ಮನುಷ್ಯನ ಜೀವನ ಅನುಭವಗಳ ಪ್ರವಾಹ

| Published : Sep 16 2024, 01:51 AM IST

ಸಾರಾಂಶ

ಪ್ರತಿ ವಸ್ತು, ವ್ಯಕ್ತಿ, ವಿಷಯ, ವಿಚಾರ ಜೀವನದಲ್ಲಿ ಎದುರಾಗುವ ಪರಿಸ್ಥಿತಿ ಸಹ ನಾವೆಲ್ಲರೂ ಒಳ್ಳೆಯ ದೃಷ್ಟಿಯಿಂದ ನೋಡಬೇಕು

ಮುಳಗುಂದ: ಮನುಷ್ಯನ ಜೀವನ ಅನುಭವಗಳ ಪ್ರವಾಹ. ಒಮ್ಮೆ ಸುಖ ಒಮ್ಮೆ ದುಃಖ ಬರುತ್ತಿರುತ್ತದೆ. ಇದಕ್ಕೆ ಮೂಲ ಕಾರಣ ನಾವು ನೋಡುವ ದೃಷ್ಟಿಕೋನ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಬಸವೇಶ್ವರ ನಗರದ ನೂತನ ಮಾರುತಿ ದೇವಸ್ಥಾನ ಹಾಗೂ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ತಾವು ನೋಡುವ ದೃಷ್ಠಿಕೋನ ಬದಲಾಗಿರುತ್ತದೆ. ನಾವು ನೋಡುವ ದೃಷ್ಠಿಕೋನ ಆಶಾದಾಯಕವಾಗಿದ್ದು, ಆದರಿಂದಲೇ ದುಃಖ ಉಂಟಾಗುತ್ತದೆ. ಇಂತಹ ವ್ಯತ್ಯಾಸದಿಂದ ಜಗತ್ತಿನಲ್ಲಿ ಸುಖ ದುಃಖಗಳು ಬರುತ್ತವೆ. ಜಗತ್ತನ್ನು ಯಾರಿಂದಲೂ ಬದಲಿಸಲಾಗುವದಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾವು ಪ್ರಪಂಚವನ್ನು ಒಳ್ಳೆಯ ದೃಷ್ಟಿಕೋನದಿಂದ ಕಾಣಬೇಕು, ಪ್ರತಿ ವಸ್ತು, ವ್ಯಕ್ತಿ, ವಿಷಯ, ವಿಚಾರ ಜೀವನದಲ್ಲಿ ಎದುರಾಗುವ ಪರಿಸ್ಥಿತಿ ಸಹ ನಾವೆಲ್ಲರೂ ಒಳ್ಳೆಯ ದೃಷ್ಟಿಯಿಂದ ನೋಡಬೇಕು ಎಂದರು.

ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿ, ಅಣು ಅಣುವಿನಲ್ಲಿಯೂ ದೇವರಿದ್ದಾನೆ. ನಮ್ಮ ಭಾವನೆಗಳಲ್ಲಿ ಎಲ್ಲವೂ ಅಡಕವಾಗಿದೆ ಎಲ್ಲರೂ ಸೌಹಾರ್ಧತೆಯಿಂದ ಬಾಳಬೇಕು ಎಂದರು.

ಅಧ್ಯಕ್ಷತೆಯನ್ನು ಗುರಣ್ಣಾ ನೀಲಗುಂದ, ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಯುವ ಮುಖಂಡ ಶರಣು ಪಾಟೀಲ್, ಶಿವಣ್ಣಾ ನೀಲಗುಂದ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಹನುಮಂತಪ್ಪ ಬೀಡನಾಳ, ಕೃಷ್ಣಾ ಕುಷ್ಠಗಿ, ಬಿ.ಶರಣಪ್ಪ, ರಾಮಣ್ಣಾ ಕಮಾಜಿ, ಬಿ.ವಿ. ಸುಂಕಾಪೂರ, ಶಿವಣ್ಣಾ ಚರಾರಿ, ಮಹೇಶ ದೇಸಾಯಿ, ಪರಶುರಾಮ ವಂಟಕರ್, ಅಶೋಕ ಸೋನಗೋಜಿ, ಸಂಜಯ ನೀಲಗುಂದ, ಹೊನ್ನಪ್ಪ ನೀಲಗುಂದ, ಶಿದ್ದಪ್ಪ ಶಿರಹಟ್ಟಿ, ವೆಂಕಟೇಶ, ಅಶೋಕ ಹುಣಶಿಮರದ, ಲಿಂಗರಾಜ ಬಟ್ಟೂರ, ಜೈ ಮಾರುತಿ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.