ಸಾರಾಂಶ
ಶಹಾಪುರ: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯದಲ್ಲಿ ಗುರುರಾಯರ ಮಧ್ಯಾರಾಧನೆ ಸಂಭ್ರಮ ಮನೆ ಮಾಡಿತ್ತು. ಹಳೆಪೇಟೆಯಲ್ಲಿ ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರ ಮಧ್ಯಾರಾಧನೆ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಸುಪ್ರಭಾತ ಅಷ್ಟೋತ್ತರ, ವೇದನಿಧಿ ತೀರ್ಥ ಪಾರಾಯಣ ಸಂಘದಿಂದ ವಾಯುಸ್ಥಿತಿ ಪುನಶ್ಚರಣ, ಪಾರಾಯಣ, ಹರಿ, ವಾಯು ಗುರುಗಳ ಸನ್ನಿಧಿಗೆ ಅಲಂಕಾರ, ಪೂಜೆ, ನೈವೇದ್ಯ ಸಮರ್ಪಣೆ, ರಥೋತ್ಸವ ನಡೆಯಿತು. ಕಲಿಯುಗದ ಕಾಮಧೇನು ಭಕ್ತರ ಇಷ್ಟಾರ್ಥ ಈಡೇರಿಸುವ ಗುರುರಾಯರ ದರ್ಶನ ಭಕ್ತರು ಪಡೆದರು. ಸಂಗೀತ ಸೇವೆ, ಭಜನಾ ಸೇವೆ ನಡೆಯಿತು. ಗುರುರಾಜ ಸೇವಾ ಸಂಘದ ಅಧ್ಯಕ್ಷ ತಿರುಮಲಾಚಾರ್ಯ ಭಕ್ರಿ, ಡಾ. ರಾಮರಾವ ಕುಲಕರ್ಣಿ, ರಾಘವೇಂದ್ರ ಸರ್ನಾಡ, ನರಸಿಂಹಾಚಾರ್ಯ ರೊಟ್ಟಿ, ವಿಠ್ಠಲಾಚಾರ್ಯ ಪ್ರತಿನಿಧಿ, ಪಾಂಡುರಂಗಾಚಾರ್ಯ ವಡಿಗೇರಾ, ವಾಸುದೇವಾ ಚಾರ್ಯ, ಶ್ರೀನಿವಾಸಾಚಾರ್ಯ ಸಗರ, ಶ್ರೀನಿವಾಸರಾವ ಅರಿಕೇರಿ, ಸತ್ಯನಾರಾಯಣ ದೇಸಾಯಿ, ರವೀಂದ್ರ ದೇಶಪಾಂಡೆ, ಗುಂಡೇರಾವ ದೇಶಪಾಂಡೆ, ವೈ.ಕೆ. ಕುಲಕರ್ಣಿ, ಶ್ಯಾಮರಾವ ಬುದನೂರು, ರಾಘವೇಂದ್ರ ಖಾನಾಪುರ, ಭೀಮಾಚಾರ್ಯ ಜೋಶಿ, ಪ್ರಕಾಶ ಪದಕಿ, ಸುಧೀಂದ್ರ ಯಾಟಗಲ್, ಗುರುರಾಜ ದೇಶಪಾಂಡೆ, ಕಿರಣ ಭಟ್, ವಾದಿರಾಜ, ವೆಂಕಟೇಶ ಮುನಮುಟಗಿ, ಅಮರ, ಮಧ್ವಚಾರ್ಯ ಕಕ್ಕೇರಾ, ಗೋಪಾಲರಾವ ಕಕ್ಕೇರಿ, ಕೃಷ್ಣ ಗುಡೂರು ಇದ್ದರು.
-----ಫೋಟೊ: 22ವೈಡಿಆರ್8: ಶಹಾಪುರ ನಗರದ ಹಳಪೇಟೆಯಲ್ಲಿ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಭ್ರಮದಿಂದ ಆಚರಿಸಲಾಯಿತು.