ಭರವಸೆಗಳು ಈಡೇರಿಸಿದ ಕಾಂಗ್ರೆಸ್‌

| Published : Apr 21 2024, 02:27 AM IST

ಸಾರಾಂಶ

ಹೊಸಕೋಟೆ: ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದಂತಹ ಗ್ಯಾರಂಟಿಗಳನ್ನ ಈಡೇರಿಸಿದ್ದು ಕಾರ್ಯಕರ್ತರು ಧೈರ್ಯವಾಗಿ ಮತ ಕೇಳಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದಂತಹ ಗ್ಯಾರಂಟಿಗಳನ್ನ ಈಡೇರಿಸಿದ್ದು ಕಾರ್ಯಕರ್ತರು ಧೈರ್ಯವಾಗಿ ಮತ ಕೇಳಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಮಾಕನಪುರ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ನೀಡಿದ ಐದು ಗ್ಯಾರಂಟಿಗಳನ್ನ ಸಮರ್ಪಕವಾಗಿ ಈಡೇರಿಸಿದೆ. ಆದ್ದರಿಂದ ಸರ್ಕಾರಿ ಯೋಜನೆಗಳನ್ನ ಮತದಾರರಿಗೆ ಮನದಟ್ಟು ಮಾಡಿಸಿ, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದರು.

ಗ್ರಾಪಂ ಸದಸ್ಯ ತಮ್ಮಯ್ಯಗೌಡ ಮಾತನಾಡಿ, ಶರತ್ ಬಚ್ಚೇಗೌಡ ಒಬ್ಬ ಯುವ ಶಾಸಕರಾಗಿದ್ದು ಲೋಕಸಭೆ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರನ್ನ ಗೆಲ್ಲಿಸಿಕೊಂಡರೆ ಇಬ್ಬರು ಯುವಕರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲಿದ್ದಾರೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಬಿಜೆಪಿ ಕಾರ್ಯಕರ್ತರಾದ ಅರುಣ್ ಕುಮಾರ್, ನಾರಾಯಣಸ್ವಾಮಿ, ರಾಜೇಶ್, ರಾಮಾಂಜಿನಪ್ಪ, ಮುನಿಯಾಂಜಿನಪ್ಪ, ಲಕ್ಷ್ಮಣ್, ಹರೀಶ್ ಸರಿದಂತೆ ಇಪ್ಪತ್ತಕ್ಕೂ ಹೆಚ್ಚಿನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂಧರ್ಭದಲ್ಲಿ ಮಾಜಿ ತಾಪಂ ಸದಸ್ಯ ರಾಮೇಗೌಡ, ಬಮೂಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಮಂಡೂರಪ್ಪ, ಮಲ್ಲಿಕಾರ್ಜುನ್, ಎ.ಮುನಿರಾಜು, ಬಚ್ಚೇಗೌಡ, ವಿಜಯಕುಮಾರ್, ಮುನಿವೆಂಕಟಪ್ಪ, ಮಂಜುಳಾ ನಾಗಾರ್ಜುನ, ವೇದಾವತಿ ರಾಮು, ಲಕ್ಷ್ಮೀಸಾಗರ್, ಅಪ್ಪಾಜಿಗೌಡ, ನಾಗರಾಜ್, ನಾರಾಯಣಸ್ವಾಮಿ, ಅನಿಲ್‌ಕುಮಾರ್, ಲಕ್ಷ್ಮಣ್, ತಮ್ಮೇಗೌಡ ಹಾಜರಿದ್ದರು.

ಫೋಟೋ : 19 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಮಲ್ಲಿಮಾಕನಪುರದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಶಾಸಕ ಶರತ್ ಬಚ್ಚೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.