ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮದ ಬೆಳೆಗಾರರ ಕಾಫಿ ತೋಟಗಳಲ್ಲಿ ಅಡ್ಡಾಡುತ್ತಿರುವ ಕಾಡಾನೆಗಳು ಪ್ರತಿದಿನ ಸಮಸ್ಯೆ ಸೃಷ್ಟಿಸುತ್ತಿವೆ. ಗ್ರಾಮದ ಬಿದ್ದಂಡ ತಟ್ಟು ಎಂಬಲ್ಲಿ ಕಾಡಾನೆ ಶುಕ್ರವಾರ ರಾತ್ರಿ ಬೈನೆ ಮರವನ್ನು ಕೆಡವಿ ಹಾಕಿರುವುದರಿಂದ ವಿದ್ಯುತ್ ಕಂಬ ಮುರಿದಿದ್ದು ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಮಾತ್ರವಲ್ಲದೆ ವಿದ್ಯುತ್ ತಂತಿಗಳು ರಸ್ತೆಯಲ್ಲಿ ಹರಡಿಕೊಂಡಿರುವುದರಿಂದಾಗಿ ಜೀವಪಾಯಕ್ಕೂ ಕಾರಣವಾಗಿದೆ. ಪದೇಪದೇ ಕಾಡಾನೆಗಳು ತೋಟಕ್ಕೆ ನುಗ್ಗಿ ಫಸಲನ್ನು ಹಾಳುಗೆಡವುತ್ತಿವೆ. ಜೊತೆಗೆ ಹಾನಿ ಉಂಟು ಮಾಡುತ್ತಿವೆ. ಸಂಬಂಧಪಟ್ಟವರು ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
-------------------------ಕೊಡಗಿಗೆ ತಟ್ಟದ ಬಂದ್ ಬಿಸಿಮಡಿಕೇರಿ : ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಕರೆ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಬಂದ್ ಬಿಸಿ ಇರಲಿಲ್ಲ. ಜಿಲ್ಲೆಯಾದ್ಯಂತ ಜನಜೀವನ ಯಥಾಸ್ಥಿತಿಯಲ್ಲಿತ್ತು.ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮರಾಠಿಗರು ಕನ್ನಡಿಗರ ವಿರುದ್ಧ ನಡೆಸಿದ ಹಲ್ಲೆ, ದಬ್ಬಾಳಿಕೆ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಶನಿವಾರ ಬಂದ್‌ಗೆ ಕರೆ ನೀಡಿತ್ತು.ಕೊಡಗು ಜಿಲ್ಲೆಯ 5 ತಾಲೂಕುಗಳಲ್ಲೂ ಜನಜೀವನ ಎಂದಿನಂತಿತ್ತು. ಎಂದಿನಂತೆ ವ್ಯಾಪಾರ ವಹಿವಾಟು, ಆಟೋ, ಟ್ಯಾಕ್ಸಿ ಕೆಎಸ್ಆರ್ ಟಿಸಿ, ಖಾಸಗಿ ಬಸ್ ಓಡಾಟ ಯಥಾಸ್ಥಿತಿಯಲ್ಲಿತ್ತು. ಆಟೋ, ಖಾಸಗಿ ಬಸ್ ಚಾಲಕರು ಮಾಲೀಕರ ಸಂಘದಿಂದಲೂ ಬೆಂಬಲ ನೀಡಿರಲಿಲ್ಲ.ಪ್ರವಾಸೋದ್ಯಮ ಕ್ಯಾಬ್ ಗಳಿಂದಲೂ ಎಂದಿನಂತೆ ಸಂಚರಿಸಿತ್ತು. ಜಿಲ್ಲೆಯ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯಿತು.