ಈಗ ತೆರವು ಕಾರ್ಯಾಚರಣೆ ನಡೆದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡಿಬೆಟ್ಟದ ತಪ್ಪಲಿನ ಜೆ.ಸಿ. ನಗರದ ತಾವರೆಕೆರೆ ಒತ್ತುವರಿ ಪ್ರದೇಶಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಸೋಮವಾರ ಭೇಟಿ ನೀಡಿದ್ದರು.ಒತ್ತುವರಿ ತೆರವುಗೊಳಿಸುವಂತೆ ಶಿವರಾತ್ರಿ ಹಬ್ಬದವರೆಗೆ ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದರು. ಈಗ ತೆರವು ಕಾರ್ಯಾಚರಣೆ ನಡೆದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್. ನಗರ ವಕ್ತಾರ ಎಂ.ಎ. ಮೋಹನ್. ನಗರ ಪಾಲಿಕೆ ಮಾಜಿ ಸದಸ್ಯೆ ಛಾಯಾ, ಶಿವಕುಮಾರ್, ಕೆ.ಜೆ. ರಮೇಶ್, ಬಿಜೆಪಿ ಮುಖಂಡರಾದ ಪ್ರಸನ್ನ. ಜಯರಾಮ್ ವಿಶ್ವೇಶ್ವರಯ್ಯ, ಪ್ರಭಾಕರ್ ಶಿಂಧೆ, ಎನ್. ಪ್ರದೀಪ್ ಕುಮಾರ್. ಗೋಕುಲ್ ಗೋವರ್ಧನ್, ವಾಣೀಶ್, ಖಂಡೇಶ್, ವಿನಯ್ ಪಾಂಚಜನ್ಯ, ವಸಂತ್ ಕುಮಾರ್, ಮಂಜುನಾಥ್, ನವೀನ್, ಹರೀಶ್, ಸಂತೋಷ್ ಹಾಗೂ ಕೆ.ಸಿ ಲೇಔಟ್ ನಿವಾಸಿಗಳು ಇದ್ದರು.