ಪಕ್ಷದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸುವರ್ಣ ಅವಕಾಶ

| Published : Sep 29 2024, 01:32 AM IST

ಪಕ್ಷದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸುವರ್ಣ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಮಾರಿಗುಡಿ ಮುಂಭಾಗದಿಂದ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾಯಕತ್ವ ಗುಣ ಬೆಳೆಸಿಕೊಂಡು ಪಕ್ಷದಲ್ಲಿ ಗುರುತಿಸಿಕೊಳ್ಳಲು ಬಿಜೆಪಿ ಸದಸ್ಯತ್ವ ಅಭಿಯಾನ ಉತ್ತಮ ವೇದಿಕೆಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.ಜಿಲ್ಲಾ ಬಿಜೆಪಿ ವತಿಯಿಂದ ನಗರದ ಮಾರಿಗುಡಿ ಮುಂಭಾಗದಿಂದ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಷ ನಮ್ಮನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಿದೆ. ಅಂತಹ ಪಕ್ಷ ಮತ್ತಷ್ಟು ಬೆಳೆಯಬೇಕು, ಸಂಘಟಿತರಾಗಬೇಕು ಎನ್ನುವ ಉದ್ದೇಶ ದೇಶಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. ಬಿಜೆಪಿ ಪಕ್ಷ ನೀಡಿರುವ ಗುರಿಯನ್ನು ಮುಟ್ಟಲು ಪ್ರತಿಯೊಬ್ಬ ಮುಖಂಡನು ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ದಿನಕ್ಕೆ ೨ ರಿಂದ ೩ ಗಂಟೆಗಳ ಕಾಲ ಪಕ್ಷಕ್ಕಾಗಿ ಮೀಸಲಿಟ್ಟು ಅಭಿಯಾನ ಯಶಸ್ವಿಗೊಳಿಸಬೇಕು ಎಂದರು. ಪಕ್ಷದಲ್ಲಿ ಗುರುತಿಸಿಕೊಂಡಾಗ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ, ನಾಯಕತ್ವ ಮತ್ತು ಗುರುತಿಸಿಕೊಳ್ಳಲು ಸದಸ್ಯತ್ವ ಅಭಿಯಾನ ಸುವರ್ಣಾವಕಾಶವಾಗಿದ್ದು, ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪಕ್ಷ ನಿಷ್ಠೆಯಿಂದ ಮಾಡಿದಾಗ ಪಕ್ಷ ಮತ್ತು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ನಾನು ಪಕ್ಷದಲ್ಲಿ ತಳಮಟ್ಟದಿಂದ ಪ್ರಾಮಾಣಿಕವಾಗಿ ದುಡಿದಿದ್ದರಿಂದ ಇಂದು ಕೇಂದ್ರದಲ್ಲಿ ಸಚಿವನಾಗಲು ಕಾರಣವಾಗಿದೆ, ಮುಂದೆ ಬರುವ ಸ್ಥಳೀಯ ಮತ್ತು ಜಿಪಂ, ತಾಪಂ ಚುನಾವಣೆಗಳಲ್ಲಿ ನೀವು ಗುರುತಿಸಿಕೊಂಡು, ನಿಮ್ಮ ವ್ಯಾಪ್ತಿಯ ನಾಯಕರಾಗಲು ಈ ಅವಕಾವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ಇಡೀ ಸಮಾಜಕ್ಕೆ ನಾವು ಗುರತಿಸಿಕೊಳ್ಳಲು ಪಕ್ಷ ನಮಗೆ ಅವಕಾಶ ಮಾಡಿಕೊಡುತ್ತದೆ, ಇದನ್ನರಿತು ಜವಾಬ್ದಾರಿಯಿಂದ ಅಭಿಯಾನವನ್ನು ಯಶಸ್ವಿಗೊಳಿಸಿ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮುಖಂಡರಾದ ಎಂ. ರಾಮಚಂದ್ರ, ನೂರೊಂದುಶೆಟ್ಟಿ, ನಾರಾಯಣಪ್ರಸಾದ್, ಜಯಚಂದ್ರ, ಮೂಡ್ನಾಕೂಡು ಪ್ರಕಾಶ್, ಕುಲಗಾಣ ಶಾಂತಮೂರ್ತಿ, ಚಂದ್ರಶೇಖರ್, ಸೂರ್ಯ, ಅನಂದ ಭಗೀರಥ, ಬಸವಣ್ಣ ಇತರರು ಇದ್ದರು.