ಗುಬ್ಬಿ ತಾಲೂಕಿನಲ್ಲಿ ನಡೆದ ಸ್ಕೂಟರ್ ರೇಸ್ ನಲ್ಲಿ ಬಹುಮಾನಗಳಿಸಿದ ಸ್ಪರ್ಧಿಗಳು ಹಾಗೂ ಇನ್ನಿತರರು. | Kannada Prabha
Image Credit: KP
ಕರ್ನಾಟಕ ಮೋಟಾರ್ ಕ್ಲಬ್ ವತಿಯಿಂದ ಗುಬ್ಬಿ ತಾಲೂಕಿನ ಗಡಿ ಭಾಗದ ಶಿವಸಂದ್ರ, ಕಲ್ಲು ಹರದಗೆರೆ, ಕೊರೆ ಭಾಗದಲ್ಲಿ ಬೈಕ್ ರೇಸ್ ನಡೆಯಿತು.
ಗುಬ್ಬಿ: ಕರ್ನಾಟಕ ಮೋಟಾರ್ ಕ್ಲಬ್ ವತಿಯಿಂದ ಗುಬ್ಬಿ ತಾಲೂಕಿನ ಗಡಿ ಭಾಗದ ಶಿವಸಂದ್ರ, ಕಲ್ಲು ಹರದಗೆರೆ, ಕೊರೆ ಭಾಗದಲ್ಲಿ ಬೈಕ್ ರೇಸ್ ನಡೆಯಿತು. ಮೂರು ಹಂತಗಳಲ್ಲಿ ನಡೆದ ಸ್ಪರ್ಧೆಯು ಸುಮಾರು 90 ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಮತ್ತು ಅರಣ್ಯ ಭಾಗದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 82 ಸ್ಪರ್ಧಿಗಳು ಭಾಗವಹಿಸುವ ಮೂಲಕ ಪ್ರಶಸ್ತಿ ಗೆಲುವಿಗೆ ಸೇಣಸಾಟವನ್ನು ನಡೆಸಿದ್ದರು. ಇದರಲ್ಲಿ ಎಂಟು ಮಹಿಳಾ ಅಭ್ಯರ್ಥಿಗಳು ಸಹ ಇದ್ದು ಪುರುಷ ಸ್ಪರ್ಧಿಗಳಂತೆ ಅವರು ಸಹ ಅತ್ಯಂತ ವೇಗವಾಗಿ ಸ್ಕೂಟರ್ಗಳನ್ನ ಚಲಾವಣೆ ಮಾಡಿದರು. ದೇಶದ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಿ ದ್ವಿಚಕ್ರವಾಹನ ರೇಸ್ ನಲ್ಲಿ ಪಾಲ್ಗೊಂಡಿದ್ದಾರೆ. ಹಳ್ಳಿಯ ಜನರಂತು ಆ ಬರುವ ವೇಗಕ್ಕೆ ಸಿಟಿ ಹೊಡೆದು ಕೂಗಾಡುವ ಮೂಲಕ ಸ್ಪರ್ಧೆಗಳಿಗೆ ಮತ್ತಷ್ಟು ಉತ್ಸಾಹವನ್ನು ಸಹ ತುಂಬಿದರು. ಕೆ 1000 ಸ್ಪರ್ಧೆಯಲ್ಲಿ ಉಡುಪಿ ಸಾಮಿಯಲ್ ಜೇಕಬ್, ನಟರಾಜು, ಅಬ್ದುಲ್ ವಾಹಿದ್ ವಿಜಯಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮೋಟಾರ್ ಕ್ಲಬ್ ರಾಜ್ಯ ಅಧ್ಯಕ್ಷ ಗೌತಮ್ರಾ, ಜ್ಯದ ಹಲವು ಭಾಗಗಳಲ್ಲಿ ದೇಶದ ನಾನ ಭಾಗದಲ್ಲಿ ಇಂತಹ ಸ್ಪರ್ಧೆಗಳು ನಡೆಯುತ್ತಿವೆ. ಈ ವರ್ಷ ಬೆಂಗಳೂರು ವಲಯದಿಂದ ಗುಬ್ಬಿ ತಾಲೂಕಿನಲ್ಲಿ ಸಾಕಷ್ಟು ದೂರದ ರೇಸ್ ನಿರ್ಮಾಣ ಮಾಡುವ ಮೂಲಕ ಒಂದು ದಾಖಲೆಯನ್ನು ಸೃಷ್ಟಿಸಿದ್ದೇವೆ. ಇದಕ್ಕೆ ಇಡೀ ಜಿಲ್ಲಾಡಳಿತ ತಾಲೂಕು ಆಡಳಿತ ಪೊಲೀಸ್ ಸಿಬ್ಬಂದಿ ಇಲ್ಲಿನ ಗ್ರಾಮಸ್ಥರ ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಫೋರ್ಟ್ ಕ್ಲಾಕ್ ಉಪಾಧ್ಯಕ್ಷ ಭಾಸ್ಕರ್ ಗುಪ್ತ, ಕಾರ್ಯದರ್ಶಿ ಸತ್ಯ ವೃತ್ತ, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಮುಖಂಡ ಕೊಂಡ್ಲಿ ಜಗದೀಶ್, ಈಶ್ವರಯ್ಯ, ಸೇರಿದಂತೆ ಹಲವು ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.