ಕೆರೆಗಳಲ್ಲಿ ಬಾವಿ, ಬೋರ್ ತೋಡಿದರೆ ಕ್ರಿಮಿನಲ್ ಕೇಸ್

| Published : Mar 06 2024, 02:20 AM IST

ಕೆರೆಗಳಲ್ಲಿ ಬಾವಿ, ಬೋರ್ ತೋಡಿದರೆ ಕ್ರಿಮಿನಲ್ ಕೇಸ್
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ: ಕೆರೆಗಳ ಪಕ್ಕದಲ್ಲಾಗಲಿ, ಕೆರೆಯಲ್ಲಾಗಲಿ ಬೋರ್‌ವೆಲ್ ಕೊರೆಸಿದರೆ ಹಾಗೂ ಬಾವಿ ತೋಡಿದರೆ ಅಂತವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿರುವ ಅವರು, ಈಗಾಗಲೆ 4 ಜನರ ಮೇಲೆ ಪ್ರಕರಣ ದಾಖಲಿಸಿದ್ದು, 8 ಮೋಟಾರ್ ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆದಿದ್ದು, ಒಂದು ಬೋರ್‌ವೆಲ್‌ ಅನ್ನು ನಾಶ ಮಾಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರು ಕೆರೆಯ ಸುತ್ತಮುತ್ತ ಮತ್ತು ಕೆರೆಗಳಲ್ಲಾಗಲಿ ಬೋರ್‌ವೆಲ್‌ ಇಲ್ಲವೆ ಬಾವಿ ತೋಡಿದರೆ ಕಾನೂನು ಕ್ರಮ ಕೈಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ಕೆರೆಗಳ ಪಕ್ಕದಲ್ಲಾಗಲಿ, ಕೆರೆಯಲ್ಲಾಗಲಿ ಬೋರ್‌ವೆಲ್ ಕೊರೆಸಿದರೆ ಹಾಗೂ ಬಾವಿ ತೋಡಿದರೆ ಅಂತವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿರುವ ಅವರು, ಈಗಾಗಲೆ 4 ಜನರ ಮೇಲೆ ಪ್ರಕರಣ ದಾಖಲಿಸಿದ್ದು, 8 ಮೋಟಾರ್ ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆದಿದ್ದು, ಒಂದು ಬೋರ್‌ವೆಲ್‌ ಅನ್ನು ನಾಶ ಮಾಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರು ಕೆರೆಯ ಸುತ್ತಮುತ್ತ ಮತ್ತು ಕೆರೆಗಳಲ್ಲಾಗಲಿ ಬೋರ್‌ವೆಲ್‌ ಇಲ್ಲವೆ ಬಾವಿ ತೋಡಿದರೆ ಕಾನೂನು ಕ್ರಮ ಕೈಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಭೀಕರ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೆರೆಗಳಿಗೆ, ಕಾಲುವೆಗಳಿಗೆ ನೀರು ಹರಿಸಲಾಗಿದೆ. ಕೆರೆಯಲ್ಲಿನ ನೀರು ಕುಡಿಯುವುದಕ್ಕೆ ಮಾತ್ರ ಉಪಯೋಗಿಸಲಾಗುತ್ತದೆ ಎಂದು ಹೇಳಿದರು.

ಕುಡಿಯುವ ನೀರಿಗಾಗಿ ಇಂಡಿ ತಾಲೂಕಿನ ಹಂಜಗಿ, ಲೋಣಿ ಕೆಡಿ, ಸಂಗೋಗಿ, ಅರ್ಜನಾಳ ಹಾಗೂ ಸಿಂದಗಿ ತಾಲೂಕಿನ ಬಳಗಾನೂರ, ದೇವರ ಹಿಪ್ಪರಗಿ ತಾಲೂಕಿನಲ್ಲಿ ಬರುವ ಕೆರೆಗಳಲ್ಲಿ ಕುಡಿಯುವ ನೀರಿಗಾಗಿ ಮಾತ್ರ ನೀರು ಹರಿಸುತ್ತಿದ್ದು, ಈ ನೀರು ಯಾವುದೇ ಕಾರಣಕ್ಕೂ ಬಳಕೆ ಮಾಡಿಕೊಳ್ಳದೆ, ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

144 ಆದೇಶ:

ಇಂಡಿ, ಚಡಚಣ ತಾಲೂಕಿನ ಭೀಮಾ ನದಿಯ ದಂಡೆಯ ರೈತರು ಭೀಕರ ಬರಗಾಲದ ನಿಮಿತ್ಯ ಬರುವ ದಿನಗಳಲ್ಲಿ ಗ್ರಾಮಸ್ಥರಿಗೆ ಮತ್ತು ಜನ ಜಾನುವಾರುಗಳಿಗೆ ತೊಂದರೆ ಯಾಗದಂತೆ ಮಾನವೀಯ ಆಧಾರದ ಮೇಲೆ ಕೃಷಿಗೆ ನೀರು ಬಳಸಬಾರದು. ಇಂಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿರುವದರಿಂದ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ರೈತರು ಕೃಷಿಗೆ ನೀರು ಬಳಸಬಾರದು. ಅಲ್ಲದೇ, ಇಂಡಿ ಮತ್ತು ಚಡಚಣ ತಾಲೂಕಿನ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ನೀರಿನ ಅವಶ್ಯಕತೆ ಇರುವದರಿಂದ ಇಂಡಿ ಮತ್ತು ಚಡಚಣ ತಾಲೂಕುಗಳ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳ ರೈತರು ನೀರನ್ನು ಬಳಸದಂತೆ ಕಾನೂನಾತ್ಮಕ ನಿರ್ಬಂಧ ವಿಧಿಸಿದ್ದು, ಮಾನವೀಯ ಆಧಾರದ ಮೇಲೆ ನೀರು ಬಳಸದಂತೆ 144ರನ್ವಯ ಆದೇಶ ಹೊರಡಿಸಿದೆ ಎಂದರು.

ಕೆಬಿಜೆಎನ್‌ಎಲ್‌ ಎಇಇ ರಿಯಾಜ್, ಎಂಐ ಎಇಇ ಕರೂರ, ಹೆಸ್ಕಾಂ ಎಇಇ ಆರ್.ಎಸ್‌.ಮೆಡೆಗಾರ, ಪಿಎಸ್ ಐ ಎಂ.ಎಸ್‌.ಸತಿಗೌಡರ ಹಾಜರಿದ್ದರು.ಕೋಟ್..

ಸಿಆರ್‌ಪಿಸಿ 1973ರ ಕಲಂ 147 ಅಡಿಯಲ್ಲಿ ಇಂಡಿ ಉಪವಿಭಾಗ ಮಟ್ಟದಲ್ಲಿ ಬರುವ ಸಂಗೊಗಿ, ತಡವಲಗಾ, ಹಂಜಗಿ, ಲೋಣಿ ಕೆಡಿ ಮತ್ತು ಅರ್ಜನಾಳ, ಬಳಗಾನೂರ, ಹೊನ್ನಳ್ಳಿ, ಯಂಕಂಚಿ ಗ್ರಾಮಗಳ ಕೆರೆಗಳ ಅಂಚಿನಿಂದ 30 ಮೀಟರ ಪರಿಧಿಯಲ್ಲಿನ ಎಲ್ಲ ನೀರಿನ ಮೂಲಗಳಾದ ಬಾವಿ, ಕೊಳವೆಬಾವಿ ಹಾಗೂ ಇತರೆ ಜಲಮೂಲಗಳನ್ನು ಮುಂದಿನ ಆದೇಶದವರೆಗೆ ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ಕೆರೆಗಳ ಸುತ್ತ ಬಾವಿ, ಬೊರವೆಲ್‌, ಪಂಪ್ ಸೆಟ್‌ ಅಳವಡಿಸಬೇಡಿ.

ಅಬೀದ್ ಗದ್ಯಾಳ, ಉಪವಿಭಾಗಾಧಿಕಾರಿ