ಅದಾಲತ್‌ನಲ್ಲಿ ಒಂದಾದ ಅಗಲಿದ್ದ ದಂಪತಿ

| Published : Sep 17 2024, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಲಹದಿಂದ ದೂರವಾಗಿದ್ದ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಸಂಧಾನದಿಂದ ಮತ್ತೆ ಒಂದಾದರು. ಈ ವೇಳೆ ಪರಸ್ಪರ ಸಿಹಿ ತಿನ್ನಿಸಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಕಲಹದಿಂದ ದೂರವಾಗಿದ್ದ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಸಂಧಾನದಿಂದ ಮತ್ತೆ ಒಂದಾದರು. ಈ ವೇಳೆ ಪರಸ್ಪರ ಸಿಹಿ ತಿನ್ನಿಸಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ಲೋಕ ಅದಾಲತ್‌ನಲ್ಲಿ 72 ಸಿವ್ಹಿಲ್ ದಾವೆಗಳು, 6 ಚೆಕ್ ಬೌನ್ಸ್ ಪ್ರಕರಣ, 6 ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ ಪ್ರಕರಣಗಳು, 1 ಕೌಟುಂಬಿಕ ಪ್ರಕರಣ ಹಾಗೂ 1 ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣ ಸೇರಿ ನ್ಯಾಯಾಲಯದಲ್ಲಿ ಬಾಕಿ ಇದ್ದ 409 ಪ್ರಕರಣಗಳು ಹಾಗೂ 2114 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡವು.

ಹಿರಿಯ ಸಿವ್ಹಿಲ್ ನ್ಯಾ. ತಯ್ಯಾಬಾ ಸುಲ್ತಾನ, ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾ. ಈಶ್ವರ ಮುಸಲ್ಮಾರಿ, ಸಿವ್ಹಿಲ್ ನ್ಯಾ.ತೇಜಶ್ವಿನಿ ಸೊಗಲದ, ಹೆಚ್ಚುವರಿ ಸಿವ್ಹಿಲ್ ನ್ಯಾ.ಸೌಮ್ಯ ಹೂಲಿ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ವಕೀಲರಾದ ಸದಾನಂದ ಬಶೆಟ್ಟಿ, ಮುರಗೇಶ ಯರನಾಳ, ಎಸ್.ಐ.ವಂದಾಲಮಠ, ಮನೋಜ ಕದಂ, ಈಶ್ವರ ಪರಮಗೊಂಡ, ಆರ್.ಜಿ.ಬೀಳಗಿ, ಭಾರತಿ ಪತ್ತಾರ, ಪ್ರಕಾಶ ಸಲಗರ ಇತರರು ಇದ್ದರು.