ಸಾರಾಂಶ
ಅರಣ್ಯ ಇಲಾಖೆ ನೌಕರ, ಹುಣಸೂರು ತಾಲೂಕಿನ ಕಾರ್ತಿಕ್ (27) ಎಂಬವರೆ ನೀರಿನಲ್ಲಿ ಮುಳುಗಿ ಮೃತಪಟ್ಟವರು.
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಅರಣ್ಯ ಇಲಾಖೆಯ ನೌಕರನೊರ್ವ ನುಗು ಡ್ಯಾಮ್ ನ ಹಿನ್ನೀರಿನಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ಮೃತಪಟ್ಟಿದ್ದಾರೆ.ಅರಣ್ಯ ಇಲಾಖೆ ನೌಕರ, ಹುಣಸೂರು ತಾಲೂಕಿನ ಕಾರ್ತಿಕ್ (27) ಎಂಬವರೆ ನೀರಿನಲ್ಲಿ ಮುಳುಗಿ ಮೃತಪಟ್ಟವರು.
ಅಗ್ನಿಶಾಮಕ ಇಲಾಖೆ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿ ಶೋಧ ಕಾರ್ಯ ನಡೆಸಿ ಮೃತ ದೇಹವನ್ನು ಪತ್ತೆ ಮಾಡಿ ಹೊರ ತೆಗೆದು ಅರಣ್ಯ ಇಲಾಖೆ ಹಾಗೂ ಪೊಲೀಸರ ವಶಕ್ಕೆ ನೀಡಿದ್ದಾರೆ.ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಸೋಮಣ್ಣ, ಚಾಲಕರಾದ ದಿನೇಶ್, ಹೇಮಂತ್ ಅಗ್ನಿಶಾಮಕಕರಾದ ಅರುಣ್ ಕುಮಾರ್, ಮುನಿಸಿದ್ದ ನಾಯಕ, ಮಲ್ಲಿಕಾರ್ಜುನ, ಸಂಗಮೇಶ್ ಇದ್ದರು.