ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 69ರ, ನಗರದ ಪೊಲೀಸ್ ಠಾಣೆ ಪಕ್ಕದ ಗೌರಿಬಿದನೂರು-ಚಿಕ್ಕಬಳ್ಳಾಪುರ ನಡುವೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಉತ್ತರ ಪಿನಾಕಿನಿ ನದಿಯ ರಭಸಕ್ಕೆ ಕೊಚ್ಚಿ ಹೋಗಿದೆ.ಜಕ್ಕಲಮಡುಗು, ಶ್ರೀನಿವಾಸ ಸಾಗರ, ದಂಡಿಗಾನ ಹಳ್ಳಿ, ಮಂಚೇನಹಳ್ಳಿ ಭಾಗದಲ್ಲಿರುವ ಕೆರೆಗಳಲು ತುಂಬಿ ಅಪಾರ ಪ್ರಮಾಣದ ಜಲಾಶಯದ ಹೆಚ್ಚುವರಿ ನೀರಿನ ಪ್ರವಾಹಕ್ಕೆ ಉತ್ತರ ಪಿನಾಕಿನಿ ನದಿಗೆ ಹರಿದು ಬರುತ್ತವೆ. ಇದರಿಂದ ನದಿ ಪ್ರಮಾಣದ ನೀರು ಹೆಚ್ಚಾಗಿ, ಉತ್ತರ ಪಿನಾಕಿನಿ ನದಿ ಉಕ್ಕಿ ಹರಿಯುತ್ತಿದ್ದು , ರಾಷ್ಟೀಯ ಹೆದ್ದಾರಿ-69 ಕಾಮಗಾರಿ ನಿಮಿತ್ತ ಚಾಲ್ತಿಯಲ್ಲಿದ್ದಂತಹ ಸೇತುವೆಯನ್ನು ಕೆಡವಿ ಪಕ್ಕದಲ್ಲಿ ತಾತ್ಕಾಲಿಕವಾಗಿ ಸೇತುವೆಯನ್ನು ನಿರ್ಮಿಸಲಾಗುತ್ತು.ಸಂಚಾರ ಸಂಪರ್ಕ ಬಂದ್
ಸಾರ್ವಜನಿಕರು ಓಡಾಟಕ್ಕೆ ಈ ತಾತ್ಕಾಲಿಕ ಸೇತುವೆ ಮೂಲಕ ಪ್ರತಿನಿತ್ಯ ನೂರಾರು ಮಂದಿ ವಿದ್ಯಾರ್ಥಿಗಳು, ಸಾರ್ವಕನಿಕರು, ಸರ್ಕಾರಿ ನೌಕರರು ನಗರಕ್ಕೆ ಸಂಚರಿಸುತ್ತಿದ್ದರು. ಕಾಲ್ನಡಿಗೆಯಲ್ಲಿ ಬರುವವರಿಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ದಾರಿಯಾಗಿತ್ತು. ಈ ತಾತ್ಕಾಲಿಕ ಸೇತುವೆ ಕೊಚ್ಚಿ ಹೋದ ಪರಿಣಾಮ ಸಂಚಾರ ಬಂದ್ ಆಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿತ್ತು. ವೇಗವಾಗಿ ಪ್ರವಹಿಸುತ್ತಿರುವ ನೀರಿಗೆ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದ್ದು ಸಾರ್ವಜನಿಕರು ಸಂಪರ್ಕ ಕಳೆದುಕೊಂಡಿದ್ದು ಸಾರ್ವಜನಿಕರು ಸಂಚರಿಸಲು ಹರಸಾಹಸಪಡುತ್ತಿದ್ದಾರೆ.ತಾತ್ಕಾಲಿಕ ಸೇತುವ ನಿರ್ಮಾಣಗೌರಿಬಿದನೂರು ನಗರದ ರಸ್ತೆ ಅಗಲೀಕರಣದ ಕಾಮಗಾರಿಯಲ್ಲಿ ಈ ಹಿಂದೆ ಇದ್ದ ಸೇತುವೆ ಕಾಮಗಾರಿಯನ್ನು ಕೇವಲ 8ದಿನಗಳ ಹಿಂದೆಯಷ್ಟೇ ಪ್ರಾರಂಬಿಸಿದರು. ನಗರದ ಮದ್ಯ ಭಾಗದಲ್ಲಿ ಹಾದು ಹೋಗುವ ರಾಷ್ಟೀಯ ಹೆದ್ದಾರಿ 69 ರಸ್ತೆಯು ರಾಜ್ಯದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ, ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳ ಸಂಚಾರವಿರುತ್ತದೆ, ಇಂತಹ ರಾಷ್ಟೀಯ ಹೆದ್ದಾರಿಯಲ್ಲಿರುವ, ಸೇತುವೆಯನ್ನು ಇತ್ತೀಚೆಗೆ ಕೆಡವಿ ಹೊಸ ಸೇತುವೆ ನಿರ್ಮಿಸಲು ಪ್ರಾರಂಭಿಸಲಾಗಿತ್ತು. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಪರ್ಯಾಯವಾಗಿ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ.