ಗೊಂದಲ ಸರಿಪಡಿಸದ ಎನ್‌ಟಿಎದಿಂದ ಸುಪ್ರೀಂ ಕೋರ್ಟ್‌ ಆದೇಶ ಸ್ಪಷ್ಟ ಉಲ್ಲಂಘನೆ

| Published : Jun 23 2024, 02:01 AM IST

ಗೊಂದಲ ಸರಿಪಡಿಸದ ಎನ್‌ಟಿಎದಿಂದ ಸುಪ್ರೀಂ ಕೋರ್ಟ್‌ ಆದೇಶ ಸ್ಪಷ್ಟ ಉಲ್ಲಂಘನೆ
Share this Article
  • FB
  • TW
  • Linkdin
  • Email

ಸಾರಾಂಶ

ನೀಟ್ ಪರೀಕ್ಷಾ ಅಕ್ರಮದ ತನಿಖೆಗೆ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿ, ಶೇ.0.001ರಷ್ಟು ಗೊಂದಲವಿದ್ದರೂ ಸರಿಪಡಿಸುವಂತೆ ಎನ್‌ಟಿಎಗೆ ಆದೇಶಿಸಿದೆ. ಆದರೂ, ಯಾವುದೇ ಕ್ರಮ ಕೈಗೊಳ್ಳದ ಎನ್‌ಟಿಎ ಅಸಡ್ಡೆ ಖಂಡಿಸಿ ನಗರದಲ್ಲಿ ಶುಕ್ರವಾರ ಜಿಲ್ಲಾ ಎನ್ಎಸ್‌ಯುಐ ವತಿಯಿಂದ ಪ್ರತಿಭಟನೆ ನಡೆಯಿತು.

- ಪ್ರತಿಭಟನೆ ನಡೆಸಿ ಎನ್‌ಎಸ್‌ಯುಐ ಸದಸ್ಯರ ಆಕ್ರೋಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನೀಟ್ ಪರೀಕ್ಷಾ ಅಕ್ರಮದ ತನಿಖೆಗೆ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿ, ಶೇ.0.001ರಷ್ಟು ಗೊಂದಲವಿದ್ದರೂ ಸರಿಪಡಿಸುವಂತೆ ಎನ್‌ಟಿಎಗೆ ಆದೇಶಿಸಿದೆ. ಆದರೂ, ಯಾವುದೇ ಕ್ರಮ ಕೈಗೊಳ್ಳದ ಎನ್‌ಟಿಎ ಅಸಡ್ಡೆ ಖಂಡಿಸಿ ನಗರದಲ್ಲಿ ಶುಕ್ರವಾರ ಜಿಲ್ಲಾ ಎನ್ಎಸ್‌ಯುಐ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಮಹಾತ್ಮ ಗಾಂಧಿ ಕಾಲೇಜು, ಎವಿಕೆ ಕಾಲೇಜು ಬಳಿಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ, ಸಮಗ್ರ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ಮನವಿ ಅರ್ಪಿಸಲಾಯಿತು.

ಜಿಲ್ಲಾಧ್ಯಕ್ಷ ಅಲಿ ರಹಮತ್ ಪೈಲ್ವಾನ್ ಈ ಸಂದರ್ಭ ಮಾತನಾಡಿ, ನೀಟ್ ಫಲಿತಾಂಶ ಜೂ.4ರಂದು ಬಂದಿದ್ದು, ಅದರಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. 67 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ದೇಶಾದ್ಯಂತ ಸುಮಾರು 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ಒಂದೇ ರಾಜ್ಯದ ಒಂದೇ ಜಿಲ್ಲೆಯ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರಿಪೂರ್ಣ 720 ಅಂಕ ಪಡೆದಿದ್ದು, ಅನೇಕ ಪ್ರಶ್ನೆ ಹುಟ್ಟುಹಾಕಿದೆ ಎಂದರು.

ನೀಟ್ ಪರೀಕ್ಷೆಯಲ್ಲಿ 180 ಪ್ರಶ್ನೆಗಳಿದ್ದು, ಸರಿ ಉತ್ತರಕ್ಕೆ 4 ಅಂಕ, ತಪ್ಪು ಉತ್ತರಕ್ಕೆ ಮೈನಸ್ 1 ಅಂಕ ಇರುತ್ತದೆ. ಆದರೆ, ಫಲಿತಾಂಶದಲ್ಲಿ ಸುಮಾರು ವಿದ್ಯಾರ್ಥಿಗಳು 717, 718, 719 ಅಂಕ ಪಡೆದಿರುತ್ತಾರೆ. ಹೀಗೆ ಪಡೆಯುವುದು ಅಸಾಧ್ಯದ ಮಾತು. ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್ ಕೊಟ್ಟಿದ್ದು ಯಾವ ಆಧಾರದ ಮೇಲೆಂಬ ಬಗ್ಗೆಯೂ ಎನ್‌ಟಿಎ ಸ್ಪಷ್ಟನೆ ನೀಡಿಲ್ಲ ಎಂದು ದೂರಿದ ಅವರು, ಜೂ.14ರಂದು ಪ್ರಕಟಿಸಬೇಕಿದ್ದ ನೀಟ್ ಫಲಿತಾಂಶ‍ ಜೂ.4ರಂದೇ ಪ್ರಕಟಿಸಿದ್ದು ಏಕೆ? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.

ಸಂಘಟನೆ ಮುಖಂಡರು, ಸದಸ್ಯರು ಇದ್ದರು.

- - - -21ಕೆಡಿವಿಜಿ7: ದಾವಣಗೆರೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾ ಘಟಕದಿಂದ ನೀಟ್ ಪರೀಕ್ಷಾ ಅಕ್ರಮ, ಎನ್‌ಟಿಎ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಯಿತು.