ಗರ್ಭಿಣಿ ಜಿಂಕೆ ಪ್ರಸವ ಮಾಡಿಸಿದ ವೈದ್ಯಾಧಿಕಾರಿ

| Published : Sep 28 2024, 01:28 AM IST

ಗರ್ಭಿಣಿ ಜಿಂಕೆ ಪ್ರಸವ ಮಾಡಿಸಿದ ವೈದ್ಯಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು: ಅರೇಹಳ್ಳಿ ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿಗಳು ಗರ್ಭಿಣಿ ಜಿಂಕೆಗೆ ಪ್ರಸವ ಮಾಡಿಸಿದರೂ ಹೆರಿಗೆಯ ನಂತರ ಗರ್ಭಿಣಿ ಜಿಂಕೆ ಪ್ರಸವದ ನಂತರ ಚೇತರಿಸಿಕೊಂಡರೆ, ಹೊಸ ಜನ್ಮ ಪಡೆಯಬೇಕಾಗಿದ್ದ ಮರಿ ಜಿಂಕೆಯು ಹೊಟ್ಟೆಯಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಿಕ್ಕೋಡಿನ ಹಳ್ಳಿಗದ್ದೆಯ ಜಮೀನಿನ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಕಾಣಿಸಿಕೊಂಡ ಜಿಂಕೆಯನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ತಕ್ಷಣ ಇಲಾಖೆಯ ಅಧಿಕಾರಿ ವರ್ಗದವರು ಅಸ್ವಸ್ಥ ಚಿಂಕೆಯನ್ನು ಹಿಡಿದಾಗ ಒಂದೆಡೆ ಹೆರಿಗೆ ನೋವಿನಿಂದ ಹಾಗೂ ನಾಯಿಗಳು ದಾಳಿ ನಡೆಸಿರುವುದರಿಂದ ತೀವ್ರ ಅಸ್ವಸ್ಥವಾಗಿರುದು ತಿಳಿದು ಬಂದಿದೆ. ತಕ್ಷಣ ಕಾರ್ಯ್ರಪ್ರವೃತ್ತರಾದ ಅವರು ಹತ್ತಿರದ ಅರೇಹಳ್ಳಿ ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಚಿಕಿತ್ಸೆ ನೀಡಿ ಹೆರಿಗೆ ಮಾಡಿದರೂ ಹೊಟ್ಟೆಯಲ್ಲಿಯೇ ಕೆಲ ದಿನಗಳ ಹಿಂದೆ ಮರಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡ ಜಿಂಕೆಯನ್ನು ಮರಳಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಈ ವೇಳೆ ಪಶು ವೈದ್ಯಾಧಿಕಾರಿ ಗಂಗಾಧರ್ ನಾಯಕ್, ಜಾನುವಾರು ಅಧಿಕಾರಿ ಮಹಾಲಿಂಗಯ್ಯ, ಸಿಬ್ಬಂದಿ ಅಭಿಲಾಷ್, ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮದ ಶಶಿಕುಮಾರ್, ಅಣ್ಣಪ್ಪ ಸೇರಿದಂತೆ ಇನ್ನಿತರ ಹಾಜರಿದ್ದರು.

.