ಕಡೂರುತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ಶನಿವಾರ ರಾತ್ರಿ ವಿಜೃಂಭಣೆ ಯಿಂದ ಜರುಗಿತು. ಸಂಕ್ರಾಂತಿ ಹಬ್ಬದಂದು ಮೊಲ ಬಿಡುವ ಸೇವೆಯಿಂದ ಆರಂಭವಾದ ಧಾರ್ಮಿಕ ಕೈಂಕರ್ಯಗಳಲ್ಲಿ ದಿನವೂ ವಿಶೇಷ ಅಭಿಷೇಕ ಮತ್ತು ಹಣ್ಣು ತುಪ್ಪ ಸೇವೆಗಳು ನಡೆದವು. ಬಳಿಕ ಶನಿವಾರ ರಾತ್ರಿ 10.30ಕ್ಕೆ ರಥೋತ್ಸವ ಜರುಗಿತು.
ಶ್ರೀದೇವಿ ಭೂದೇವಿಯೊಂದಿಗೆ ಕಲ್ಯಾಣೋತ್ಸವ , ಗೋವಿಂದ ನಾಮಸ್ಮರಣೆಕನ್ನಡಪ್ರಭ ವಾರ್ತೆ ಕಡೂರು
ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ಶನಿವಾರ ರಾತ್ರಿ ವಿಜೃಂಭಣೆ ಯಿಂದ ಜರುಗಿತು. ಸಂಕ್ರಾಂತಿ ಹಬ್ಬದಂದು ಮೊಲ ಬಿಡುವ ಸೇವೆಯಿಂದ ಆರಂಭವಾದ ಧಾರ್ಮಿಕ ಕೈಂಕರ್ಯಗಳಲ್ಲಿ ದಿನವೂ ವಿಶೇಷ ಅಭಿಷೇಕ ಮತ್ತು ಹಣ್ಣು ತುಪ್ಪ ಸೇವೆಗಳು ನಡೆದವು. ಬಳಿಕ ಶನಿವಾರ ರಾತ್ರಿ 10.30ಕ್ಕೆ ರಥೋತ್ಸವ ಜರುಗಿತು.ಬೆಳಗ್ಗೆಯಿಂದ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಸ್ವಾಮಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಬಿಡದಿ ಮನೆಗೆ ಕರೆತಂದು ಪ್ರತಿಷ್ಠಾಪಿಸಲಾಯಿತು. ರಾತ್ರಿ 8.30ಕ್ಕೆ ದೇವಾಲಯದಿಂದ ಶ್ರೀದೇವಿ ಮತ್ತು ಭೂದೇವಿ ಉತ್ಸವ ಮೂರ್ತಿಗಳನ್ನು ಬಿಡದಿಮನೆ ಸಮೀಪದ ಅರಳೀಕಟ್ಟೆಗೆ ಮೆರವಣಿಗೆಯಲ್ಲಿ ಕರೆತಂದು ರಂಗನಾಥಸ್ವಾಮಿಯೊಂದಿಗೆ ಕಲ್ಯಾಣೋತ್ಸವ ನೆರವೇರಿಸಲಾಯಿತು. ನಂತರ ಮೂರು ಮೂರ್ತಿಗಳನ್ನು ಬಿಡದಿ ಮನೆಗೆ ಕರೆತಂದು ಪೂಜೆ ಸಲ್ಲಿಸಲಾಯಿತು. ಅಲಂಕೃತಗೊಂಡ ಮಹಾರಥದಲ್ಲಿ ಶ್ರೀ ರಂಗನಾಥಸ್ವಾಮಿ ಮತ್ತು ಶ್ರೀ ದೇವಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷೆ ರಾಜಮ್ಮ ಮತ್ತು ಸದಸ್ಯರು, ಶಾಸಕ ತಮ್ಮಯ್ಯ, ಸಿ ಟಿ ರವಿ, ಎಸ್ ಎಲ್ . ಭೊಜೇಗೌಡ, ಹಾಸನ ಹಾಲು ಒಕ್ಕೂಟ ನಿರ್ದೇಶಕ ಎಸ್ ಡಿ ಸೋನಾಲ್‌ಗೌಡ, ಉಪ ವಿಭಾಗಾಧಿಕಾರಿ ಎನ್. ವಿ. ನಟೇಶ್, ತಹಸೀಲ್ದಾರ್ ಪೂರ್ಣೀಮಾ, ದೇವಾಲಯ ಸಮಿತಿ ಲೋಕೇಶ್, ಸಚ್ಚಿದಾನಂದ, ದೇವರಾಜು,ಪೊಲೀಸ್ ಇಲಾಖೆ ಡಿವೈಎಸ್ಪಿ ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಸೇರಿದಂತೆ ಕಂದಾಯ ಅಧಿಕಾರಿಗಳು, ಗ್ರಾಮಸ್ಥರು ರಥಕ್ಕೆ ಪೂಜೆ ಸಲ್ಲಿಸಿದರು.
ಆನಂತರ ಗೋವಿಂದನ ನಾಮಸ್ಮರಣೆಯೊಂದಿಗೆ ಭಕ್ತರು ಸ್ವಾಮಿ ತೇರು ಎಳೆದರು. ನೆರೆದಿದ್ದವರು ರಥಕ್ಕೆ ಬಾಳೇಹಣ್ಣು ಎಸೆದು ಇಷ್ಠಾರ್ಥಗಳ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವ ಬಳಿಕ ಭಕ್ತರು ಕೆಂಚರಾಯಸ್ವಾಮಿ ಸನ್ನಿಧಿಗೆ ತೆರಳಲು ಅಣಿಯಾಗುವ ಮೂಲಕ ಸ್ವಾಮಿ ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು. 18ಕೆಕೆಡಿಯು1.ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಶನಿವಾರ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವದಲ್ಲಿ ಪಾಲ್ಗಂಡಿದ್ದ ಭಕ್ತ ಸಮೂಹ.