ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರಿನ ದಿಂಗಾಲೇಶ್ವರ ಮಠ ಮತ್ತು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ಜೋಡಿ ರಥೋತ್ಸವಗಳು ನೆರವೇರಿದವು.
ಫಕೀರ ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ನೆರವೇರಿತು. ಸೇರಿದ್ದ ಅಪಾರ ಭಕ್ತರು ಭಕ್ತಿ- ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದರು. ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ದಿಂಗಾಲೇಶ್ವರ ಮಠದ ರಥೋತ್ಸವ ಏಕಕಾಲಕ್ಕೆ ಪ್ರಾರಂಭವಾಗಿ ಗ್ರಾಮದ ಮುಖ್ಯ ಸ್ಥಳದಲ್ಲಿ ಆಂಜನೇಯ ಮತ್ತು ದಿಂಗಾಲೇಶ್ವರ ಮಠದ ರಥಗಳು ಸೇರಿದ ಸಂದರ್ಭದಲ್ಲಿ ಭಕ್ತರ ಘೋಷಣೆಗಳು ಮುಗಿಲು ಮುಟ್ಟಿತ್ತು. ಬುಧವಾರ ಸಂಜೆ ಸಂಪ್ರದಾಯದಂತೆ ಕಡುಬಿನ ಕಾಳಗ ಕಾರ್ಯಕ್ರಮ ಸಾವಿರಾರು ಭಕ್ತರ ಜಯಘೋಷದ ನಡುವೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಫಕೀರ ದಿಂಗಾಲೇಶ್ವರ ಸ್ವಾಮಿಗಳು ಕುದುರೆ ಮೆಲೇರಿ ರಥ ಪ್ರದಕ್ಷಿಣೆ ಹಾಕುತ್ತಾ ಕಡುಬಿನ ಕಾಳಗವನ್ನು ಸಂಪ್ರದಾಯಿಕವಾಗಿ ನೆರವೇರಿಸಿದರು.ಹನುಮ ಜಯಂತಿ ಆಚರಣೆನರಗುಂದ: ಪಟ್ಟಣದ ಸೋಮಪೂರ ಓಣಿಯ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಗುರುವಾರ ಸಂಜೆ ಮಾರುತಿ ದೇವರ ಮೂರ್ತಿಗೆ ಎಲೆಪೂಜೆ ಅಭಿಷೇಕ ಹಾಗೂ ತೊಟ್ಟಿಲೋತ್ಸವ, ಪಾಲಕಿ ಉತ್ಸವನ್ನು ಸುಮಂಗಲೆಯರು ಆರತಿ ಬೆಳೆಗಿ ಅದ್ಧೂರಿಯಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಅಶ್ವಿನಿ ವೆಂಕರೆಡ್ಡಿ, ರೂಪಾ ಯಡ್ರಾವಿ, ಮಂಜುಳಾ ಪಾಟೀಲ, ಪ್ರೇಮಾ ತಿಗಡಿ, ಕವಿತಾ ಪಾಟೀಲ, ಅರ್ಚನಾ ವೆಂಕರೆಡ್ಡಿಯವರ, ಮಂಜುಳಾ ತಳವಾರ, ಗೌರಮ್ಮ ತಳವಾರ, ಬಸನಗೌಡ ಪಾಟೀಲ, ಶ್ರೀನಿವಾಸ ವೆಂಕರೆಡ್ಡಿ, ಶ್ರೀನಿವಾಸ ಕುರಹಟ್ಟಿ, ಮಹಾಂತೇಶ ಪಾಟೀಲ, ದೇವರೆಡ್ಡಿ ವೆಂಕರೆಡ್ಡಿ, ಹಣಮಂತ ರಾಮಣ್ಣವರ, ರವಿ ತಳವಾರ, ಕಿರಣ ಲಕ್ಷ್ಮೇಶ್ವರಮಠ, ಸಂಗಪ್ಪ ತಡಿಸಿ, ಜಗದೀಶ ಮೋಟೆ, ಈರಪ್ಪ ತಳವಾರ ಭರತ ಅಂಬಿಗೇರ, ಸೋಮಪುರ ಓಣಿಯ ಗುರು ಹಿರಿಯರು ಹಾಗೂ ಸಕಲ ಸದ್ಭಕ್ತರು ಭಾಗವಹಿಸಿದ್ದರು.