ವಕೀಲರ ಸಂಘದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಹಿರಿಯ ವಕೀಲ ಕೆ.ಲಿಂಗರಾಜು
ಕನ್ನಡಪ್ರಭ ವಾರ್ತೆ ತರೀಕೆರೆಡಾ.ಬಿ.ಆರ್.ಅಂಬೇಡ್ಕರ್ ಬಹಳ ಮೇಧಾವಿಗಳು, ಸಂವಿಧಾನ ಶಿಲ್ಪಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದವರು ಜಾತಿ ಬೇಧ ವಿರೋಧಿಸಿದರು ಎಂದು ಹಿರಿಯ ವಕೀಲ ಕೆ.ಲಿಂಗರಾಜು ಹೇಳಿದ್ದಾರೆ.ವಕೀಲರ ಸಂಘದಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಎಲ್ಲಾ ವರ್ಗದ ಜನರು ವಿದ್ಯಾವಂತರಾಗಲು ಅವರು ಶ್ರಮಿಸಿದರು. ಅವರ ಅದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಹಿರಿಯ ವಕೀಲ ಟಿ.ಆರ್.ಕೃಷ್ಣಮೂರ್ತಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಸಮಾಜದಲ್ಲಿ ಕೆಳವರ್ಗದ ಜನರನ್ನುಮೇಲೆತ್ತಿ ಸಮಾನತೆಗೆ ಶ್ರಮಿಸಿದರು. ಇವರು ಬರೆದಿರುವ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ದೊರೆಯುವಂತೆ ಮಾಡಿದ ಮಹಾನ್ ವ್ಯಕ್ತಿ, ವರ್ಣಬೇಧವನ್ನು ಖಂಡಿಸಿದರು. ಇವರು ದೇಶಕ್ಕೆ ಮಾದರಿಯಾದವರು. ಅವರ ಜಯಂತಿಯನ್ನು ವಕೀಲರ ಸಂಘದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದ ಅವರು ಅಮೆರಿಕಾದಲ್ಲೂ ಸಹ ಡಾ. ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ವಕೀಲ ಕೆ.ಚಂದ್ರಪ್ಪ ಮಾತನಾಡಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಇದು ಹೆಮ್ಮೆಯ ವಿಷಯವಾಗಿದೆ, ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲದೆ ಎಲ್ಲ ವರ್ಗದ ಜನರಿಗೆ ಕೊಡುಗೆ ನೀಡಿದ್ದಾರೆ. ರಿಸರ್ವ್ ಬ್ಯಾಂಕ್ ಇನ್ನೂ ಮುಂತಾದ ಕೊಡುಗೆ ನೀಡಿ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಉಪನ್ಯಾಸಕರು ಬಸವರಾಜ ನಾಯ್ಕ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಚ್.ಶಿವಶಂಕರ ನಾಯ್ಕ ಅಧ್ಯಕ್ಷೀಯ ಭಾಷಣ ಮಾಡಿದರು. ವಕೀಲರಾದ ಎಂ.ಕೆ.ತೇಜಮೂರ್ತಿ, ಎಸ್.ಸುರೇಶ್ ಚಂದ್ರ, ಬಿ.ಟಿ.ಕೆಂಚಪ್ಪ, ಉಪಾಧ್ಯಕ್ಷರಾದ ರಜನೀಶ್, ಕಾರ್ಯದರ್ಶಿ ಎ.ನವೀನ್, ಟಿ.ಡಿ.ಆನಂದ್,
ವಸಂತ್ ಅವರು ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಅಮರನಾಥ್, ಮಹಿಳಾ ವಕೀಲರಾದ ವೀಣಾ, ವಕೀಲರು ಹಾಗೂ ಮಹಿಳಾ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-15ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ವಕೀಲರ ಸಂಘದಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಹಿರಿಯ ವಕೀಲರಾದ ಕೆ.ಲಿಂಗರಾಜು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಎಚ್.ಶಿವಶಂಕರನಾಯ್ಕ, ವಕೀಲರಾದ ಎಸ್. ಸುರೇಶ್ ಚಂದ್ರ ಮತ್ತಿತರರು ಭಾಗವಹಿಸಿದ್ದರು.