ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಜಾತ್ರೆ ಉತ್ಸವಗಳು, ಧರ್ಮ ಗ್ರಂಥಗಳು ಎಲ್ಲರ ಏಳಿಗೆಗಾಗಿಯೇ ಜನ್ಮ ತಾಳಿವೆ ಇದನ್ನು ಅರ್ಥೈಸಿಕೊಂಡು ಮಾನವರಾದ ನಾವು ನಡೆದರೆ ಜೀವನವೆಂಬುವುದು ಸಾರ್ಥಕಗೊಳ್ಳಲಿದೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹೇಳಿದರು.ಮೂಕೀಹಾಳದಲ್ಲಿಯ ಲಾಡ್ಲೇಮಶ್ಯಾಕ್ ಜಾತ್ರೋತ್ಸವ ಕುರಿತು ಶುಕ್ರವಾರ ಏರ್ಪಡಿಸಲಾದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಭೇದವೆಂಬುವುದು ಈ ಭಾಗದಲ್ಲಿ ಹಿಂದಿನಿಂದಲೂ ಸಾಗಿ ಬಂದಿಲ್ಲ. ಆ ಕಾರಣದಿಂದಲೇ ಮಾನವ ಏಕತಾ ಶಾಂತಿ ಸಮಾವೇಶವನ್ನು ಕಳೆದ ೩೦ ವರ್ಷಗಳಿಂದ ಏರ್ಪಡಿಸುತ್ತ ಸಾಗಿ ಬಂದ ಇಲ್ಲಿಯ ಕಮಿಟಿಯ ಅಧ್ಯಕ್ಷ ಕೆ.ಎಚ್.ಪಾಟೀಲರ ಹಾಗೂ ಅವರ ಸಹಪಾಠಿಗಳ ಕಾರ್ಯ ಪ್ರಶಂಶಿನೀಯವಾಗಿದೆ ಎಂದರು.
ಯಲಗೋಡ ಹಾಗೂ ಅರಕೇರಾ ಪರಮಾನಂದ ಮಠದ ಗುರುಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ತಮ್ಮ ತಮ್ಮ ಅಧಿಕಾರಕ್ಕೆ ಒಡೆದಾಳುವ ರಾಜಕಾರಣಿಗಳಿಗೆ ಬೇಕಾಗಿರುವುದು ಕುರ್ಚಿಯಾಗಿದೆ. ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.ನಮ್ಮ ದೇಶ ಆಳುವವರು ಅಂಜಿಕೆ ಹಾಕುತ್ತ ಜಾತಿ ಮತ ಭಾವನೆ ಮೂಡಿಸುತ್ತ ಬೆಂಗಳೂರಲ್ಲಿ ಸಂಸಾರ ಮಾಡುತ್ತ ಕೆಲವರು ಸಾಗಿದ್ದಾರೆ. ಏನೇ ಇರಲಿ ನೋಡುವಂತಹ ದೃಷ್ಟಿ ಭಿನ್ನಭಿಪ್ರಾಯವಾಗಿರಬಾರದು ಎಂದರು.
ಶಿವರಾಜ ಗುಂಡಕನಾಳ(ನಾಗೂರ) ಪ್ರಾಸ್ತಾವಿಕ ಮಾತನಾಡಿದರು. ಪುರಸಭಾ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಅನ್ಸರ್‌ಪಟೇಲ ಅಗಲಿಕೆ ಹಿನ್ನೆಲೆಯ್ಲಲಿ ಮೌನಾಚರಣೆ ಮಾಡಲಾಯಿತು. ವಿವಿಧ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು.ಜಾತ್ರಾ ಕಮಿಟಿ ಅಧ್ಯಕ್ಷ ಕೆ.ಎಚ್.ಪಾಟೀಲ, ಪಿಕೆಪಿಎಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ಕುಂಭಾರ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಮಡುಸಾಹುಕಾರ ಬಿರಾದಾರ, ನ್ಯಾಯವಾದಿ ಕಾರ್ತಿಕ ಕಟ್ಟಿಮನಿ, ವಿರೇಶಗೌಡ ಪಾಟೀಲ, ಸುರೇಶಕುಮಾರ ಇಂಗಳಗೇರಿ, ಬಸನಗೌಡ ತಬ್ಬಣ್ಣವರ(ಯಾಳವಾರ), ಎ.ಎಸ್.ಸಂಗಣ್ಣ, ಮುಖಂಡರಾದ ಎಂ.ಎಂ.ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಎಚ್.ವೈ.ಮಸರಕಲ್ಲ, ಡಾ.ಭಲವಂತ್ರಾಯ ನಡಹಳ್ಳಿ, ಪ್ರಭುಗೌಡ ಶಳ್ಳಗಿ, ಬಿ.ಎಸ್.ಇಸಾಂಪೂರ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಆರ್.ಎಸ್.ವಾಲಿಕಾರ ನಿರೂಪಿಸಿ, ವಂದಿಸಿದರು.