ಜನರ ಬೇಡಿಕೆಯಾಗಿದ್ದ ನ್ಯಾಯಬೆಲೆ ಅಂಗಡಿ: ಟಿ.ಬಿ.ಜಯಚಂದ್ರ

| Published : Jan 15 2024, 01:48 AM IST

ಜನರ ಬೇಡಿಕೆಯಾಗಿದ್ದ ನ್ಯಾಯಬೆಲೆ ಅಂಗಡಿ: ಟಿ.ಬಿ.ಜಯಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಶಿರಾನಗರಕ್ಕೆ ಹೋಗಿ ಪಡಿತರ ತರುತ್ತಿದ್ದರು, ಈ ಸಂದರ್ಭದಲ್ಲಿ ಅಪಘಾತಗಳಾಗಿ ಜನರ ಪ್ರಾಣ ಹೋಗಿದ್ದು ಉಂಟು, ಇವೆಲ್ಲವನ್ನೂ ಮನಗಂಡು ಈ ಭಾಗದ ಜನರಿಗೆ ಅನುಕೂಲಕರವಾಗಲಿ ಎಂಬ ಉದ್ದೇಶದಿಂದ ನೂತನ ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ಉದ್ಘಾಟನೆ ಮಾಡಲಾಗಿದೆ.

ಶಿವಾಜಿ ನಗರದಲ್ಲಿ ನೂತನ ನ್ಯಾಯಬೆಲೆ ಅಂಗಡಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ನಗರಸಭೆಯ ವಾರ್ಡ್ ನಂಬರ್ 31 ರ ಶಿವಾಜಿ ನಗರದ ಜನ ಸಾಮಾನ್ಯರ ಬಹು ದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ಉದ್ಘಾಟಿಸಿದ್ದು ನನಗೆ ತುಂಬು ಖುಷಿ ತಂದಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ವಾರ್ಡ್ ನಂಬರ್ 31 ರ ಶಿವಾಜಿನಗರದಲ್ಲಿ ನೂತನ ಸರ್ಕಾರಿ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿ ನಗರದ ಜನತೆ ಪಡಿತರಕ್ಕಾಗಿ ದೂರ ಹೋಗಬೇಕಿತ್ತು, ಅದರಲ್ಲೂ ಮಹಿಳೆಯರು, ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಶಿರಾನಗರಕ್ಕೆ ಹೋಗಿ ಪಡಿತರ ತರುತ್ತಿದ್ದರು, ಈ ಸಂದರ್ಭದಲ್ಲಿ ಅಪಘಾತಗಳಾಗಿ ಜನರ ಪ್ರಾಣ ಹೋಗಿದ್ದು ಉಂಟು, ಇವೆಲ್ಲವನ್ನೂ ಮನಗಂಡು ಈ ಭಾಗದ ಜನರಿಗೆ ಅನುಕೂಲಕರವಾಗಲಿ ಎಂಬ ಉದ್ದೇಶದಿಂದ ನೂತನ ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ಉದ್ಘಾಟನೆ ಮಾಡಲಾಗಿದೆ, ಜನತೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳವಂತೆ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಗರಸಭೆ ಸದಸ್ಯರಾದ ಎಸ್.ಎಲ್ ರಂಗನಾಥ್, ಕೃಷ್ಣಪ್ಪ, ತ್ರಿವೇಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ, ರಾಜಣ್ಣ ಸೇರಿ ಹಲವರಿದ್ದರು.

------

ಶಿವಾಜಿನಗರದಲ್ಲಿ ನೂತನ ಸರ್ಕಾರಿ ನ್ಯಾಯಬೆಲೆ ಅಂಗಡಿಯನ್ನು ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಸೇರಿದಂತೆ ಹಲವರು ಹಾಜರಿದ್ದರು.