ತೋಗುಣಶಿಯಲ್ಲಿ ಸಂಭ್ರಮದ ವಿಶ್ವಾರಾಧ್ಯಾರ ರಥೋತ್ಸವ

| Published : Mar 10 2024, 01:45 AM IST

ಸಾರಾಂಶ

ಗುಳೇದಗುಡ್ಡ ಸಮೀಪದ ತೋಗುಣಶಿ ಗ್ರಾಮದ ಶ್ರೀ ಅಮರೇಶ್ವರ ಮಠದ ಜಗದ್ಗುರು ವಿಶ್ವಾರಾಧ್ಯರ ರಥೋತ್ಸವ ಶಿವರಾತ್ರಿ ದಿನವಾದ ಶುಕ್ರವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಸಮೀಪದ ತೋಗುಣಶಿ ಗ್ರಾಮದ ಶ್ರೀ ಅಮರೇಶ್ವರ ಮಠದ ಜಗದ್ಗುರು ವಿಶ್ವಾರಾಧ್ಯರ ರಥೋತ್ಸವ ಶಿವರಾತ್ರಿ ದಿನವಾದ ಶುಕ್ರವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ 6ಗಂಟೆಗೆ ವಿಶ್ವಾರಾಧ್ಯರ ಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಿತು. 10 ಗಂಟೆಗೆ ಪಾಲಕಿ ಪೂಜಾ ಕಾರ್ಯಕ್ರಮ ಮತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾಲಕಿ ಮೆರವಣಿಗೆ ಜರುಗಿತು. ತಿಮ್ಮಸಾಗರ ಗ್ರಾಮದಿಂದ ಕಳಸದ ಮೆರವಣಿಗೆ, ತೆಗ್ಗಿ ಗ್ರಾಮದಿಂದ ಹಗ್ಗದ ಮೆರವಣಿಗೆ, ಹಾನಾಪುರ ಎಸ್.ಪಿ. ನಂದಿಕೋಲು, ಕೋಟೆಕಲ್ ಗ್ರಾಮದಿಂದ ಬಾಳೆಕಂಬ, ಕಬ್ಬು, ತೋಗುಣಶಿ ಗ್ರಾಮದಿಂದ ಹೂವಿನ ಹಾರ, ಮುರುಡಿ ಗ್ರಾಮದಿಂದ ಛತ್ರ ಚಾಮರಗಳು ಆಗಮಿಸಿದವು.

ಸಂಜೆ 6ಗಂಟೆಗೆ ಡಾ.ಶ್ರೀ ನೀಲಕಂಠ ಶಿವಾಚಾರ್ಯ ಶ್ರೀಗಳು ನೇತೃತ್ವದಲ್ಲಿ ವಿಶ್ವಾರಾಧ್ಯರ ಜಯಘೋಷಗಳ ಮಧ್ಯೆ ರಥೋತ್ಸವ ಸಂಭ್ರಮದಿಂದ ನಡೆಯಿತು. ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಹೊಳೆಹುಚ್ಚೆಶ್ವರ ಶ್ರೀಗಳು, ಮುರುಘಾಮಠದ ಕಾಶಿನಾಥ ಶ್ರೀಗಳು, ಒಪ್ಪತ್ತೇಶ್ವರ ಮಠದ ಒಪ್ಪತ್ತೆಶ್ವರ ಶ್ರೀಗಳು, ಸಸ್ತಾಪುರದ ಈಶ್ವರಾನಂದ ಶ್ರೀಗಳು, ಕಮತಗಿ ಹಿರೇಮಠದ ಶಿವುಕುಮಾರ ಶಿವಾಚಾರ್ಯ ಶ್ರೀಗಳು, ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಮಹಾಗುಂಡಪ್ಪ ಸುಂಕದ, ಎಸ್.ಎಂ. ಪಾಟೀಲ, ಶಿವು ವಾಲಿಕಾರ, ಬಸವರಾಜ ಚಿಲ್ಲಾಪೂರ, ಬಸರಕೋಡ, ಜಾನಮಟ್ಟಿ, ಮುತ್ತಣ್ಣ ಕಾಳನ್ನವರ ಸೇರಿದಂತೆ ಕೋಟೆಕಲ್, ಮುರುಡಿ, ತಿಮ್ಮಸಾಗರ, ತೆಗ್ಗಿ, ಹಾನಾಪೂರ ಎಸ್.ಪಿ. ತೋಗುಣಶಿ ತಾಂಡಾ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.