ಶಾಂತಿಯುತವಾಗಿ ಬಕ್ರೀದ್‌ ಆಚರಣೆಗೆ ಕರೆ

| Published : Jun 17 2024, 01:37 AM IST

ಸಾರಾಂಶ

ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಪಿ.ಎಸ್.ಐ ಬಸವರಾಜ ತಿಪ್ಪರಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬಕ್ರೀದ್‌ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಪಿ.ಎಸ್.ಐ ಬಸವರಾಜ ತಿಪ್ಪರಡ್ಡಿ ಹೇಳಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಶನಿವಾರ ಬಕ್ರೀದ್‌ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವರಹಿಪ್ಪರಗಿ ಪಟ್ಟಣ ಸಾಮರಸ್ಯಕ್ಕೆ ಹೆಸರಾಗಿದೆ. ಅಂಥ ಹೆಸರಿಗೆ ಚ್ಯುತಿಯಾಗದಂತೆ ಇರಬೇಕು. ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸರ್ವರೂ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಬೇಕು. ಸರಕಾರದ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಕಾನೂನು ಪಾಲನೆ ಮಾಡದಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುಗುವುದು ಎಂದರು.

ನಂತರ ಪಟ್ಟಣದ ಪ್ರಮುಖರುಗಳಾದ ಮೈಬೂಬಸಾಬ ಹುಂಡೇಕಾರ, ಶಂಕರಗೌಡ ಪಾಟೀಲ ಹಾಗೂ ಎ.ಡಿ.ಮುಲ್ಲಾ ಸೇರಿದಂತೆ ಹಲವಾರು ಜನ ಮುಖಂಡರು ಮಾತನಾಡಿ, ಪಟ್ಟಣ ಸೌಹಾರ್ದತೆಗೆ ಹೆಸರಾಗಿದೆ. ಹಿಂದೂ ಮುಸ್ಲಿಂ ಸಮುದಾಯದವರು ಎಲ್ಲ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುತ್ತ ಬಂದಿದ್ದಾರೆ. ಸರ್ಕಾರದ ನಿಯಮಗಳನ್ನು ಗೌರವಿಸುವ ಮೂಲಕ ಇಲಾಖೆಯ‌ ಜೋತೆ ಸಹಕರಿಸುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಅಜೀಜ ಯಲಗಾರ, ರಾಘವೇಂದ್ರ ಗುಡಿಮನಿ, ಸೋಮು ದೇವೂರ, ಮಲ್ಲಿಕಾರ್ಜುನ ಜಡಿಮಠ, ರಾವುತ ತಳಕೇರಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.