ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸಂವಿಧಾನ ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅದು ದೇಶಕ್ಕೆ ಸೇರಿದ್ದು. ಅನ್ಯರಾಷ್ಟ್ರದ ಜನರು ನಮ್ಮ ದೇಶದ ಸಂವಿಧಾನದ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಹೊಂದಿದರೆ ನಾವು ಮಾತ್ರ ಪ್ರತಿ ವಿಷಯದಲ್ಲೂ ವಿರೋಧ ಮಾಡಿಕೊಂಡು ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿದ್ದೇವೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.ತಾಲೂಕಿನ ವಕ್ಕಲೇರಿಯಲ್ಲಿ ಅಂಬೇಡ್ಕರ್ ೧೩೩ನೇ ಜಯಂತೋತ್ಸವದಲ್ಲಿ ಮಾತನಾಡಿ, ಅಂಬೇಡ್ಕರ್ ಇಡೀ ವಿಶ್ವದಲ್ಲೇ ಮರೆಯಲಾಗದ ಮಾನವ ಸ್ವರೂಪದ ಮಹಾನ್ ಚೇತನವಾಗಿದ್ದು, ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ರಕ್ಷಣೆ ಪಡೆಯಲು ಅಂಬೇಡ್ಕರ್ ಕಾರಣವಾಗಿದ್ದಾರೆ ಎಂದರು.
ಸಮಾನತೆ ಕಲ್ಪಿಸಿದ ಸಂವಿಧಾನಅಂಬೇಡ್ಕರ್ ಜೀವನ, ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕಾಗಿದೆ ದೇಶದಲ್ಲಿ ಬಡವ, ಶ್ರೀಮಂತ ಎನ್ನದೆ ಎಲ್ಲರಿಗೂ ಒಂದೇ ಎನ್ನುವ ರೀತಿಯಲ್ಲಿ ಬದುಕುವ ಅವಕಾಶವನ್ನು ಸಂವಿಧಾನದಿಂದ ನೀಡಿದ್ದಾರೆ. ಅಂಬೇಡ್ಕರ್ ತಮ್ಮ ಕುಟುಂಬವನ್ನು ತ್ಯಾಗ ಮಾಡಿ ದೇಶದ ಬಡಜನರ ಬದುಕಿಗೆ ಆಸರೆಯಾಗಿದ್ದಾರೆ. ಅಂತಹ ಮಹಾನ್ ಚೇತನಕ್ಕೆ ಇವತ್ತು ಅಪಮಾನ ಅಗೌರವ ತೋರುವ ಶಕ್ತಿಗಳಿಗೆ ತನ್ನಷ್ಟಕ್ಕೆ ತಾನೇ ಶಿಕ್ಷೆಯನ್ನು ದೇವರು ನೀಡುವಂತಾಗಲಿ ಎಂದರು.
ಪ್ರಾಚೀನ ಕಾಲದಿಂದ ದಲಿತರ ಮೇಲೆ ಶೋಷಣೆ ನಡೆಯುತ್ತಲೇ ಬಂದಿದೆ. ಅದು ಇಂದಿಗೂ ನಿಂತಿಲ್ಲ. ಸಂವಿಧಾನ ಇದ್ದರೂ ಹೆಸರಿಗಷ್ಟೆ ಎಲ್ಲರೂ ಒಂದೇ ಎನ್ನುವ ನೀತಿ ಇದೆ. ಆದರೆ, ನಿಜವಾಗಲೂ ಜಾತೀಯತೆ ಅತಿಯಾಗಿದೆ ಇದನ್ನು ಹೊಗಲಾಡಿಸಿ ನೆಮ್ಮದಿ ಬದುಕು ಕಾಣಬೇಕಾಗಿದೆ ಎಂದರುಖರ್ಗೆ ಪ್ರಧಾನಿ ಆಗಲು ಅವಕಾಶ
ಎಂಎಲ್ಸಿ ನಸೀರ್ ಅಹಮದ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನದ ರಕ್ಷಣೆ ಮಾಡಿದರೆ, ಬಿಜೆಪಿ ಸಂವಿಧಾನ ಬದಲಾವಣೆಗೆ ಮುಂದಾಗಿದೆ ದೇಶದಲ್ಲಿ ಯಾವುದೇ ಚುನಾವಣೆ ಬಂದರೂ ಅಂಬೇಡ್ಕರ್ ಅವರ ಹೆಸರು ಹೇಳದೇ ಇರುವ ಪಕ್ಷಗಳು ಇಲ್ಲ ದಲಿತರ ಬಗ್ಗೆ ಗೌರವದಿಂದ ಕಾಣುವ ಕಾಂಗ್ರೆಸ್ ಪಕ್ಷದಿಂದ ಮುಂದೆ ಇಂಡಿಯಾ ಒಕ್ಕೂಟದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನು ಪ್ರಧಾನಿಯಾಗಿ ಮಾಡುವ ಅವಕಾಶಗಳು ಇದ್ದು ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.ಜಯಂತಿಗೆ ಜಾತಿ ಬಣ್ಣ ಬೇಡಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಜಯಂತಿ ಕೇವಲ ಚುನಾವಣೆ ಬಂದಾಗ ಮಾತ್ರವೇ ಸೀಮಿತಗೊಳಿಸದೇ ವರ್ಷದ ೩೬೫ ದಿನವು ನೆನೆಯುವಂತಾಗಬೇಕು ಜಯಂತಿಗೆ ಜಾತಿಯ ಬಣ್ಣ ಕಟ್ಟಬಾರದು ಸಮಾಜದಲ್ಲಿ ಮೀಸಲಾತಿ ದಲಿತರಿಗೆ ಅಷ್ಟೇ ಸೀಮಿತವಲ್ಲ ಸಮಾಜದಲ್ಲಿನ ಬಡವರಿಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ದೇಶದಲ್ಲಿ ದಲಿತರು ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಹೋಗಬೇಕು ಆಗಮಾತ್ರವೇ ಸಮಸ್ಯೆಗೆ ಶೀಘ್ರದಲ್ಲಿ ಪರಿಹರಿಸಬಹುದು ಎಂದು ತಿಳಿಸಿದರು.ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಗ್ರಾಪಂ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ವಕ್ಕಲೇರಿ ರಾಜಪ್ಪ, ಲೋಕೇಶ್, ದಸಂಸ ರಾಜ್ಯ ಸಂಚಾಲಕ ಮೋಹನ್ ರಾಜ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಮಲೇಷಿಯಾ ರಾಜಕುಮಾರ್, ವೈ ಶಿವಕುಮಾರ್, ಛತ್ರಕೋಡಿಹಳ್ಳಿ ಮಂಜುನಾಥ್, ಇನಾಯಿತ್ ಪಾಷ, ಪೀಸ್ ಮಂಜು, ನಾಗೇಂದ್ರ, ಖಯ್ತೂಂ, ಪ್ರವೀಣ್ ಇದ್ದರು.