ಸ್ವಚ್ಛ ಪರಿಸರದಲ್ಲಿ ಚಿಲಿಪಿಲಿಗುಟ್ಟುವ ಗುಬ್ಬಚ್ಚಿ

| Published : Mar 22 2024, 01:09 AM IST

ಸಾರಾಂಶ

ಗುಬ್ಬಚ್ಚಿಗಳ ಸಂಖ್ಯೆಯು ಜಾಗತಿಕವಾಗಿ ಕುಸಿಯುತ್ತಿದೆ. ಗುಬ್ಬಚ್ಚಿಗಳು ಒಂದು ಪ್ರದೇಶದ ಪರಿಸರದ ಆರೋಗ್ಯದ ಉತ್ತಮ ಸೂಚನೆಯಾಗಿ ಗುರುತಿಸಲ್ಪಟ್ಟಿರುವುದರಿಂದ ಗುಬ್ಬಚ್ಚಿಗಳ ಸಂರಕ್ಷಣೆ ಮಾಡಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರಿಕರಣದಿಂದ ಕಾಡು ಕಡಿದು ನಾಶ ಮಾಡುತಿದ್ದೇವೆ. ಟೆಕ್ನಾಲಜಿ ಹೆಸರಲ್ಲಿ ಮೊಬೈಲ್ ಟವರ್ ಗಳ ರೇಡಿಯೇಷನ್ ಬಿಡುಗಡೆಯಿಂದ ವಾತಾವರಣ ಕಲುಷಿತಗೊಂಡ ಕಾರಣದಿಂದಾಗಿ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗುತ್ತಿದೆ. ಎಂದು ನಾಗಾರ್ಜುನ ಕಾಲೇಜ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ರವಿಕುಮಾರ್ ತಿಳಿಸಿದರು. ನಗರ ಹೊರ ವಲಯದ ನಾಗಾರ್ಜುನ ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುಬ್ಬಚ್ಚಿ ಸಂತತಿ ಹೆಚ್ಚಿಸಲು ಕಾಲೇಜಿನ ಕ್ಯಾಂಪಾಸ್ ಆವರಣದ ಪ್ರತಿಯೊಂದು ಮರಕ್ಕೂ ನೀರು ಮತ್ತು ಆಹಾರದ ಡಬ್ಬಿಗಳನ್ನು ಕಟ್ಟುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೀಣಿಸುತ್ತಿದೆ ಗುಬ್ಬಚ್ಚಿ ಸಂತತಿಜಾಗತಿಕವಾಗಿ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಗುಬ್ಬಚ್ಚಿಗಳ ಸಂರಕ್ಷಣೆ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಗುಬ್ಬಚ್ಚಿ ದಿನವನ್ನು ಉದ್ದೇಶಿಸಲಾಗಿದೆ. ವಿಶ್ವ ಗುಬ್ಬಚ್ಚಿ ದಿನವು ವಾರ್ಷಿಕ ಕಾರ್ಯಕ್ರಮವಾಗಿದ್ದು ಇದನ್ನು ಮಾ.20 ರಂದು ಗುರುತಿಸಲಾಗಿದೆ. ಇದು ಗುಬ್ಬಚ್ಚಿಗಳ ಸಂರಕ್ಷಣೆ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ, ಅವುಗಳ ಸಂಖ್ಯೆಯು ಜಾಗತಿಕವಾಗಿ ಕುಸಿಯುತ್ತಿದೆ. ಗುಬ್ಬಚ್ಚಿಗಳು ಒಂದು ಪ್ರದೇಶದ ಪರಿಸರದ ಆರೋಗ್ಯದ ಉತ್ತಮ ಸೂಚನೆಯಾಗಿ ಗುರುತಿಸಲ್ಪಟ್ಟಿರುವುದರಿಂದ ಗುಬ್ಬಚ್ಚಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ ಎಂದು ತಿಳಿಸಿದರುರೈತನ ಮಿತ್ರ ಗುಬ್ಬಚ್ಚಿ

ಗುಬ್ಬಚ್ಚಿ ರೈತನ ಮಿತ್ರನಾಗಿದ್ದು,ಪರಾಗಸ್ಪರ್ಶ ಮತ್ತು ರೈತರ ಬೆಳೆಗಳನ್ನ ಕಾಡುವ ಕೀಟಗಳನ್ನು ತಿಂದು ಬದುಕುತ್ತವೆ. ಮಾನವನ ಅತಿ ಆಸೆ ನಗರೀಕರಣ ದಿಂದಾಗಿ ಮರ ಕಡಿದು ಅರಣ್ಯ ನಾಶ ಮಾಡುತಿದ್ದೇವೆ ಜತೆಗೆ ಟೌವರ್ ಗಳ ರೇಡಿಯೇಶನ್ ಕಾರಣದಿಂದಲೂ ಗುಬ್ಬಚ್ಚಿಗಳು ಸಾವಾಗಿ ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಈ ವೇಳೆ ನಾಗಾರ್ಜುನ ಕಾಲೇಜ್ ಆಫ್ ಟೆಕ್ನಾಲಜಿಯ ಇನ್ಪರ್ ಮೇಶನ್ ಮತ್ತು ಸೈನ್ಸ್ ವಿಭಾಗ ಪ್ರಾಂಶುಪಾಲ ಸಂಜುಕುಮಾರ್, ಪ್ರೋಫೆಸರ್ ರಮೇಶ್ ಕಲ್ಬುರ್ಗಿ, ಅಸಿಸ್ಟೆಂಟ್ ಪ್ರೊಫೆಸರ್ ಸುಬ್ರಮಣ್ಯ, ಕಾಲೇಜಿನ ಭೋಧಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.