ಸಾರಾಂಶ
ಗುಡ್ಡಗಾಡು ಪ್ರದೇಶದಲ್ಲಿ ಗಿಡನೆಟ್ಟು ದಶ ಲಕ್ಷ ಗಿಡ ನೆಡುವ ಅಭಿಯಾನ
ಯಲ್ಲಾಪುರ: ತಾಲೂಕಿನ ಗುಡ್ಡಗಾಡು ಪ್ರದೇಶ ಹೊಂದಿರುವ ೧೧ ವಿವಿಧ ಗ್ರಾಪಂ ವ್ಯಾಪ್ತಿಗಳಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನವು ಜೂ.೨೧ರಂದು ಯಶಸ್ವಿಯಾಗಿ ಜರುಗಿದೆ ಎಂದು ತಾಲೂಕು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ ತಿಳಿಸಿದ್ದಾರೆ.ತಾಲೂಕಿನ ಕುಂದರಗಿ, ಕಣ್ಣಿಗೇರಿ, ಕಿರವತ್ತಿ, ಮಾವಿನಮನೆ, ಹಿತ್ಲಳ್ಳಿ, ಮಂಚೀಕೇರಿ, ನಂದೊಳ್ಳಿ, ಕಂಪ್ಲಿ, ವ್ರಜಳ್ಳಿ ಮುಂತಾದ ಗ್ರಾಪಂ ವ್ಯಾಪ್ತಿಗಳಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.
ತಾಲೂಕಾದ್ಯಂತ ಜರುಗಿದ ಅಭಿಯಾನದಲ್ಲಿ ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಆನಗೋಡಿನ ದಿವಾಕರ ನಾಗ ಮರಾಠಿ, ಸುಬ್ರಾಯ ಸೀತಾರಾಮ ಹೆಗಡೆ, ನಾಗರಾಜ ಪಟಗಾರ, ವಿನಾಯಕ ಮರಾಠಿ, ಸುಭಾಷ್ ಸಿದ್ದಿ ಕಣ್ಣಿಗೇರಿ, ನರಸಿಂಹ ನಾಯ್ಕ, ಕೃಷ್ಣ ನಾಯ್ಕ, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಹಾಸಣಗಿಯ ಚಂದ್ರಶೇಖರ ಪೂಜಾರಿ, ವಿನೋದ ತಳೇಕರ, ರಘು ಮರಾಠಿ, ವಿನಾಯಕ ಮರಾಠಿ, ಸೀತಾರಾಮ ಈಶ್ವರ ನಾಯ್ಕ ಕುಂದರಗಿ, ಪ್ರಭಾಕರ ನಾರಾಯಣ ನಾಯ್ಕ, ಬಾಲಚಂದ್ರ ತಮ್ಮಣ್ಣ ಪಟಗೇಕರ್, ಮಹಾಬಲೇಶ್ವರ ಭಟ್ಟ ಮಾವಿನಮನೆ, ಅನಂತ ಗೌಡ ಮಾವಿನಮನೆ ಮುಂತಾದವರು ಇದ್ದರು.ಗುಡ್ಡಗಾಡು ಪ್ರದೇಶದಲ್ಲಿ ಗಿಡನೆಟ್ಟು ದಶ ಲಕ್ಷ ಗಿಡ ನೆಡುವ ಅಭಿಯಾನದಲ್ಲಿ ಅರಣ್ಯವಾಸಿಗಳು ಪಾಲ್ಗೊಂಡರು.
;Resize=(128,128))
;Resize=(128,128))