ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಬ್‌ಕಾ ಸಾಥ್ ಸಬಕಾ ವಿಕಾಸ್ ನೀತಿಯಿಂದ ಆಡಳಿತ ನಡೆಸುತ್ತಿದ್ದರೆ, ರಾಜ್ಯದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯವಾಗಿರುವ ಸರ್ಕಾರವಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು. ಬಿಜೆಪಿ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ನಮ್ಮ ಹಕ್ಕಿಗಾಗಿ ನಮ್ಮ ನಡಿಗೆ ಹಕ್ಕೊತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಉಪ್ಪಿನಂಗಡಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಬ್‌ಕಾ ಸಾಥ್ ಸಬಕಾ ವಿಕಾಸ್ ನೀತಿಯಿಂದ ಆಡಳಿತ ನಡೆಸುತ್ತಿದ್ದರೆ, ರಾಜ್ಯದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯವಾಗಿರುವ ಸರ್ಕಾರವಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು. ಬಿಜೆಪಿ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ನಮ್ಮ ಹಕ್ಕಿಗಾಗಿ ನಮ್ಮ ನಡಿಗೆ ಹಕ್ಕೊತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ಜನವಿರೋಧಿ ನೀತಿಯಿಂದ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಕ್ಕೋಸ್ಕರ ಸ್ಟಿಂಗ್ ಅಪರೇಶನ್ ಮೂಲಕ ಒಬ್ಬರನ್ನೊಬ್ಬರು ಸಿಕ್ಕಿಸಿ ಹಾಕುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ನಾನು ಶಾಸಕನಾಗಿದ್ದ ಎರಡು ವರ್ಷದಲ್ಲಿ ಮಾಡಿದ ಅಭಿವೃದ್ಧಿಯನ್ನು ನಾನು ತೋರಿಸುತ್ತೇವೆ. ನಾಲ್ಕು ವರ್ಷದ ಅವಧಿಯಲ್ಲಿ ಈಗಿನ ಶಾಸಕರು ಮಾಡಿದ ಅಭಿವೃದ್ಧಿಯನ್ನು ಅವರು ತೋರಿಸಲಿ ಎಂದರು.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಮಾತನಾಡಿ, ಬೆಲೆಯೇರಿಕೆ, ಭ್ರಷ್ಟಾಚಾರವೇ ರಾಜ್ಯ ಸರ್ಕಾರದ ಕೊಡುಗೆ ಎಂದರು.ಉಪ್ಪಿನಂಗಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು ಪ್ರಾಸ್ತಾವಿಕವಾಗಿ ಮಾತನಾಡಿ, ಉಪ್ಪಿನಂಗಡಿ ದೇವಸ್ಥಾನದ ಬಳಿ ಅಭಿವೃದ್ಧಿಗೆ ೩೫೨ ಕೋ.ರೂ. ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಿ ಉಪ್ಪಿನಂಗಡಿಯನ್ನು ಸಿಂಗಾಪುರ ಮಾಡುತ್ತೇನೆ ಎಂದಿದ್ದ ಶಾಸಕ ರೈರವರ ದ್ವನಿ ಅಡಗಿದ್ದು ಯಾಕೆ ? ಸಂಜೀವ ಮಠಂದೂರು ಶಾಸಕರಾಗಿದ್ದ ಕಾಲದಲ್ಲಿ ೪,೭೦೦ಕ್ಕೂ ಅಧಿಕ ಮಂದಿಗೆ ಅಕ್ರಮ- ಸಕ್ರಮದಡಿ ಆರ್‌ಟಿಸಿ ನೀಡಲಾಗಿದೆ. ಈಗ ಎಷ್ಟು ನೀಡಲಾಗಿದೆ ಎಂದರು. ಹಕ್ಕೋತ್ತಾಯ ಸಭೆ: ಗಾಂಧಿಪಾರ್ಕ್‌ನಿಂದ ಮೆರವಣಿಗೆಯ ಮೂಲಕ ಉಪ್ಪಿನಂಗಡಿ ಬಸ್‌ನಿಲ್ದಾಣದ ಬಳಿ ಆಗಮಿಸಿ ಬಿಜೆಪಿ ಕಾರ್ಯಕರ್ತರು ಅಲ್ಲಿ ಹಕ್ಕೊತ್ತಾಯ ಸಭೆ ನಡೆಸಿದರು. ಮೆರವಣಿಗೆಗೆ ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಚೆನ್ನಯ್ಯ ಚಾಲನೆ ನೀಡಿದರು. ವೇದಿಕೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ನಾಗೇಶ್ ಪಿ.ಎಸ್., ಮೂಲ್ಕಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಸುನೀಲ್ ಆಳ್ವ, ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಪ್ರಸಾದ್ ಬಂಡಾರಿ, ಮೋಹನ್ ಪಕ್ಕಳ ಉಪಸ್ಥಿತರಿದ್ದರು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಲಕ್ಷ್ಮಣ ಬೆಳ್ಳಿಪ್ಪಾಡಿ, ಪುರುಷೋತ್ತಮ ಮುಂಗ್ಲಿಮನೆ, ಗೌರಿ ಬನ್ನೂರು, ರಾಮಚಂದ್ರ ಮಣಿಯಾಣಿ, ಮುಕುಂದ ಗೌಡ ಬಜತ್ತೂರು, ನವೀನ್ ಪದೆಬರಿ, ಗಂಗಾಧರ ಪಿ.ಎನ್., ಶೌಕತ್ ಅಲಿ, ಸದಾನಂದ ಶೆಟ್ಟಿ ಅಡೆಕ್ಕಲ್, ಉದಯ ಅತ್ರೆಮಜಲು, ರಾಮಚಂದ್ರ ಪೂಜಾರಿ, ನಿರಂಜನ್, ನಾಗೇಂದ್ರ, ಶಶಿಧರ ನಾಯ್ಕ, ಆದೇಶ್ ಶೆಟ್ಟಿ, ಸದಾನಂದ ಪೂಜಾರಿ, ಉಷಾ ಮುಳಿಯ, ದಯಾನಂದ ಸರೋಳಿ, ಶಿವಪ್ಪ ಪೆರ್ನೆ, ಜಯಂತ ಪೊರೋಳಿ, ಸುಜಾತಕೃಷ್ಣ ಆಚಾರ್ಯ, ತಿಮ್ಮಪ್ಪ ಇಳಂತಿಲ, ಸುರೇಶ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಶೇಖರ ಮಡಿವಾಳ ವಂದಿಸಿದರು. ಲೊಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.