಿ ಹಾಗೂ-ಹೋಗುಗಳ ಬಗ್ಗೆ ಚಿಂತನೆ ಜೊತೆಗೆ ಜಾಗೃತಿ ಮೂಡಿಸಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರತಿಭಾ ಕೆ.ಆರ್ ಮಾತನಾಡಿ, ಮನುಷ್ಯರಲ್ಲಿ ಸಹಕಾರ, ಒಗ್ಗಟ್ಟು, ಸೌಹಾರ್ಧಿತ ಮನೋಭಾವನೆ ಬೆಳೆಸಿಕೊಳ್ಳುವುದು ಉತ್ತಮ ಸಮಾಜ ನಿರ್ಮಿಸುವಲ್ಲಿ ಸಹಕಾರವಾಗುತ್ತದೆ. ಇದರಿಂದಾಗಿ ದೇಶದ ಐಕ್ಯತೆ ಹೆಚ್ಚುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯ ಸುರೇಶ್, ವೆಂಕಟೇಶ್, ಪರಶುರಾಮ್ ಆರ್. ಕಾಮೋಜಿರಾವ್, ಲೋಕೇಶ್ ಆರ್. ಕೃಷ್ಣಮೂರ್ತಿ ಆರ್. ಶಿಕ್ಷಕ ಚಂದ್ರಪ್ಪ, ರಂಗನಾಥ ಕೆ. ನಾಗೇಂದ್ರಪ್ಪ, ಡಾ. ರಾಜುನಾಯ್ಕ, ರುದ್ರಮುನಿ ಹೆಚ್, ಡಾ. ಭಾರತಿದೇವಿ, ಡಾ. ನಾಗರಾಜ್ ನಾಯ್ಕ.ಎಸ್ ಸೇರಿ ಇತರರಿದ್ದರು.