ಕಡೂರುಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಮತ್ತೆ ಕಡೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲಿ ಎಂದು ಇರುಮುಡಿಯೊಂದಿಗೆ ಫೋಟೋ ಹಿಡಿದು ಅಭಿಮಾನಿಯೋರ್ವರು ಅಯ್ಯಪ್ಪನ ದರ್ಶನ ಪಡೆದಿರುವುದು ಕಂಡು ಬಂದಿದೆ.
ಅಭಿಮಾನಿ ಗಣೇಶ್ ಅವರಿಂದ ಮಕರ ಜ್ಯೋತಿ ದರ್ಶನದಲ್ಲು ದೇವರಿಗೆ ಮೊರೆ
ಕನ್ನಡಪ್ರಭ ವಾರ್ತೆ, ಕಡೂರುಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಮತ್ತೆ ಕಡೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲಿ ಎಂದು ಇರುಮುಡಿಯೊಂದಿಗೆ ಫೋಟೋ ಹಿಡಿದು ಅಭಿಮಾನಿಯೋರ್ವರು ಅಯ್ಯಪ್ಪನ ದರ್ಶನ ಪಡೆದಿರುವುದು ಕಂಡು ಬಂದಿದೆ.
ಕಡೂರು ಕ್ಷೇತ್ರದ ವೈ.ಎಸ್.ವಿ. ದತ್ತ ಅವರ ಅಭಿಮಾನಿ ತಾಲೂಕಿನ ಬೀರೂರು ಪಟ್ಟಣದ ಗಣೇಶ್ ಎಂಬುವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಜೊತೆಯಲ್ಲಿ ವೈ.ಎಸ್.ವಿ. ದತ್ತರವರ ಫೋಟೋ ಹಿಡಿದು ದರ್ಶನ ಪಡೆದಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.ಬರಲಿರುವ 2028ರಲ್ಲಿ ಕಡೂರಿನಿಂದ ವೈ.ಎಸ್.ವಿ.ದತ್ತ ಅವರೇ ಮತ್ತೆ ಶಾಸಕರಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ. ವೈ.ಎಸ್.ವಿ. ದತ್ತರವರು ಕಡೂರಿನ ಮಾಜಿ ಶಾಸಕರಾಗಿದ್ದು, ದತ್ತಾ ಅವರ ಅಭಿಮಾನಿಯಾದ ಗಣೇಶ್ ದತ್ತಾ ಪೋಟೋ ಹಿಡಿದು ಪ್ರಾರ್ಥನೆ ಸಲ್ಲಿಸಿರುವುದು ಕಂಡು ಬಂದಿದೆ.
ಇರುಮುಡಿ ಜೊತೆ ದತ್ತಾರವರ ಫೋಟೋವನ್ನು ತಲೆ ಮೇಲೆ ಹಿಡಿದು ಬೆಟ್ಟ ಹತ್ತಿದ ಅಭಿಮಾನಿ ಗಣೇಶ್ ಅವರು ಮಕರ ಜ್ಯೋತಿ ದರ್ಶನದ ವೇಳೆಯೂ ದತ್ತ ಫೋಟೋ ಹಿಡಿದೇ ಜ್ಯೋತಿ ದರ್ಶನ ಪಡೆದಿದ್ದಾರೆ ಎಂದು ಹೇಳಲಾಗಿದೆ.15ಕೆಕೆಡಿಯು2. ವೈ.ಎಸ್.ವಿ.ದತ್ತಾ ರವರ ಭಾವಚಿತ್ರ ಹಿಡಿದು ನಿಂತಿರುವ ಗಣೇಶ್.