ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದ್ದರಿಂದ ಇಂದಿನ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿರುವ ನೀವುಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಕರ್ನಾಟಕ ಅರಣ್ಯ ಇಲಾಖೆ, ಕನ್ನಡಪ್ರಭ, ಸುವರ್ಣ ನ್ಯೂಸ್, ಜನಮಿತ್ರ ಹಾಗೂ ಶ್ರೀ ಗುರುಗಣೇಶ್ ಚೀಟ್ಸ್‌ನವರು ಅರಣ್ಯ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ವಿಷಯದಲ್ಲಿ ನಡೆಸುತ್ತಿರುವ ಚಿತ್ರಕಲಾ ಸ್ಪರ್ಧೆಯೂ ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆ ಹಾಗೂ ಕಾಳಜಿಗೆ ಸಹಕಾರಿಯಾಗಲಿದೆ ಜತೆಗೆ ಅಭಿನಂದನೀಯ ಕಾರ್ಯಕ್ರಮವೆಂದು ತಿಳಿಸಿ, ಶುಭ ಕೋರಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಲಿಕೆಯಲ್ಲಿ ಏಕಾಗ್ರತೆ, ಸತತ ಪರಿಶ್ರಮ ಜತೆಗೆ ಒಳ್ಳೆಯ ದಿಕ್ಕಿನಲ್ಲಿ ಆಲೋಚನೆ ಮಾಡುತ್ತಾ, ಚೆನ್ನಾಗಿ ಕಲಿಯುವ ವಿದ್ಯಾರ್ಥಿಗಳ ಸ್ನೇಹ ಮಾಡಿಕೊಂಡು, ಸಮಾಜದಲ್ಲಿ ಉತ್ತಮ ನಡತೆಯವರ ಒಡನಾಟದಲ್ಲಿ ಮುನ್ನಡೆಯುವ ಮನಸ್ಥಿತಿ ರೂಪಿಸಿಕೊಂಡಲ್ಲಿ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಬಿಇಒ ಸೋಮಲಿಂಗೇಗೌಡ ಸಲಹೆ ನೀಡಿದರು.ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಕನ್ನಡಪ್ರಭ, ಸುವರ್ಣ ನ್ಯೂಸ್, ಜನಮಿತ್ರ ಹಾಗೂ ಶ್ರೀ ಗುರುಗಣೇಶ್ ಚೀಟ್ಸ್ ಪ್ರೈ.ಲಿ. ಸಹಯೋಗದಲ್ಲಿ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದ್ದರಿಂದ ಇಂದಿನ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿರುವ ನೀವುಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಕರ್ನಾಟಕ ಅರಣ್ಯ ಇಲಾಖೆ, ಕನ್ನಡಪ್ರಭ, ಸುವರ್ಣ ನ್ಯೂಸ್, ಜನಮಿತ್ರ ಹಾಗೂ ಶ್ರೀ ಗುರುಗಣೇಶ್ ಚೀಟ್ಸ್‌ನವರು ಅರಣ್ಯ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ವಿಷಯದಲ್ಲಿ ನಡೆಸುತ್ತಿರುವ ಚಿತ್ರಕಲಾ ಸ್ಪರ್ಧೆಯೂ ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆ ಹಾಗೂ ಕಾಳಜಿಗೆ ಸಹಕಾರಿಯಾಗಲಿದೆ ಜತೆಗೆ ಅಭಿನಂದನೀಯ ಕಾರ್ಯಕ್ರಮವೆಂದು ತಿಳಿಸಿ, ಶುಭ ಕೋರಿದರು.
ಶ್ರೀ ಗುರುಗಣೇಶ್ ಚೀಟ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಪ್ರೇರಣೆ ನುಡಿಗಳನ್ನಾಡಿ, ಶಾಲೆಯ ಸುಮಾರು ೨೧ ಸಾವಿರ ರೂ. ಮೌಲ್ಯದ ೬ ಸ್ಟೀಲ್ ಬೆಂಚ್ ಗಳನ್ನು ಕೊಡುಗೆಯಾಗಿ ನೀಡಿದರು. ಉಪಪ್ರಾಂಶುಪಾಲ ಕಾಳೇಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಮಾತನಾಡಿದರು. ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯ(ಜಿಎಚ್‌ಎಸ್) ವಿದ್ಯಾರ್ಥಿ ಸಂಗೀತ ಪ್ರಥಮ, ಪಟ್ಟಣದ ಜಿಎಚ್‌ಎಸ್‌ನ ದಿವ್ಯಾ ಎಂ.ಎಲ್. ತೃತೀಯ, ಗ್ರೀನ್‌ವುಡ್ ಆಂಗ್ಲ ಮಾಧ್ಯಮ ಶಾಲೆಯ ನಿಕ್ಷೇಪ್ ಯು. ತೃತೀಯ, ದೊಡ್ಡಳ್ಳಿ ಜಿಎಚ್‌ಎಸ್‌ನ ನವ್ಯ ಎಚ್.ಆರ್. ಹರದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೋಕ್ಷಿತಾ ಹಾಗೂ ಗ್ರೀನ್‌ವುಡ್ ಆಂಗ್ಲ ಮಾಧ್ಯಮ ಶಾಲೆಯ ಹರ್ಷ ಸಿ.ಎಸ್. ಸಮಾಧಾನ ಬಹುಮಾನ ಪಡೆದಿದ್ದಾರೆ.ವಿದ್ಯಾರ್ಥಿಗಳಾದ ಶ್ವೇತ ಹಾಗೂ ಬೃಂದ ಪ್ರಾರ್ಥಿಸಿದರು, ಶಿಕ್ಷಕ ಪಾಲಾಕ್ಷ ಸ್ವಾಗತಿಸಿದರು, ಶಿಕ್ಷಕಿ ಸುಧಾ ವಂದಿಸಿದರು ಹಾಗೂ ರವಿಶಂಕರ್ ನಿರೂಪಿಸಿದರು.
ಶ್ರೀ ಗುರುಗಣೇಶ್ ಚೀಟ್ಸ್ ಪ್ರೈ.ಲಿ. ನಿರ್ದೇಶಕ ಸುದರ್ಶನ್, ಸಮಾಜ ಸೇವಕ ಜೈಪ್ರಕಾಶ್, ಇಸಿಒ ಕೇಶವ್, ಆನಂದ್ ಹಾಗೂ ರಾಮಚಂದ್ರಪ್ಪ, ಕನ್ನಡಪ್ರಭ ಜಾಹಿರಾತು ವಿಭಾಗದ ಮಣಿಕಂಠ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಜಾತ ಅಲಿ, ಚಿತ್ರಕಲಾ ಶಿಕ್ಷಕರಾದ ಚಂದ್ರಶೇಖರ್, ಜಯರಾಮ್, ರವಿಕುಮಾರ್, ಸ್ವಾಮಿ, ಇತರರು ಇದ್ದರು.