ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 468 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಬೆರಳೆಣಿಕೆಯಷ್ಟು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 468 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಬೆರಳೆಣಿಕೆಯಷ್ಟು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ.ದುಷ್ಕರ್ಮಿಗಳು ಶಾಲಾ- ಕಾಲೇಜು, ನ್ಯಾಯಾಲಯ, ಹೋಟೆಲ್, ದೇಗುಲ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ರಾಯಭಾರಿ ಕಚೇರಿ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಅಥವಾ ಇ- ಮೇಲ್ ಮೂಲಕ ಬೆದರಿಕೆ ಹಾಕಿ ಭಯದ ವಾತಾವರಣ ಉಂಟು ಮಾಡುತ್ತಾರೆ. ಇದು ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆಬಿಸಿಯನ್ನುಂಟು ಮಾಡುತ್ತದೆ. ಕಿಡಿಗೇಡಿಗಳು ಈ ರೀತಿ ರಾಜ್ಯಾದ್ಯಂತ ಕಳೆದ 5.3 ವರ್ಷದಲ್ಲಿ 468 ಹುಸಿ ಬಾಂಬ್ ಬೆದರಿಕೆ ಹಾಕಿರುವುದು ಪೊಲೀಸರ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ.
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ:ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆ ಮಾತಿನಂತೆ ದುಷ್ಕರ್ಮಿಗಳು ಅನಾಮಧೇಯರ ಹೆಸರಿನಲ್ಲಿ ಕರೆ ಅಥವಾ ಇ-ಮೇಲ್ ಮಾಡಿ ಬಾಂಬ್ ಬೆದರಿಕೆ ಹಾಕಿ ಮಜಾ ತೆಗೆದುಕೊಳ್ಳುತ್ತಾರೆ. ಬಾಂಬ್ ಬೆದರಿಕೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ವಿಧ್ವಂಸಕ ಕೃತ್ಯ ತಪಾಸಣಾ ತಂಡಗಳು ಮತ್ತು ಶ್ವಾನ ದಳದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಯಾವುದೇ ಸ್ಫೋಟಕಗಳು ಪತ್ತೆಯಾಗದಿದ್ದಾಗ ಇದೊಂದು ಹುಸಿ ಬಾಂಬ್ ಕರೆ ಎಂಬ ನಿರ್ಧಾರಕ್ಕೆ ಬಂದು ನಿಟ್ಟುಸಿರು ಬಿಡುತ್ತಾರೆ.
ಇನ್ನು ಬಾಂಬ್ ಬೆದರಿಕೆ ವಿಚಾರ ತಿಳಿದ ಪಾಲಕರು ತಮ್ಮ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿರುವ ಶಾಲಾ-ಕಾಲೇಜುಗಳತ್ತ ಕೆಲಸ ಕಾರ್ಯ ಬಿಟ್ಟು ದೌಡಾಯಿಸುತ್ತಾರೆ. ದುಷ್ಕರ್ಮಿಗಳ ಒಂದು ಕರೆಯು ಹಲವು ಆತಂಕಕ್ಕೆ ಕಾರಣವಾಗುತ್ತದೆ.ಬೆಂಗಳೂರಲ್ಲೇ ಅಧಿಕ ಕೇಸ್:ಕಳೆದ 5.3 ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 468 ಪ್ರಕರಣ ದಾಖಲಾಗಿದ್ದರೆ ರಾಜಧಾನಿ ಬೆಂಗಳೂರಲ್ಲೇ 318 ಪ್ರಕರಣ ದಾಖಲಾಗಿವೆ. 2021ರಲ್ಲಿ 2, 2022 ರಲ್ಲಿ 8, 2023ರಲ್ಲಿ 144, 2024ರಲ್ಲಿ 59, 2025ರಲ್ಲಿ 86, 2026ರ ಮಾರ್ಚ್‌ವರೆಗೂ 19 ಪ್ರಕರಣ ಸೇರಿ ಒಟ್ಟು 318 ಪ್ರಕರಣ ದಾಖಲಾಗಿವೆ. ಬೆಂಗಳೂರು ಬಿಟ್ಟರೆ ಮಂಗಳೂರು 2ನೇ ಮತ್ತು ಮೈಸೂರು 3ನೇ ಸ್ಥಾನದಲ್ಲಿದೆ.
ಇಬ್ಬರಿಗೆ ಮಾತ್ರ ಶಿಕ್ಷೆ:ರಾಜ್ಯದಲ್ಲಿ ದಾಖಲಾದ 468 ಬಾಂಬ್ ಬೆದರಿಕೆ ಪ್ರಕರಣದ ಪೈಕಿ ಕೇವಲ 14 ಆರೋಪಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ. ಆದರೆ ಅಚ್ಚರಿಯ ವಿಷಯವೇನೆಂದರೆ, ಇಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ. 2020ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಬಾಂಬ್ ಬೆದರಿಕೆ ಪ್ರಕರಣ ದಾಖಲಿಸಲಾಗಿತ್ತು. ನಂತರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿತ್ತು. ಆ ಇಬ್ಬರು ಆರೋಪಿಗಳಿಗೂ ಶಿಕ್ಷೆಯಾಗಿದೆ.
-ಬಾಕ್ಸ್-1100 ಹುಸಿ ಬಾಂಬ್ ಕರೆ
ಮಾಡಿದವನ ಬಂಧನದೇಶದಾದ್ಯಂತ ಶಾಲಾ-ಕಾಲೇಜು, ನ್ಯಾಯಾಲಯಗಳು ಸೇರಿದಂತೆ ವಿವಿಧ ಸ್ಥಳಗಳಿಗೆ 1100 ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿ ಶ್ರೀನಿವಾಸ್ ಲೂಯಿಸ್(47) ಎಂಬಾತನನ್ನು ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ಬಂಧಿಸಿದ್ದರು. ಆರೋಪಿಯಿಂದ ಮೊಬೈಲ್ ಫೋನ್ ಮತ್ತು ಹಲವು ಸಿಮ್ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದರು. -ಬಾಕ್ಸ್-ಬಾಂಬ್ ಬೆದರಿಕೆ ಕರೆ: ಕಮಿಷನರೇಟ್ ಹಾಗೂ ಜಿಲ್ಲಾವಾರು ಅಂಕಿ ಅಂಶಗಳುಜಿಲ್ಲೆ2020202120222023202420252026ಒಟ್ಟು ಬೆಂಗಳೂರು ನಗರ0208144598619318ಮಂಗಳೂರು ನಗರ02010209170334 ಮೈಸೂರು ನಗರ0503040304110333 ಬೆಂಗಳೂರು ಜಿಲ್ಲೆ0204030110
ಹಾಸನ070209 ಹುಬ್ಬಳಿ ನಗರ04020107ಬೆಂಗಳೂರು ಸೌತ್0101020105ಕಾರವಾರ01030105ಕಲಬುರ್ಗಿ ನಗರ0101020105ಮಂಡ್ಯ01020104ಬೀದರ್0404ಉಡುಪಿ0303ಬೆಳಗಾವಿ ನಗರ020103ಮೈಸೂರು0303 ತುಮಕೂರು010103 ಕೋಲಾರ0202ಬೆಳಗಾವಿ010102ವಿಜಯಪುರ010102ಹಾವೇರಿ010102ಗದಗ010102ಬಾಗಲಕೋಟೆ010102ದಾವಣಗೆರೆ010102ಬಳ್ಳಾರಿರಾಯಚೂರು0101ಧಾರವಾಡ0101ಮಂಗಳೂರು0101ಚಾಮರಾಜನಗರ0101ಕೊಡಗು0101ಕೆಜಿಎಫ್0101ಕಲಬುರ್ಗಿ0101ಒಟ್ಟು0706151538915939468