ಚಿರತೆಗೆ ಬಲಿಯಾದ ಎಮ್ಮೆ

| Published : Dec 02 2023, 12:45 AM IST

ಸಾರಾಂಶ

ಕುಣಿಗಲ್: ಎಮ್ಮೆಯ ಮೇಲೆ ಚಿರತೆ ದಾಳಿ ಮಾಡಿ ಕೊಂದು ತಿಂದಿರುವ ಘಟನೆ ನಡೆದಿದೆ. ಕೊತ್ತಕೆರೆ ಪಾಳ್ಯ ಗ್ರಾಮದಲ್ಲಿ ಗಂಗಣ್ಣ ಅವರಿಗೆ ಸೇರಿದ ಗಂಗಣ್ಣ ಅವರ ಮನೆ ತೋಟದಲ್ಲಿರುವುದರಿಂದ ಹಾಗೂ ರಾತ್ರಿ ವೇಳೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದರಿಂದ ಚಿರತೆ ಎಮ್ಮೆಯ ಮೇಲೆ ದಾಳಿ ಮಾಡಿ ಕೊಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕುಣಿಗಲ್:

ಎಮ್ಮೆಯ ಮೇಲೆ ಚಿರತೆ ದಾಳಿ ಮಾಡಿ ಕೊಂದು ತಿಂದಿರುವ ಘಟನೆ ನಡೆದಿದೆ. ಕೊತ್ತಕೆರೆ ಪಾಳ್ಯ ಗ್ರಾಮದಲ್ಲಿ ಗಂಗಣ್ಣ ಅವರಿಗೆ ಸೇರಿದ

ಗಂಗಣ್ಣ ಅವರ ಮನೆ ತೋಟದಲ್ಲಿರುವುದರಿಂದ ಹಾಗೂ ರಾತ್ರಿ ವೇಳೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದರಿಂದ ಚಿರತೆ ಎಮ್ಮೆಯ ಮೇಲೆ ದಾಳಿ ಮಾಡಿ ಕೊಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆ ನಡೆದ ಬಳಿಕ ಪಶು ವೈದ್ಯಾಧಿಕಾರಿ, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರ್ಕಾರದಿಂದ ಸಿಗುವ ಅನುದಾನವನ್ನು ಕೊಡಿಸುವ ಭರವಸೆ ನೀಡಿದ್ದಾರೆ.

ಚಿರತೆ ದಾಳಿ ನಿರಂತರವಾಗಿ ನಡೆಯುತ್ತಿದ್ದು ಇದಕ್ಕೆ ಪರಿಹಾರ ನೀಡಬೇಕೆಂದು ರೈತ ಗಂಗಣ್ಣ ಒತ್ತಾಯಿಸಿದ್ದಾರೆ.

ಮನೆಯ ಸುತ್ತಮುತ್ತ ಪ್ರತಿನಿತ್ಯ ಚಿರತೆ ಓಡಾಡುವ ಗುರುತುಗಳಿದ್ದು, ತಕ್ಷಣ ಚಿರತೆ ಬಂಧಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.