ಹಾವೇರಿ ಕ್ಷೇತ್ರವನ್ನು ಸಮೃದ್ಧಗೊಳಿಸುವ ಸಂಕಲ್ಪ: ಭರತ್ ಬೊಮ್ಮಾಯಿ

| Published : Apr 25 2024, 01:08 AM IST

ಸಾರಾಂಶ

ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಹಾವೇರಿ- ಗದಗ ಲೋಕಸಭಾ ಕ್ಷೇತ್ರವನ್ನು ಸಮೃದ್ಧಗೊಳಿಸುವ ಸಂಕಲ್ಪ ಬಿಜೆಪಿಯದ್ದಾಗಿದೆ ಎಂದು ಬಿಜೆಪಿ ಯುವ ನಾಯಕ ಭರತ್ ಬೊಮ್ಮಾಯಿ ಹೇಳಿದರು.

ಹಾನಗಲ್ಲ: ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಹಾವೇರಿ- ಗದಗ ಲೋಕಸಭಾ ಕ್ಷೇತ್ರವನ್ನು ಸಮೃದ್ಧಗೊಳಿಸುವ ಸಂಕಲ್ಪ ಬಿಜೆಪಿಯದಾಗಿದ್ದು, ಕಾರ್ಖಾನೆ ಸ್ಥಾಪನೆ ಮೂಲಕ ಉದ್ಯೋಗಾವಕಾಶ ನೀಡಲಾಗುವುದು ಎಂದು ಬಿಜೆಪಿ ಯುವ ನಾಯಕ ಭರತ್ ಬೊಮ್ಮಾಯಿ ಹೇಳಿದರು.

ಗುರುವಾರ ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚಿಸಿದ ನಂತರ, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತದ ಕನಸು ನರೇಂದ್ರ ಮೋದಿ ಅವರದ್ದಾಗಿದೆ. ಭಾರತದ ಜನರ ಹಿತವೇ ನರೇಂದ್ರ ಮೋದಿ ಅವರ ಯೋಜನೆಯ ಫಲವಾಗಿದೆ. ಭಾರತೀಯರೆಲ್ಲ ಕೋರೋನಾ ಸಂದರ್ಭವನ್ನು ನೆನೆಸಿಕೊಂಡರೆ ನರೇಂದ್ರ ಮೋದಿ ಅವರ ಪ್ರಧಾನಿಯಾಗಿ ಭಾರತೀಯರನ್ನು ದೊಡ್ಡ ರೋಗದಿಂದ ರಕ್ಷಿಸಿದ ಇತಿಹಾಸ ಅರ್ಥವಾಗುತ್ತದೆಎಂದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಮುಖಂಡರಾದ ರಾಜಶೇಖರ ಕಟ್ಟೇಗೌಡರ, ಕೃಷ್ಣ ಈಳಿಗೇರ, ರಾಘವೇಂದ್ರ ತಹಶೀಲ್ದಾರ, ರೇಖಾ ಕರಿಭೀಮಣ್ಣನವರ, ಉದಯ ವಿರೂಪಣ್ಣನವರ, ಜಗದೀಶ ಹಿರೇಮಠ, ಎಂ.ಪಿ. ಮೂಡೂರ, ಬಸಣ್ಣ ತೋಟದ, ಕೆ.ಟಿ. ಕಲಗೌಡರ, ಪ್ರಕಾಶ ಮತ್ತಿಕಟ್ಟಿ, ತಿಪ್ಪನಗೌಡರ, ದೇವಿಂದ್ರಪ್ಪ ಬಾರ್ಕಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಮೊದಲಾದವರು ಇದ್ದರು.

ಆನಂತರ ಕಂಚಿನೆಗಳೂರು, ಶಂಕ್ರಿಕೊಪ್ಪ, ಕಿರವಾಡಿ, ತಿಳವಳ್ಳಿ, ಮಕರವಳ್ಳಿ, ಶಾಡಗುಪ್ಪಿ, ಹಾವಣಗಿ ಗ್ರಾಮಗಳಲ್ಲಿ ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬ್ಯಾಡಗಿಯಲ್ಲಿ ಬೊಮ್ಮಾಯಿ ಪರ ಪ್ರಚಾರ

ಬ್ಯಾಡಗಿ ಪಟ್ಟಣದ ಬಸವೇಶ್ವರ ನಗರದಲ್ಲಿ ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಯಿತು.ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಛತ್ರದ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿದರು.ಈ ವೇಳೆ ಪುರಸಭೆ ಸದಸ್ಯರಾದ ಸುಭಾಸ ಮಾಳಗಿ, ಕಲಾವತಿ ಬಡಿಗೇರ, ಫಕ್ಕೀರಮ್ಮ ಛಲವಾದಿ, ವಿನಯ ಹಿರೇಮಠ, ವಿಜಯ ಭರತ್ ಬಳ್ಳಾರಿ, ಗಾಯತ್ರಿ ರಾಯ್ಕರ, ಶಿವರಾಜ ಅಂಗಡಿ, ಶಿವಯೋಗಿ ಗಡಾದ, ಗಂಗನಗೌಡ್ರ ಪಾಟೀಲ, ಗಣೇಶ ಅಚಲಕರ, ಪರಶುರಾಮ ಉಜನಿಕೊಪ್ಪ, ರೇಣುಕಯ್ಯ ಬೂದಿಹಾಳಮಠ, ಕೆ.ಸಿ. ಸೊಪ್ಪಿನಮಠ, ಮಂಜುನಾಥ ಜಾಧವ ಇನ್ನಿತರರಿದ್ದರು.